ಶಿರಸಿ: ಗ್ರಾಮೀಣ ಭಾಗದ ಸರ್ಕಾರಿ ಹಾಸ್ಟಲ್‌ನಲ್ಲಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದ 9ನೇ ತರಗತಿಯ 15 ವರ್ಷದ ವಿದ್ಯಾರ್ಥಿನಿಯೋರ್ವಳಿಗೆ ಹಾಸ್ಟೆಲ್‌ನ ಶೌಚಾಲಯದಲ್ಲಿ ಹೆರಿಗೆಯಾದ ಘಟನೆ ತಾಲೂಕಿನ ಬಂಡಲ ಬಳಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಮಗುವಿಗೆ ಜನ್ಮನೀಡಿದ ಬಾಲಕಿ ಹೆದರಿ ನವಜಾತ ಹೆಣ್ಣು ಶಿಶುವನ್ನು ಶೌಚಾಲಯದ ಕಿಟಕಿಯಿಂದ ಎಸೆದಿದ್ದು, ಮಗು ಮೃತಪಟ್ಟಿದೆ. ಹಾಸ್ಟೆಲ್‌ನ ಶೌಚಾಲಯದಲ್ಲಿ ವಿದ್ಯಾರ್ಥಿನಿ ತಾನೇ ಹೆರಿಗೆ ಮಾಡಿಕೊಂಡಿದ್ದರಿಂದ ತೀವ್ರ ರಕ್ತಸ್ರಾವವಾಗಿದೆ.
ಘಟನೆ ತಿಳಿದು ಸ್ಥಳಕ್ಕೆ ಶಿರಸಿ ತಹಶೀಲ್ದಾರ್ ಪಟ್ಟರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ನಂತರ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಈ ಬಾಲಕಿಯಿಂದ ಪಡೆದ ಪ್ರಾಥಮಿಕ ಮಾಹಿತಿಯಲ್ಲಿ, ಬಾಲಕಿ ಅತ್ಯಾಚಾರಕ್ಕೆ ಒಳಗಾಗಿರುವ ಬಗ್ಗೆ ತಿಳಿದುಬಂದಿದೆ. ಈ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪೋಕ್ಸೋ ಪ್ರಕರಣದಡಿ ತನಿಖೆ ಕೈಗೊಳ್ಳಲಾಗಿದೆ.






















