ಅಯೋಧ್ಯೆ: ರಾಮನ ಸುಗಮ ದರ್ಶನಕ್ಕೆ ಈಗ 90 ದಿನಕ್ಕೆ ಮೊದಲೇ ಅರ್ಜಿ ಸಲ್ಲಿಸಬೇಕಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಭಾನುವಾರ ಈ ಪ್ರಕಟಣೆ ಮಾಡಿದೆ.
ಪ್ರತಿದಿನ ದರ್ಶನಕ್ಕೆ ಆನ್‌ಲೈನ್ ಪಾಸ್‌ಗಳ ವಿತರಣೆಯನ್ನು 975ರಿಂದ 2000ಕ್ಕೆ ಏರಿಸಿದೆ. ಬೇಡಿಕೆ ಹೆಚ್ಚಾದಲ್ಲಿ ಮತ್ತಷ್ಟು ಹೆಚ್ಚಿಸಲು ಅವಕಾಶ ಇಟ್ಟು ಕೊಂಡಿದೆ. ಭಕ್ತಾದಿಗಳು ಸಾಕಷ್ಟು ಮುಂಚಿತವಾಗಿಯೇ ತಮ್ಮ ಪ್ರವಾಸವನ್ನು ನಿಗದಿಪಡಿಸುವುದು ಈಗ ಅನಿವಾರ್ಯವಾಗಿದೆ. ಟ್ರಸ್ಟ್‌ನ ಸಿಇಒ ಜೀತೇಂದ್ರ ಮಿಶ್ರಾ ಮತ್ತು ಅವರ ತಂಡದ ಒಪ್ಪಿಗೆ ದೊರೆತಿದೆ.
ಇದರಿಂದ ಈಗ 90, 62, 30, 14, 7, 3 ದಿನ ಹೀಗೆ ಏಳು ಹಂತಗಳಲ್ಲಿ ಸುಗಮ ದರ್ಶನಕ್ಕೆ ಅವಕಾಶ ಒದಗಿಸಲಾಗಿದೆ. ಅಂದೇ ಅರ್ಜಿ ಸಲ್ಲಿಸಿ ದರ್ಶನ ಪಡೆದುಕೊಳ್ಳಲು ತತ್ಕಾಲ್ ಎನ್ನುವ ಹೊಸ ಪಾಸ್ ಬಗ್ಗೆಯೂ ಪರಾಮರ್ಶೆ ನಡೆಯುತ್ತಿದೆ.
ದರ್ಶನಕ್ಕಾಗಿ ದಿನಗಟ್ಟಲೇ ಕಾಯುವ ಬದಲು, ಅಧಿಕೃತ ವೆಬ್‌ಸೈಟ್ ಮೂಲಕ ಉಚಿತವಾಗಿ ಸುಗಮ ದರ್ಶನ ಪಾಸ್ ಪಡೆದುಕೊಂಡು ಒಂದೆರಡು ಗಂಟೆಗಳಲ್ಲಿ ದರ್ಶನ ಪಡೆದುಕೊಳ್ಳಬಹುದಾಗಿದೆ. ಇದು ಸಂಪೂರ್ಣ ಉಚಿತವಾಗಿದ್ದು, ಯಾರಿಗೂ ಇದಕ್ಕಾಗಿ ಹಣ ನೀಡಬೇಕಿಲ್ಲ ಎಂದು ಟ್ರಸ್ಟ್ ಸ್ಪಷ್ಟಪಡಿಸಿದೆ.





















