SK Home Ad
Home ತಾಜಾ ಸುದ್ದಿ ಮುಡಾ ಪ್ರಕರಣ: ನಿವೇಶನ ಪಡೆದವರ ಮಾಹಿತಿ ಬಹಿರಂಗಕ್ಕೆ ಆಗ್ರಹ

ಮುಡಾ ಪ್ರಕರಣ: ನಿವೇಶನ ಪಡೆದವರ ಮಾಹಿತಿ ಬಹಿರಂಗಕ್ಕೆ ಆಗ್ರಹ

0
159
ಯತ್ನಾಳ

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನ ಪಡೆದವರ ಮಾಹಿತಿ ಬಹಿರಂಗಪಡಿಸಲು ಸರ್ಕಾರಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಬಡವರಿಗಾಗಿ ಮೀಸಲಿಟ್ಟಿದ್ದ ನಿವೇಶನಗಳನ್ನು ಮುಖ್ಯಮಂತ್ರಿ ಸೇರಿ, ರಾಜಕಾರಣಿಗಳು , ಐಎಎಸ್ ಅಧಿಕಾರಿಗಳು ಹರಿದು ಹಂಚಿ ತಿಂದಿದ್ದರೆ.
ಮೈಸೂರು ಜಿಲ್ಲೆಯಲ್ಲಿ “ಈ ಪ್ರಭಾವಿತರೇ” ಜಾಗವನ್ನು ಸರ್ಕಾರದ ಮೂಲಕ ಅಧಿಸೂಚನೆ ಮಾಡಿಸಿ, ಮೈಸೂರು ನಗರದ ಪ್ರತಿಷ್ಠಿತ ಕಾಲೋನಿಗಳಲ್ಲಿ ಜಾಗವನ್ನು ಲೂಟಿ ಮಾಡಿದ್ದಾರೆ. ಕೆಲವರು ನೂರಾರು ನಿವೇಶನಗಳನ್ನು ತೆಗೆದುಕೊಂಡಿದ್ದಾರೆ. ನಿವೇಶನ ಪಡೆದವರೆಲ್ಲರ ಮಾಹಿತಿಯನ್ನು ಸರ್ಕಾರ ಬಹಿರಂಗಪಡಿಸಲು ಆಗ್ರಹಿಸುತ್ತಿದ್ದೇನೆ ಎಂದಿದ್ದಾರೆ