Home Advertisement
Home ಸುದ್ದಿ ದೇಶ ಅಳಿವಿನಂಚಿನ ‘ನವಿಲು ಟರಂಟುಲಾ’ ಸಂರಕ್ಷಣೆಗೆ ಸಮೀಕ್ಷೆ ಆರಂಭ

ಅಳಿವಿನಂಚಿನ ‘ನವಿಲು ಟರಂಟುಲಾ’ ಸಂರಕ್ಷಣೆಗೆ ಸಮೀಕ್ಷೆ ಆರಂಭ

0
79

ಪೂರ್ವ ಘಟ್ಟಗಳ ಜೀವ ವೈವಿಧ್ಯದಲ್ಲಿ ವಿಶೇಷ ಸ್ಥಾನ ಹೊಂದಿರುವ ಅಪರೂಪದ ಜಾತಿಯಾದ Peacock Tarantula (ನವಿಲು ಟರಂಟುಲಾ) ಸಂರಕ್ಷಣೆಗೆ ಮಹತ್ವದ ಹೆಜ್ಜೆಯಾಗಿ, ನಾಗಾರ್ಜುನಸಾಗರ್–ಶ್ರೀಶೈಲಂ ಹುಲಿ ಮೀಸಲು ಪ್ರದೇಶದಲ್ಲಿ ಸಮಗ್ರ ಸಮೀಕ್ಷೆ ಆರಂಭಿಸಲಾಗಿದೆ.

ಈ ಜೇಡಕ್ಕೆ ಸಾಮಾನ್ಯವಾಗಿ ಇದನ್ನು “ನೀಲಿ ಬಣ್ಣದ ಟಾರಂಟುಲಾ” (Blue Tarantula) ಎಂದು ಕರೆಯುತ್ತಾರೆ. ಇದು ಆಂಧ್ರಪ್ರದೇಶದ ‘ಗುಟಿ’ ಎಂಬಲ್ಲಿ ಮೊದಲು ಪತ್ತೆಯಾದ ಕಾರಣ ಈ ಹೆಸರು ಬಂದಿದೆ. ಇದರ ಮೈಮೇಲಿನ ಬಣ್ಣಗಳು ನವಿಲಿನಂತೆ ಕಂಗೊಳಿಸುವುದರಿಂದ ಈ ಹೆಸರು ಬಂದಿದೆ. ಇದು ಪ್ರಪಂಚದ ಅತ್ಯಂತ ಸುಂದರವಾದ ಮತ್ತು ಅಪರೂಪದ ಜೇಡಗಳಲ್ಲಿ ಒಂದಾಗಿದೆ.

ಅಳಿವಿನಂಚಿನಲ್ಲಿರುವ ಅಪರೂಪದ ಜಾತಿ : ನವಿಲು ಟರಂಟುಲಾ ಪೂರ್ವ ಘಟ್ಟಗಳ ಸೀಮಿತ ಪ್ರದೇಶಗಳಿಗೆ ಮಾತ್ರ ಸ್ಥಳೀಯವಾಗಿರುವ ಅತ್ಯಂತ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಜಾತಿಯಾಗಿದೆ. ಇದರ ವೈಶಿಷ್ಟ್ಯಪೂರ್ಣ ನೀಲಿ ಬಣ್ಣ ಮತ್ತು ಅಪರೂಪದ ವಾಸಸ್ಥಳದ ಕಾರಣದಿಂದ ಇದು ವಿಶ್ವದ ಗಮನ ಸೆಳೆದಿದೆ. ಆದರೆ, ಅರಣ್ಯ ನಾಶ, ವಾಸಸ್ಥಳ ಕಳೆತ ಮತ್ತು ಮಾನವ ಚಟುವಟಿಕೆಗಳಿಂದಾಗಿ ಈ ಪ್ರಭೇದವು ಗಂಭೀರ ಅಪಾಯದಲ್ಲಿದೆ.

ಸಮೀಕ್ಷೆಯ ಉದ್ದೇಶ: ನಾಗಾರ್ಜುನಸಾಗರ್ ಶ್ರೀಶೈಲಂ ಹುಲಿ ಮೀಸಲು ಪ್ರದೇಶದಲ್ಲಿ ಪ್ರದೇಶದಲ್ಲಿ ನಡೆಯುತ್ತಿರುವ ಈ ಸಮೀಕ್ಷೆಯ ಮುಖ್ಯ ಉದ್ದೇಶ ಪ್ರಭೇದದ ನಿಖರ ಜನಸಂಖ್ಯೆ ಅಂದಾಜು ಮಾಡುವುದು, ವಾಸಸ್ಥಳದ ಸ್ಥಿತಿ ಪರಿಶೀಲನೆ, ಅಪಾಯಕಾರಕ ಅಂಶಗಳನ್ನು ಗುರುತಿಸುವುದು ಅಲ್ಲದೆ ದೀರ್ಘಕಾಲೀನ ಸಂರಕ್ಷಣಾ ಯೋಜನೆ ರೂಪಿಸುವುದು ಮತ್ತು ಪರಿಸರ ಸಮತೋಲನಕ್ಕೆ ಮಹತ್ವ ನೀಡುವದಾಗಿದೆ.

ನವಿಲು ಟರಂಟುಲಾ ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುವ ಜಾತಿಯಾಗಿದೆ. ಇಂತಹ ಅಪರೂಪದ ಜೀವಿಗಳು ಪರಿಸರ ಆರೋಗ್ಯದ ಸೂಚಕಗಳಾಗಿದ್ದು, ಅವುಗಳ ರಕ್ಷಣೆ ಜೀವ ವೈವಿಧ್ಯ ಸಂರಕ್ಷಣೆಗೆ ಅತ್ಯಗತ್ಯ.

ಸಂರಕ್ಷಣೆಗೆ ತುರ್ತು ಕ್ರಮ ಅಗತ್ಯ: ತಜ್ಞರ ಪ್ರಕಾರ, ಈ ಜಾತಿಯನ್ನು ಉಳಿಸಲು ತಕ್ಷಣದ ಕ್ರಮಗಳು ಅಗತ್ಯವಿದೆ. ಕಾನೂನುಬದ್ಧ ರಕ್ಷಣೆಯ ಜೊತೆಗೆ ಸ್ಥಳೀಯ ಸಮುದಾಯಗಳ ಸಹಕಾರವೂ ಮುಖ್ಯವಾಗುತ್ತದೆ.

ಜಾಗೃತಿ ಮತ್ತು ಸಂಶೋಧನೆಗೆ ಉತ್ತೇಜನ : ಈ ಸಮೀಕ್ಷೆ ಕೇವಲ ಸಂರಕ್ಷಣೆಯಷ್ಟೇ ಅಲ್ಲ, ಸಂಶೋಧನೆ ಮತ್ತು ಜಾಗೃತಿ ಮೂಡಿಸುವತ್ತವೂ ಮಹತ್ವದ ಹೆಜ್ಜೆಯಾಗಲಿದೆ. ಇದರ ಮೂಲಕ ಅಪರೂಪದ ಜೀವಿಗಳನ್ನು ಉಳಿಸುವ ಕುರಿತು ಹೆಚ್ಚು ಗಮನ ಸೆಳೆಯುವ ನಿರೀಕ್ಷೆಯಿದೆ.