Home Advertisement
Home ಸುದ್ದಿ ದೇಶ ಎಸಿ ಸ್ಫೋಟದಿಂದ ಭೀಕರ ಅಗ್ನಿ ದುರಂತ: 9 ಜನ ಸಜೀವ ದಹನ

ಎಸಿ ಸ್ಫೋಟದಿಂದ ಭೀಕರ ಅಗ್ನಿ ದುರಂತ: 9 ಜನ ಸಜೀವ ದಹನ

0
106

ದೆಹಲಿ: ಎಸಿ ಸ್ಫೋಟದಿಂದ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಒಂದು ವರ್ಷದ ಮಗು ಸೇರಿದಂತೆ ಒಂಬತ್ತು ಜನರು ಮೃತಪಟ್ಟ ಘಟನೆ ಪೂರ್ವ ದೆಹಲಿಯ ವಿವೇಕ್ ವಿಹಾರ್ ಪ್ರದೇಶದ ಅಪಾರ್ಟ್‌ಮೆಂಟ್‌ವೊಂದರಲ್ಲಿ ನಡೆದಿದೆ.

ನಾಲ್ಕು ಮಹಡಿಯ ಕಟ್ಟಡದ ಎರಡನೇ ಮಹಡಿಯಲ್ಲಿ ಬೆಳಗಿನ ಜಾವ 4ಗಂಟೆಯ ಸುಮಾರಿಗೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟದಲ್ಲಿ ಬೆಂಕಿ ವ್ಯಾಪಿಸಿದೆ. ಮನೆಯಲ್ಲಿ ಸುಖ ನಿದ್ರೆಗೆ ಜಾರಿದ್ದ ಒಂಬತ್ತು ಜನರು ಸಜೀವ ದಹನವಾಗಿದ್ದು, ಚಿರನಿದ್ರೆಗೆ ಜಾರುವಂತಾಗಿದೆ.

ಕೂಡಲೇ 10ಕ್ಕೂ ಅಧಿಕ ಅಗ್ನಿಶಾಮಕ ದಳದ ವಾಹನಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಅಲ್ಲದೇ ಗಾಯಗೊಂಡ ಹಲವರನ್ನು ತಕ್ಷಣವೇ ಗುರು ತೇಗ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಇನ್ನು ಘಟನೆಗೆ ಏರ್ ಕಂಡಿಷನರ್ (ಎಸಿ) ಸ್ಫೋಟಗೊಂಡಿದ್ದೇ ಕಾರಣ ಎಂದು ಶಂಕೆ ವ್ಯಕ್ತಪಡಿಸಲಾಗಿದ್ದು, ಪೊಲೀಸರ ಮುಂದಿನ ತನಿಖೆಯಿಂದಲೇ ಘಟನೆಗೆ ನಿಜವಾದ ಕಾರಣ ಏನು? ಎನ್ನುವುದು ತಿಳಿದುಬರಲಿದೆ.