SK Home Ad
Home ಸುದ್ದಿ ದೇಶ ಕನ್ನಡತಿ ಶ್ರದ್ಧಾಗೆ “ಮೋಸ್ಟ್‌ ಕ್ರಿಯೇಟಿವ್‌ ಕ್ರಿಯೇಟರ್” ಪುರಸ್ಕಾರ

ಕನ್ನಡತಿ ಶ್ರದ್ಧಾಗೆ “ಮೋಸ್ಟ್‌ ಕ್ರಿಯೇಟಿವ್‌ ಕ್ರಿಯೇಟರ್” ಪುರಸ್ಕಾರ

0
146

ಉಡುಪಿ ಜಿಲ್ಲೆಯ ನಮ್ಮ ಕಾರ್ಕಳ ತಾಲೂಕಿನ ಹೆಮ್ಮೆಯ ಕಲಾವಿದೆ ಅಯ್ಯೋ ಶ್ರದ್ಧಾ ಖ್ಯಾತಿಯ ಶ್ರದ್ಧಾ ಅವರು ಮಹಿಳಾ ವಿಭಾಗದಲ್ಲಿ ‘ಮೋಸ್ಟ್‌ ಕ್ರಿಯೇಟಿವ್‌ ಕ್ರಿಯೇಟರ್’ ಪ್ರಶಸ್ತಿಗೆ ಭಾಜನರಾಗಿ ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಕನ್ನಡತಿ ಶ್ರದ್ಧಾ ಜೈನ್, ಯೂಟ್ಯೂಬ್‌ನಲ್ಲಿ ‘ಅಯ್ಯೋ ಶ್ರದ್ಧಾ’ ಚಾನೆಲ್‌ನಲ್ಲಿ ಇಂಗ್ಲೀಷ್, ಕನ್ನಡ ಭಾಷೆಗಳನ್ನು ಬಳಿಸಿ ಕಾಮಿಡಿ ಮೂಲಕ ಸಾಮಾಜಿಕ ವಿಷಯಗಳು, ಮಧ್ಯಮ ವರ್ಗದ ಸಮಸ್ಯೆಗಳನ್ನು ಮನಮುಟ್ಟುವಂತೆ ಮಾಡುತ್ತಿದ್ದರು. ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಾವರಿಂದ ಅತ್ಯುತ್ತಮ ಕ್ರಿಯಾಶೀಲ ಕಂಟೆಂಟ್ ಕ್ರಿಯೇಟರ್ ಪ್ರಶಸ್ತಿಯನ್ನು ಕನ್ನಡತಿ ಶ್ರದ್ಧಾ ಪಡೆದುಕೊಂಡಿದ್ದಾರೆ. ಪ್ರಶಸ್ತಿ ಸ್ವೀಕರಿಸುವ ವೇಳೆ ಮಾತನಾಡಿದ ಶ್ರದ್ಧಾ, “ಎಷ್ಟೇ ಒತ್ತಡದ ಪರಿಸ್ಥಿತಿ ಇದ್ದರೂ, ನಾವು ಭಾರತೀಯರು ನಗುವ ಮಾರ್ಗವನ್ನು ಕಂಡುಕೊಳ್ಳುತ್ತಲೇ ಇರುತ್ತೇವೆ’ ಎಂದು ಹೇಳಿದರು.