SK Home Ad
Home ತಾಜಾ ಸುದ್ದಿ ಜಮೀರ್ ವಕ್ಫ್ ಆಸ್ತಿ ವಿಚಾರದಲ್ಲಿ ನಿರ್ಧಾರ ಮಾಡುವಾಗ ಉಳಿದ ಸಚಿವರು ಕತ್ತೆ ಕಾಯುತ್ತಿದ್ದರಾ

ಜಮೀರ್ ವಕ್ಫ್ ಆಸ್ತಿ ವಿಚಾರದಲ್ಲಿ ನಿರ್ಧಾರ ಮಾಡುವಾಗ ಉಳಿದ ಸಚಿವರು ಕತ್ತೆ ಕಾಯುತ್ತಿದ್ದರಾ

0
274
File Photo

ಹಾವೇರಿ(ಶಿಗ್ಗಾವಿ): ವಕ್ಫ್ ಸಚಿವ ಜಮೀರ್ ಅಹಮದ್ ವಕ್ಫ್ ಆಸ್ತಿ ವಿಚಾರದಲ್ಲಿ ನಿರ್ಧಾರ ಮಾಡುವಾಗ ಉಳಿದ ಸಚಿವರೆಲ್ಲಾ ಕತ್ತೆ ಕಾಯುತ್ತಿದ್ದರಾ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಪ್ರಶ್ನಿಸಿದ್ದಾರೆ.
ಅವರು ಶಿಗ್ಗಾವಿ ಹಾಗೂ ಸವಣೂರಿನಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರವಾಗಿ ರೋಡ್ ಶೋ ನಡೆಸಿ ಸಮಾವೇಶ ಉದ್ದೇಶಿಸಿ ಮಾತನಾಡಿದರು.
ಅಧಿಕಾರಿಗಳ ಮೇಲೆ ಒತ್ತಡ ಕಿರುಕುಳ ಹೆಚ್ಚಾಗಿದೆ. ಇವರು ವಾಲ್ಮೀಕಿ ಹಗರಣ ಮಾಡಿದ್ದಕ್ಕೆ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ. ಈಗ ಮತ್ತೊಬ್ಬ ಅಧಿಕಾರಿ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಿನಬೆಳಗಾದರೆ ಸಚಿವರು ಲೂಟಿ ಮಾಡುತ್ತಿದ್ದಾರೆ. ಇವರು ಲೂಟಿ ಮಾಡುತ್ತಿರುವುದರಿಂದ ಅಧಿಕಾರಿಗಳು ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದಲ್ಲಿ ತುಘಲಕ್ ಜಮೀರ್‌ಗೆ ಎಲ್ಲ ಸರ್ವಾಧಿಕಾರ ನೀಡಿದ್ದಾರೆ. ತುಘಲಕ್ ಜಮೀರ್ ಸರ್ವಾಧಿಕಾರಿ ಥರ ವಕ್ಫ್ ಆಸ್ತಿ ಬಗ್ಗೆ ನಿರ್ಧಾರ ಮಾಡುವಾಗ ಉಳಿದ ಸಚಿವರೆಲ್ಲ ಕತ್ತೆ ಕಾಯುತ್ತಿದ್ದರಾ ಎಂದು ಪ್ರಶ್ನಿಸಿದರು.
ವಾಲ್ಮೀಕಿ ನಿಗಮದ ಹಣವನ್ನು ರಾಜಾರೋಷವಾಗಿ ಲೂಟಿ ಮಾಡಿದ್ದಾರೆ. ವಾಲ್ಮೀಕಿ ನಿಗಮದ ಹಣ ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಕೆ ಮಾಡಿದ್ದಾರೆ. ವಾಲ್ಮೀಕಿ ಹಣ ಲೂಟಿ ಹೊಡೆಯುವಾಗ ಸರ್ಕಾರದಲ್ಲಿರುವ ಸಚಿವರು ಕತ್ತೆ ಕಾಯುತ್ತಿದ್ದರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.