SK Home Ad
Home ಸುದ್ದಿ ದೇಶ ಸಾರಾನಾಥ್‌ಗೆ ಯುನೆಸ್ಕೋ ವಿಶ್ವ ಪರಂಪರೆ ತಾಣ ಮಾನ್ಯತೆ

ಸಾರಾನಾಥ್‌ಗೆ ಯುನೆಸ್ಕೋ ವಿಶ್ವ ಪರಂಪರೆ ತಾಣ ಮಾನ್ಯತೆ

0
16

ನವದೆಹಲಿ: ಉತ್ತರ ಪ್ರದೇಶದ ವಾರಾಣಸಿ ಸಮೀಪದ ಪ್ರಾಚೀನ ಬೌದ್ಧ ತೀರ್ಥಕ್ಷೇತ್ರ ಸಾರಾನಾಥ್‌ಗೆ ಯುನೆಸ್ಕೋ ವಿಶ್ವ ಪರಂಪರೆ ತಾಣ ಸ್ಥಾನಮಾನ ಲಭಿಸಿದೆ. ಇದನ್ನು ಭಾರತದ ಸಾಂಸ್ಕೃತಿಕ ಪರಂಪರೆಗೆ ದೊರೆತ ಐತಿಹಾಸಿಕ ಗೌರವ ಎಂದು ಕೇಂದ್ರ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಗಜೇಂದ್ರಸಿಂಗ್ ಶೇಖಾವತ್ ಬಣ್ಣಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, “ಸಾರಾನಾಥ್ ಶಾಂತಿ, ಜ್ಞಾನ ಮತ್ತು ಕರುಣೆಯ ಶಾಶ್ವತ ಸಂಕೇತವಾಗಿದೆ. ಇದು ಭಾರತೀಯ ನಾಗರಿಕತೆಯ ಆಳವಾದ ಆಧ್ಯಾತ್ಮಿಕ ಹಾಗೂ ತಾತ್ವಿಕ ಕೊಡುಗೆಯನ್ನು ವಿಶ್ವದ ಮುಂದೆ ಪ್ರತಿಬಿಂಬಿಸುತ್ತದೆ” ಎಂದು ಹೇಳಿದ್ದಾರೆ.

ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಯಲ್ಲಿ ಸಾರಾನಾಥ್ ಸೇರ್ಪಡೆಯಾಗಿರುವುದು, ಜಗತ್ತಿಗೆ ಸ್ಫೂರ್ತಿ ನೀಡುವ ವಿಚಾರಗಳು ಮತ್ತು ಮೌಲ್ಯಗಳ ತೊಟ್ಟಿಲಾಗಿ ಭಾರತದ ಶಾಶ್ವತ ಪಾತ್ರವನ್ನು ಮತ್ತೊಮ್ಮೆ ದೃಢಪಡಿಸಿದೆ ಎಂದು ಅವರು ತಿಳಿಸಿದ್ದಾರೆ.

ಗೌತಮ ಬುದ್ಧರು ಬೋಧಗಯದಲ್ಲಿ ಜ್ಞಾನೋದಯ ಪಡೆದ ಬಳಿಕ ತಮ್ಮ ಮೊದಲ ಧರ್ಮೋಪದೇಶ ನೀಡಿದ ಪವಿತ್ರ ಸ್ಥಳವಾಗಿರುವ ಸಾರಾನಾಥ್, ಬೌದ್ಧ ಧರ್ಮದ ಅತ್ಯಂತ ಪ್ರಮುಖ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ. ಯುನೆಸ್ಕೋ ಮಾನ್ಯತೆಯಿಂದ ಈ ಐತಿಹಾಸಿಕ ತಾಣಕ್ಕೆ ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಗುರುತಿನೊಂದಿಗೆ ಸಂರಕ್ಷಣೆ ಮತ್ತು ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯುವ ನಿರೀಕ್ಷೆಯಿದೆ.