ಚಿತ್ರ : ಕರಾವಳಿ
ನಿರ್ದೇಶಕ : ಗುರುದತ್ ಗಾಣಿಗ
ನಿರ್ಮಾಪಕರು : ವಿನೋದ್‌ಕುಮಾರ್, ಗುರುದತ್
ತಾರಾಗಣ : ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ, ಸಂಪದಾ, ರಮೇಶ್ ಇಂದಿರಾ, ಮಿತ್ರಾ, ಸುಶ್ಮಿತಾ ಭಟ್, ಗೋವಿಂದೇಗೌಡ ಇತರರು.
ಬಹುನಿರೀಕ್ಷಿತ ಕನ್ನಡ ಆಕ್ಷನ್ – ಡ್ರಾಮಾ ಚಿತ್ರ ‘ಕರಾವಳಿ’ ಜುಲೈ 24ರಂದು ರಾಜ್ಯಾದ್ಯಂತ ತೆರೆಕಂಡಿದ್ದು, ಮೊದಲ ದಿನವೇ ಸಿನಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ನಿರ್ದೇಶಕ ಗುರುದತ್ತ ಗಾಣಿಗ ನಿರ್ದೇಶಿಸಿರುವ ಈ ಚಿತ್ರವು ಕರಾವಳಿ ಭಾಗದ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳವನ್ನು ಕೇಂದ್ರವಾಗಿಟ್ಟುಕೊಂಡು ಸಂಸ್ಕೃತಿ, ಪರಂಪರೆ, ಸ್ನೇಹ, ಸೇಡು, ಅಧಿಕಾರದ ಸಂಘರ್ಷ ಹಾಗೂ ಪ್ರಕೃತಿ-ಮಾನವನ ಸಂಬಂಧವನ್ನು ಭಾವನಾತ್ಮಕವಾಗಿ ಕಟ್ಟಿಕೊಟ್ಟಿದೆ.
ವಿಶೇಷವಾಗಿ ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದ ಹಲವು ಚಿತ್ರಮಂದಿರಗಳಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವು ಕಡೆ ಮೊದಲ ದಿನದ ಪ್ರದರ್ಶನಗಳು ಹೌಸ್‌ಫುಲ್ ಆಗಿವೆ. ಕರಾವಳಿಯ ಜೀವನಶೈಲಿ ಮತ್ತು ಕಂಬಳದ ವೈಭವವನ್ನು ನೈಜವಾಗಿ ತೆರೆಗೆ ತಂದಿರುವುದಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಗದಗ: RDPR ವಿವಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು
ಕಂಬಳದ ವೈಭವಕ್ಕೆ ಜೀವ ತುಂಬಿದ ಸಿನಿಮಾ : ಚಿತ್ರದ ಪ್ರಮುಖ ಆಕರ್ಷಣೆಯೇ ಕಂಬಳ. ಶತಮಾನಗಳ ಇತಿಹಾಸ ಹೊಂದಿರುವ ಈ ಸಾಂಪ್ರದಾಯಿಕ ಕ್ರೀಡೆಯನ್ನು ಅದ್ದೂರಿಯಾಗಿ ಮತ್ತು ನೈಜವಾಗಿ ಚಿತ್ರಿಸಿರುವುದು ಚಿತ್ರದ ಬಲ. ಕಂಬಳದ ಸಿದ್ಧತೆ, ಗ್ರಾಮೀಣ ಆಚರಣೆಗಳು, ದೈವ ನಂಬಿಕೆಗಳು ಹಾಗೂ ಸ್ಪರ್ಧೆಯನ್ನು ನಿರ್ದೇಶಕರು ಪರಿಣಾಮಕಾರಿಯಾಗಿ ತೆರೆಗೆ ತಂದಿದ್ದಾರೆ.
ವಿಶೇಷವಾಗಿ ಇಂಟರ್ವಲ್ ಬ್ಲಾಕ್ ಹಾಗೂ ಕ್ಲೈಮ್ಯಾಕ್ಸ್ ದೃಶ್ಯಗಳು ಪ್ರೇಕ್ಷಕರಿಗೆ ರೋಮಾಂಚನ ಉಂಟು ಮಾಡುತ್ತಿದ್ದು, ಚಿತ್ರಮಂದಿರಗಳಲ್ಲಿ ಚಪ್ಪಾಳೆ ಮತ್ತು ಶಿಳ್ಳೆ ಸದ್ದು ಕೇಳಿಬರುತ್ತಿವೆ.
ಇದನ್ನೂ ಓದಿ: UGNEET: KEA ಮಹತ್ವದ ಪ್ರಕಟಣೆ – ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ರಾಜ್ ಬಿ. ಶೆಟ್ಟಿ ಅಭಿನಯಕ್ಕೆ ಭಾರೀ ಮೆಚ್ಚುಗೆ : ಚಿತ್ರದಲ್ಲಿನ ‘ಮಹಾವೀರ’ ಪಾತ್ರದಲ್ಲಿ ನಟಿಸಿರುವ ರಾಜ್ ಬಿ. ಶೆಟ್ಟಿ ಅವರ ಅಭಿನಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಹಲವು ಸಿನಿಪ್ರೇಕ್ಷಕರು, “ಚಿತ್ರಕ್ಕೆ ‘ಕರಾವಳಿ’ ಎನ್ನುವುದಕ್ಕಿಂತ ‘ಮಹಾವೀರ’ ಎನ್ನುವ ಹೆಸರೇ ಸೂಕ್ತವಾಗುತ್ತಿತ್ತು” ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಪಾತ್ರದ ಭಾವನಾತ್ಮಕತೆ, ತ್ಯಾಗ, ಸ್ನೇಹ ಮತ್ತು ಕಂಬಳದ ಮೇಲಿನ ಪ್ರೀತಿಯನ್ನು ರಾಜ್ ಬಿ. ಶೆಟ್ಟಿ ಅತ್ಯಂತ ಸಹಜವಾಗಿ ಮೂಡಿಸಿದ್ದಾರೆ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ನಕಲಿ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ
ಪ್ರಜ್ವಲ್ ದೇವರಾಜ್ ಆಕ್ಷನ್ ಮೋಡಿ : ಚಿತ್ರದ ನಾಯಕ ಪ್ರಜ್ವಲ್ ದೇವರಾಜ್ ರಗಡ್ ಲುಕ್‌ನಲ್ಲಿ ಗಮನ ಸೆಳೆದಿದ್ದಾರೆ. ಅವರ ಆಕ್ಷನ್ ದೃಶ್ಯಗಳು, ಕಂಬಳದ ಓಟದ ಸನ್ನಿವೇಶಗಳು ಹಾಗೂ ಭಾವನಾತ್ಮಕ ಅಭಿನಯ ಚಿತ್ರಕ್ಕೆ ಮತ್ತಷ್ಟು ಬಲ ತುಂಬಿವೆ. ಇತ್ತೀಚಿನ ಕೆಲವು ವಿವಾದಗಳ ನಡುವೆಯೂ ನಟನಾಗಿ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ತಾಂತ್ರಿಕವಾಗಿ ಶ್ರೀಮಂತ ಚಿತ್ರ : ಛಾಯಾಗ್ರಾಹಕ ಅಭಿಮನ್ಯು ಸದಾನಂದನ್ ಕರಾವಳಿಯ ಪ್ರಕೃತಿ ಸೌಂದರ್ಯ, ಹೊಲಗಳು, ಕಂಬಳ ಹಾಗೂ ಗ್ರಾಮೀಣ ಬದುಕನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಸಂಗೀತ ನಿರ್ದೇಶಕ ಸಚಿನ್ ಬಸ್ರೂರ್ ಹಿನ್ನೆಲೆ ಸಂಗೀತ (BGM) ಚಿತ್ರದ ಪ್ರತಿಯೊಂದು ಪ್ರಮುಖ ದೃಶ್ಯಕ್ಕೂ ಜೀವ ತುಂಬಿದ್ದು, ವಿಶೇಷವಾಗಿ ಕಂಬಳದ ದೃಶ್ಯಗಳಲ್ಲಿ ಸಂಗೀತ ಪ್ರೇಕ್ಷಕರನ್ನು ಕಥೆಯೊಳಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.






















