ಬೆಳಗಾವಿ: ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದ ವಿವಾಹಿತೆಯನ್ನು ಓಡಿಸಿಕೊಂಡು ಹೋದ ಎಂಬ ಕಾರಣಕ್ಕೆ ಯುವಕನ ಮನೆ ಧ್ವಂಸ ಮಾಡಿದ್ದ ಪ್ರಕರಣದಲ್ಲಿ ಮೂವರು ಮುಖ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ನಾಗರಾಜ್ ನಾಯಕ, ರವಿ ಬೀಜಗತ್ತಿ, ಈಶ್ವರ ಮುಚ್ಚಂಡಿ ಎಂದು ಗುರುತಿಸಲಾಗಿದ್ದು, ಇವರನ್ನು ಬೆಳಗಾವಿಯ ಮಾರಿಹಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿವಾಹಿತೆ ನಾಗವ್ವ ಎಂಬಾಕೆಯನ್ನು ಓಡಿಸಿಕೊಂಡು ಹೋಗಿದ್ದ ಯಲ್ಲಪ್ಪ ನಾಯಕ್ ಮನೆ ಮೇಲೆ ದಾಳಿ ಮಾಡಿ ಮನೆ ಧ್ವಂಸ ಮಾಡಲಾಗಿತ್ತು. ಈ ಮೂವರು ಮುಖ್ಯ ಆರೋಪಿಗಳು ಸೇರಿ ಹಲವರ ವಿರುದ್ಧ ಯಲ್ಲಪ್ಪ ತಂದೆಯಿಂದ ದೂರು ನೀಡಿದ್ದರು.
ದೂರು ದಾಖಲಾಗುತ್ತಿದ್ದಂತೆ ಆರೋಪಿಗಳ ಬಂಧಿಸಲಾಗಿದೆ. ಮೂವರು ಆರೋಪಿಗಳು ನಾಗವ್ವ ಮತ್ತು ಪತಿ ಬಸಪ್ಪ ಸಂಬಂಧಿಕರು ಎಂದು ಗೊತ್ತಾಗಿದೆ.






















