SK Home Ad
Home ಸುದ್ದಿ ರಾಜ್ಯ ದೆಹಲಿಯಲ್ಲಿ ಕಾರುಗಳ ಡಿಕ್ಕಿ: ಶಾಸಕರಾದ ಅಭಯ ಪಾಟೀಲ, ಅನಿಲ್ ಝಾಗೆ ಗಾಯ

ದೆಹಲಿಯಲ್ಲಿ ಕಾರುಗಳ ಡಿಕ್ಕಿ: ಶಾಸಕರಾದ ಅಭಯ ಪಾಟೀಲ, ಅನಿಲ್ ಝಾಗೆ ಗಾಯ

0
15

ನವದೆಹಲಿ: ದೆಹಲಿಯ ಐಟಿಒ ಪ್ರದೇಶದ ಬಳಿ ಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಕರ್ನಾಟಕದ ಶಾಸಕ ಅಭಯ ಪಾಟೀಲ ಹಾಗೂ ಕಿರಾರಿ ಶಾಸಕ ಅನಿಲ್ ಝಾ ಸೇರಿದಂತೆ ಹಲವರು ಸಣ್ಣಪುಟ್ಟ ಗಾಯಗೊಂಡಿದ್ದಾರೆ.

ಶಾಸಕರು ಪ್ರಯಾಣಿಸುತ್ತಿದ್ದ ವಾಹನ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಆ ಕಾರಿನಲ್ಲಿ ವ್ಯಕ್ತಿಯೊಬ್ಬರು ತಮ್ಮ ಪತ್ನಿ ಹಾಗೂ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದರು.

ಅಪಘಾತದ ಬಳಿಕ ಎರಡೂ ವಾಹನಗಳಲ್ಲಿದ್ದವರನ್ನು ಚಿಕಿತ್ಸೆಗಾಗಿ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದ ವಾಹನಗಳನ್ನು ತೆರವುಗೊಳಿಸಿದರು.