SK Home Ad
Home ಕ್ರೀಡೆ IND vs AFG Test: 564 ರನ್‌ಗಳಿಗೆ ಡಿಕ್ಲೇರ್‌ ಮಾಡಿಕೊಂಡ ಭಾರತ

IND vs AFG Test: 564 ರನ್‌ಗಳಿಗೆ ಡಿಕ್ಲೇರ್‌ ಮಾಡಿಕೊಂಡ ಭಾರತ

0
31

ಚಂಡೀಗಢ: ಅಫ್ಘಾನಿಸ್ತಾನ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್‌ ರನ್‌ ಕಲೆಹಾಕಿದ ಭಾರತ ತಂಡ ಡಿಕ್ಲೇರ್‌ ಮಾಡಿಕೊಂಡಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ನಾಯಕ ಶುಭಮನ್‌ ಗಿಲ್‌ ನೇತೃತ್ವದ ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್‌ಗಳಿಗೆ 564 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು.

ಮುಲ್ಲನ್​ಪುರ್​ನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲ ದಿನವೇ ಭಾರತ 3 ವಿಕೆಟ್‌ಗೆ 368 ರನ್‌ಗಳಿಸಿತ್ತು.

ಭಾನುವಾರ ಎರಡನೇ ದಿನದಾಟದ ಎರಡನೇ ಅವಧಿಯೊಳಗೆ ಕೇವಲ 196 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡಿತು. 103 ರನ್‌ಗಳಿಸಿ ಅಜೇಯರಾಗಿ ಉಳಿದಿದ್ದ ಶುಭಮನ್‌ ಗಿಲ್‌ ಭಾನುವಾರ 23 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು. ರಿಷಭ್‌ ಪಂತ್‌ ಕೂಡ ಇಂದು 31 ರನ್‌ಗಳು ಸೇರಿದಂತೆ ಒಟ್ಟು 81 ರನ್‌ಗಳಿಸಿ ಹೊರನಡೆದರು.

ವಾಷಿಂಗ್ಟನ್‌ ಸುಂದರ್‌ (52) ಅರ್ಧಶತಕ ಗಳಿಸಿ ಔಟಾದರು. ಉಳಿದಂತೆ ಧ್ರುವ್ ಜುರೆಲ್ (19), ಮಾನವ್ ಸುತಾರ್ (28) ಉಪಯುಕ್ತ ರನ್‌ ಕಾಣಿಕೆ ನೀಡಿದರು. ಕೊನೆಯಲ್ಲಿ ಮೊಹಮ್ಮದ್‌ ಸಿರಾಜ್‌ 22 ರನ್‌ಗಳಿಸಿ ಔಟಾಗುತ್ತಿದ್ದಂತೆ ನಾಯಕ ಗಿಲ್‌ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡರು.

ಅಫ್ಘಾನಿಸ್ತಾನ ಪರ ಮೊಹಮ್ಮದ್ ಸಲೀಮ್ ಸಫಿ 6 ವಿಕೆಟ್‌ ಉರುಳಿಸುವ ಮೂಲಕ ಭಾರತದ ರನ್‌ ವೇಗಕ್ಕೆ ಕಡಿವಾಣ ಹಾಕಿದ್ದು, ಬ್ಯಾಟ್ಸ್‌ಮನ್‌ಗಳಿಗೆ ಪೆವಿಲಿಯನ್‌ ತೋರಿಸುವಲ್ಲಿ ಯಶಸ್ಸು ಕಂಡರು.