Home Advertisement
Home ಸುದ್ದಿ ದೇಶ ತೂತುಕುಡಿಯಲ್ಲಿ 12,000 ವರ್ಷ ಹಳೆಯ ಪಳೆಯುಳಿಕೆ ಪತ್ತೆ

ತೂತುಕುಡಿಯಲ್ಲಿ 12,000 ವರ್ಷ ಹಳೆಯ ಪಳೆಯುಳಿಕೆ ಪತ್ತೆ

0
123

ತಮಿಳುನಾಡು: ದಕ್ಷಿಣ ಭಾರತದ ಇತಿಹಾಸದಲ್ಲಿ ಮಹತ್ವದ ವೈಜ್ಞಾನಿಕ ಬೆಳವಣಿಗೆ ಬೆಳಕಿಗೆ ಬಂದಿದೆ. ತೂತುಕುಡಿ ಜಿಲ್ಲೆಯ ಪನೈಯೂರು ಪ್ರದೇಶದಲ್ಲಿ ಸುಮಾರು 8,000 ರಿಂದ 12,000 ವರ್ಷಗಳಷ್ಟು ಹಳೆಯ ಪಳೆಯುಳಿಕೆ ತಾಣ (Fossil Bed) ಪತ್ತೆಯಾಗಿದೆ. ಈ ತಾಣವು ಹೊಲೊಸೀನ್ ಯುಗಕ್ಕೆ ಸೇರಿದೆ ಎಂದು ವಿಜ್ಞಾನಿಗಳು ದೃಢಪಡಿಸಿದ್ದಾರೆ.

ಈ ಕುರಿತಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಇಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಈ ಆವಿಷ್ಕಾರವು ಭಾರತದ ಕ್ವಾಟರ್ನರಿ ಪಳೆಯುಳಿಕೆ ದಾಖಲೆಯನ್ನು ಗಮನಾರ್ಹವಾಗಿ ಶ್ರೀಮಂತಗೊಳಿಸುತ್ತದೆ ಎಂದು ಹೇಳಿದ್ದಾರೆ.

ಹೇಗೆ ಪತ್ತೆಯಾಯಿತು? : 2023ರಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮಣ್ಣು ಕೊಚ್ಚಿಹೋಗಿ, ಭೂಗರ್ಭದಲ್ಲಿ ಹೂತುಹೋಗಿದ್ದ ಪಳೆಯುಳಿಕೆಗಳು ಹೊರಬಂದವು. ಸ್ಥಳೀಯ ಆಡಳಿತದ ಮನವಿಯ ಮೇರೆಗೆ ಭಾರತೀಯ ಪ್ರಾಣಿಶಾಸ್ತ್ರ ಸಮೀಕ್ಷೆ (ZSI) ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಪತ್ತೆಯ ವೈಜ್ಞಾನಿಕ ಮಹತ್ವವನ್ನು ದೃಢಪಡಿಸಿದೆ.

ಏಕೆ ಈ ಸಂಶೋಧನೆ ಮುಖ್ಯ? : ಈ ಪಳೆಯುಳಿಕೆ ತಾಣವು ಭಾರತದ ಪ್ರಾಚೀನ ಪರಿಸರದ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಲಿದೆ. ಪ್ರಾಚೀನ ವನ್ಯಜೀವಿಗಳ ಸ್ಥಿತಿ, ಹವಾಮಾನ ಬದಲಾವಣೆಗಳ ಇತಿಹಾಸ, ಪರಿಸರದ ರೂಪಾಂತರಗಳು ಮಾನವ ಬದುಕಿನ ಪ್ರಾರಂಭಿಕ ಹಂತಗಳ ಬಗ್ಗೆ ಸೂಚನೆ. ವಿಜ್ಞಾನಿಗಳಿಗೆ ಇದು ಹವಾಮಾನ ಮತ್ತು ಜೀವ ವೈವಿಧ್ಯದ ಹಳೆಯ ಚಿತ್ರಣವನ್ನು ಅರಿಯಲು ಸಹಾಯಕವಾಗಲಿದೆ.

ತೂತುಕುಡಿಯ ವಿಶೇಷತೆ : ತೂತುಕುಡಿ ನಗರವು ಇತಿಹಾಸ ಮತ್ತು ಆರ್ಥಿಕತೆಯ ದೃಷ್ಟಿಯಿಂದಲೂ ಮಹತ್ವ ಹೊಂದಿದೆ. “ಪರ್ಲ್ ಸಿಟಿ” ಎಂದು ಪ್ರಸಿದ್ಧ – ಮುತ್ತು ಮೀನುಗಾರಿಕೆ ಕೇಂದ್ರವಾಗಿರುವ ತಮಿಳುನಾಡಿನ ಪ್ರಮುಖ ಬಂದರು ನಗರ ಇದಾಗಿದೆ. ಸ್ವಾತಂತ್ರ್ಯ ಹೋರಾಟಗಾರ ವಿ.ಓ. ಚಿದಂಬರಂ ಪಿಳ್ಳೈ ಅವರ ಸ್ವದೇಶಿ ಹಡಗು ಚಳವಳಿಗೆ ಕೇಂದ್ರಬಿಂದು ಇದಾಗಿತ್ತು.