SK Home Ad
Home ಕ್ರೀಡೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ Team India ಪ್ರಕಟ

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ Team India ಪ್ರಕಟ

0
56

ನವದೆಹಲಿ: ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಭಾರತ ತಂಡವನ್ನು ಪುರುಷರ ಆಯ್ಕೆ ಸಮಿತಿಯು ಭಾನುವಾರ ಪ್ರಕಟಿಸಿದೆ. ತಂಡದ ನಾಯಕನಾಗಿ ಶುಭಮನ್ ಗಿಲ್ ಅವರನ್ನು ನೇಮಕ ಮಾಡಲಾಗಿದ್ದು, ಉಪನಾಯಕನಾಗಿ ಶ್ರೇಯಸ್ ಅಯ್ಯರ್ ಆಯ್ಕೆಯಾಗಿದ್ದಾರೆ.

ತಂಡದಲ್ಲಿ ಹಿರಿಯ ಆಟಗಾರರಾದ ರೋಹಿತ್-ಕೊಹ್ಲಿ ಅವರಿಗೆ ಸ್ಥಾನ ನೀಡಲಾಗಿದೆ. ಆದರೆ ವಿರಾಟ್ ಕೊಹ್ಲಿಯವರ ಆಯ್ಕೆ ಫಿಟ್‌ನೆಸ್ ಕ್ಲಿಯರೆನ್ಸ್‌ಗೆ ಒಳಪಟ್ಟಿರುತ್ತದೆ ಎಂದು ತಿಳಿಸಲಾಗಿದೆ. ವಿಕೆಟ್ ಕೀಪರ್‌ಗಳಾಗಿ ಕೆ. ಎಲ್ ರಾಹುಲ್ ಮತ್ತು ಇಶಾನ್ ಕಿಶನ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಆಲ್‌ರೌಂಡರ್ ವಿಭಾಗದಲ್ಲಿ ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: NEET (UG) ಪ್ರಶ್ನೆ ಪತ್ರಿಕೆ ಸೋರಿಕೆ? Viral Video ನಕಲಿ: NTA ಸ್ಪಷ್ಟನೆ

ಬೌಲಿಂಗ್ ವಿಭಾಗದಲ್ಲಿ ಕುಲ್ದೀಪ್ ಯಾದವ್ ಮತ್ತು ಜಸ್ಪ್ರೀತ್ ಬೂಮ್ರಾ ಪ್ರಮುಖ ಆಕರ್ಷಣೆಯಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಈ ಸರಣಿ ಮುಂದಿನ ಪ್ರಮುಖ ಅಂತರರಾಷ್ಟ್ರೀಯ ಟೂರ್ನಿಗಳ ದೃಷ್ಟಿಯಿಂದ ಭಾರತ ತಂಡಕ್ಕೆ ಮಹತ್ವದ್ದಾಗಿದೆ.

ಸರಣಿಯ ವೇಳಾಪಟ್ಟಿ:
ಜುಲೈ 14, 2026: ಮೊದಲ ಏಕದಿನ ಪಂದ್ಯ – ಎಡ್ಜ್‌ಬಾಸ್ಟನ್ (ಮಧ್ಯಾಹ್ನ 3:30 IST)
ಜುಲೈ 16, 2026: ಎರಡನೇ ಏಕದಿನ ಪಂದ್ಯ – ಸೋಫಿಯಾ ಗಾರ್ಡನ್ಸ್ (ಸಂಜೆ 5:30 IST)
ಜುಲೈ 19, 2026: ಮೂರನೇ ಏಕದಿನ ಪಂದ್ಯ – ಲಾರ್ಡ್ಸ್ (ಮಧ್ಯಾಹ್ನ 3:30 IST)

ಇದನ್ನೂ ಓದಿ: Qatar LNGಯಲ್ಲಿ ಸ್ಫೋಟ: 54 ಮಂದಿಗೆ ಗಾಯ, 18 ಮಂದಿ ನಾಪತ್ತೆ

ಇದೇ ವೇಳೆ, ಟಾಟಾ ಐಪಿಎಲ್ 2026ರ ವೇಳೆ ಎಡಗಾಲಿಗೆ ಗಾಯಗೊಂಡಿರುವ ವರುಣ್ ಚಕ್ರವರ್ತಿ ಅವರು ಇನ್ನೂ ಪುನರ್ವಸತಿ ಪ್ರಕ್ರಿಯೆಯ ಅಂತಿಮ ಹಂತದಲ್ಲಿರುವ ಕಾರಣ, ಐರ್ಲೆಂಡ್ ವಿರುದ್ಧದ ಟಿ20 ಸರಣಿಯಿಂದ ಅವರನ್ನು ಹೊರಗಿಡಲಾಗಿದೆ ಎಂದು ತಿಳಿಸಲಾಗಿದೆ.