SK Home Ad
Home ಕ್ರೀಡೆ RCB ಇವತ್ತಿನ ಮ್ಯಾಚ್‌ ಗೆದ್ರೆ ಸಾಕು ಬರೋಬ್ಬರಿ 4 ಲಾಭ; ಪಾಯಿಂಟ್ಸ್ ಟೇಬಲ್‌ ಟಾಪರ್ ಜೊತೆಗೆ...

RCB ಇವತ್ತಿನ ಮ್ಯಾಚ್‌ ಗೆದ್ರೆ ಸಾಕು ಬರೋಬ್ಬರಿ 4 ಲಾಭ; ಪಾಯಿಂಟ್ಸ್ ಟೇಬಲ್‌ ಟಾಪರ್ ಜೊತೆಗೆ ಡಬಲ್ ಧಮಾಕಾ!

0
197

ಐಪಿಎಲ್ 2026 ರ ಇಂದು ನಡೆಯಲಿರುವ ಪಂದ್ಯದಲ್ಲಿ ಗುಜುರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ರೋಚಕ ಪಂದ್ಯ ಇನ್ನೇನು ಕೆಲವೇ ಕ್ಷಣಗಳಲ್ಲಿ ಶುರುವಾಗಲಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಕದನ ನಡೆಯಲಿದ್ದು, ಶುಭಮನ್ ಗಿಲ್ ಪಡೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ. ರಜತ್ ಪಾಟೀದಾರ್ ನೇತೃತ್ವದ RCB ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರುವ ಗುರಿ ಹೊಂದಿದೆ.

RCB ಪ್ರಸ್ತುತ ಅದ್ಭುತ ಫಾರ್ಮ್ನಲ್ಲಿದೆ. ಕಳೆದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಹಾಗೂ ಜೋಶ್ ಹ್ಯಾಜಲ್ವುಡ್ ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿದ್ದ ಡೆಲ್ಲಿ ಕೇವಲ 75 ರನ್ಗಳಿಗೆ ಆಲೌಟ್ ಆಗಿತ್ತು. ಆ ಪಂದ್ಯವನ್ನು 9 ವಿಕೆಟ್ಗಳಿಂದ ಗೆದ್ದಿದ್ದ RCB, 8 ಪಂದ್ಯಗಳಿಂದ 6 ಜಯ ಸಾಧಿಸಿ 2ನೇ ಸ್ಥಾನದಲ್ಲಿದೆ. ಇಂದು ಗೆದ್ದರೆ ಪಂಜಾಬ್ ಕಿಂಗ್ಸ್ ತಂಡವನ್ನು ಹಿಂದಿಕ್ಕಿ ನಂಬರ್ 1ನೇ ಸ್ಥಾನಕ್ಕೇರಲಿದೆ. ಇಂದಿನ ಪಂದ್ಯದಲ್ಲಿ RCB ಟಾಸ್ ಗೆದ್ದರೆ ಪಂದ್ಯ ಗೆಲ್ಲುವ ನಿರೀಕ್ಷೆಯಿದೆ.

ವಿರಾಟ್ ಕೊಹ್ಲಿ ವಿಶ್ವದಾಖಲೆ ಬರೆಯುವ ಅಂಚಿನಲ್ಲಿದ್ದಾರೆ. ಅಮೋಘ ಫಾರ್ಮ್‌ನಲ್ಲಿರುವ ಕೊಹ್ಲಿ, ಈ ಪಂದ್ಯದಲ್ಲಿ ಶತಕ ಗಳಿಸಿದರೆ 14,000 ಟಿ20 ರನ್‌ಗಳನ್ನು ಪೂರೈಸಿ ಕ್ರಿಸ್ ಗೇಲ್ ದಾಖಲೆ ಮುರಿಯಲಿದ್ದಾರೆ. ಅಲ್ಲದೆ, ಟಿ20ಯಲ್ಲಿ 10 ಶತಕ ಗಳಿಸಿದ ಮೊದಲ ಭಾರತೀಯ ಮತ್ತು 450 ಸಿಕ್ಸರ್‌ಗಳನ್ನು ಪೂರೈಸುವ ಅವಕಾಶವಿದೆ. ಅಷ್ಟೇ ಅಲ್ಲ, ಕೊಹ್ಲಿ ಶತಕ ಬಾರಿಸಿದರೆ, ಗುಜರಾತ್ ವಿರುದ್ಧ 500 ರನ್​ಗಳನ್ನು ಸಹ ಪೂರೈಸಲಿದ್ದಾರೆ. ಹಾಗೆಯೇ ಟಿ20 ಕ್ರಿಕೆಟ್‌ನಲ್ಲಿ 10 ಶತಕಗಳನ್ನು ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗುತ್ತಾರೆ. ಈ ಇನ್ನಿಂಗ್ಸ್‌ನಲ್ಲಿ ಅವರು ಒಂದೇ ಒಂದು ಸಿಕ್ಸ್ ಬಾರಿಸಿದರೆ, ಈ ಸ್ವರೂಪದಲ್ಲಿ ಒಟ್ಟು 450 ಸಿಕ್ಸರ್​ಗಳನ್ನು ಪೂರೈಸಲಿದ್ದಾರೆ.