SK Home Ad
Home ನಮ್ಮ ಜಿಲ್ಲೆ ಗದಗ ಗೋಡಂಬಿ ಎಂದು ಔಡಲಬೀಜ ಸೇವಿಸಿ 25 ವಿದ್ಯಾರ್ಥಿಗಳು ಅಸ್ವಸ್ಥ

ಗೋಡಂಬಿ ಎಂದು ಔಡಲಬೀಜ ಸೇವಿಸಿ 25 ವಿದ್ಯಾರ್ಥಿಗಳು ಅಸ್ವಸ್ಥ

0
96

ಗದಗ: ಶಾಲಾ ಆಟದ ಸಮಯದಲ್ಲಿ ವಿಷಕಾರಿ ಔಡಲ ಬೀಜಗಳನ್ನು ಗೋಡಂಬಿ ಬೀಜವೆಂದು ಭಾವಿಸಿ ತಿಂದ ಪರಿಣಾಮ 25ಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಘಟನೆ ಗದಗ ತಾಲೂಕಿನ ಬೆಳದಡಿ ತಾಂಡಾದಲ್ಲಿ ಜರುಗಿದೆ.

ವಾಂತಿ, ಭೇದಿ, ತಲೆಸುತ್ತಿನಿಂದ ಬಳಲುತ್ತಿದ್ದ ಮಕ್ಕಳನ್ನು ತಕ್ಷಣವೇ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಾಲಾ ಆಟದ ಸಮಯದಲ್ಲಿ ಮಕ್ಕಳಿಬ್ಬರು ಮಾಡಿದ ಸಣ್ಣದೊಂದು ಯಡವಟ್ಟು ಈಗ ಆತಂಕ ತಂದಿಟ್ಟಿದೆ.

ಬೆಳದಡಿ ತಾಂಡಾದ ಸರ್ಕಾರಿ ಶಾಲೆಯ ಆಟದ ಅವಧಿಯಲ್ಲಿ 2, 3 ಮತ್ತು 4ನೇ ತರಗತಿಯ ಪುಟಾಣಿ ಮಕ್ಕಳು ಮೈದಾನದಲ್ಲಿ ಆಟವಾಡುತ್ತಿದ್ದರು. ಶಾಲೆಯ ಆವರಣದ ಪಕ್ಕದಲ್ಲೇ ಇದ್ದ ಗಿಡವೊಂದರಲ್ಲಿ ಬಿಟ್ಟಿದ್ದ ಕಾಯಿಗಳನ್ನು ಗಮನಿಸಿದ ಮಕ್ಕಳು, ಅವುಗಳನ್ನು ಗೋಡಂಬಿ ಬೀಜ ಎಂದು ಭಾವಿಸಿ ತಿಂದಿದ್ದಾರೆ.

ಇದು ಒಬ್ಬರಿಂದ ಒಬ್ಬರಿಗೆ ವಿಷಯ ಮುಟ್ಟಿ ಒಟ್ಟು 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆ ಬೀಜಗಳನ್ನು ಕಿತ್ತು ತಿಂದಿದ್ದಾರೆ. ಆದರೆ, ಆ ಮಕ್ಕಳು ತಿಂದಿದ್ದು ಗೋಡಂಬಿಯನ್ನಲ್ಲ, ಬದಲಿಗೆ ವಿಷಕಾರಿ ಅಂಶವಿರುವ ʻಔಡಲಕಾಯಿʼ ಎಂಬುದು ಬಳಿಕ ಬೆಳಕಿಗೆ ಬಂದಿದೆ. ಮಕ್ಕಳು ಆರೋಗ್ಯವಾಗಿದ್ದಾರೆ. ಯಾವದೇ ತೊಂದರೆಯಿಲ್ಲವೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.