SK Home Ad
Home ಕ್ರೀಡೆ ದಕ್ಷಿಣ ಆಫ್ರಿಕಾ ವಿರುದ್ಧ T20 ಸರಣಿಗೆ ಭಾರತ ಮಹಿಳಾ ತಂಡ ಪ್ರಕಟ

ದಕ್ಷಿಣ ಆಫ್ರಿಕಾ ವಿರುದ್ಧ T20 ಸರಣಿಗೆ ಭಾರತ ಮಹಿಳಾ ತಂಡ ಪ್ರಕಟ

0
283

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟಿ20ಐ ಸರಣಿಗಾಗಿ BCCI ಭಾರತ ಮಹಿಳಾ ತಂಡವನ್ನು ಪ್ರಕಟಿಸಿದ್ದು, ತಂಡದ ನಾಯಕತ್ವವನ್ನು ಹರ್ಮನ್‌ಪ್ರೀತ್ ಕೌರ್ ವಹಿಸಲಿದ್ದಾರೆ. ಉಪನಾಯಕಿಯಾಗಿ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ನೇಮಕವಾಗಿದ್ದಾರೆ.

ಏಪ್ರಿಲ್ 17ರಿಂದ ಆರಂಭವಾಗುವ ಈ ಸರಣಿ ಏಪ್ರಿಲ್ 27ರವರೆಗೆ ನಡೆಯಲಿದ್ದು, ದಕ್ಷಿಣ ಆಫ್ರಿಕಾ ಪ್ರವಾಸದ ಮೂಲಕ ಭಾರತ ಮಹಿಳಾ ತಂಡ ಟಿ20 ವಿಶ್ವಕಪ್‌ಗಿಂತ ಮುಂಚೆ ತನ್ನ ತಯಾರಿಯನ್ನು ಗಟ್ಟಿಗೊಳಿಸಲು ಸಜ್ಜಾಗಿದೆ.

ತಂಡದ ಪ್ರಮುಖ ಆಯ್ಕೆಗಳು: ತಂಡದಲ್ಲಿ ಅನುಭವಿ ಹಾಗೂ ಯುವ ಪ್ರತಿಭೆಗಳ ಸಂಯೋಜನೆ ಕಂಡುಬಂದಿದ್ದು, ಬ್ಯಾಟಿಂಗ್ ವಿಭಾಗದಲ್ಲಿ ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ ಮತ್ತು ವಿಕೆಟ್ ಕೀಪರ್ ರಿಚಾ ಘೋಷ್ ಪ್ರಮುಖ ಪಾತ್ರವಹಿಸಲಿದ್ದಾರೆ.

ಹೊಸ ಮುಖದ ಎಂಟ್ರಿ: ಮಹಿಳಾ ಪ್ರೀಮಿಯರ್ ಲೀಗ್ (WPL)ನಲ್ಲಿ ಗಮನಸೆಳೆದ ಯುವ ಆಟಗಾರ್ತಿ ಅನುಷ್ಕಾ ಶರ್ಮಾ ಅವರಿಗೆ ಇದೇ ಮೊದಲ ಬಾರಿ ರಾಷ್ಟ್ರೀಯ ತಂಡಕ್ಕೆ ಅವಕಾಶ ದೊರೆತಿದೆ. ಗುಜರಾತ್ ಜೈಂಟ್ಸ್ ಪರ ಉತ್ತಮ ಪ್ರದರ್ಶನ ನೀಡಿ ಅವರು ಆಯ್ಕೆ ಸಮಿತಿಯ ಗಮನ ಸೆಳೆದಿದ್ದರು.

ಬೌಲಿಂಗ್ ದಾಳಿ ಬಲಿಷ್ಠ : ವೇಗದ ಬೌಲಿಂಗ್‌ನಲ್ಲಿ ರೇಣುಕಾ ಠಾಕೂರ್, ಅರುಂಧತಿ ರೆಡ್ಡಿ ಹಾಗೂ ಸ್ಪಿನ್ ದಾಳಿಯಲ್ಲಿ ಶ್ರೇಯಾಂಕಾ ಪಾಟೀಲ್, ದೀಪ್ತಿ ಶರ್ಮಾ ಇದ್ದು ಈ ಸಮತೋಲನ ತಂಡವನ್ನು ಇನ್ನಷ್ಟು ಬಲಿಷ್ಠಗೊಳಿಸಿದೆ.

ಸರಣಿ ವೇಳಾಪಟ್ಟಿ : ಏಪ್ರಿಲ್ 17 & 19 – ಡರ್ಬನ್‌ನಲ್ಲಿ ನಡೆಯಲಿದ್ದು, ಏಪ್ರಿಲ್ 22 & 25 – ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿವೆ, ಏಪ್ರಿಲ್ 27 – ರಂದು ಅಂತಿಮ ಪಂದ್ಯ ಬೆನೋನಿಯಲ್ಲಿ ನಡೆಯಲಿದೆ.