Home Advertisement
Home ತಾಜಾ ಸುದ್ದಿ ೮೬೦ ಕಿ.ಮೀ ಕೈ ಬಿಟ್ಟು ಬೈಕ್ ಚಲಾಯಿಸಿದ ಸಾಹಸಿ

೮೬೦ ಕಿ.ಮೀ ಕೈ ಬಿಟ್ಟು ಬೈಕ್ ಚಲಾಯಿಸಿದ ಸಾಹಸಿ

0
152

ಇಳಕಲ್ : ನಗರದ ಬೈಕ್ ಸಾಹಸಿ ಈಗಾಗಲೇ ಹಲವಾರು ಸಾಹಸಗಳನ್ನು ಬೈಕಿನ ಹ್ಯಾಂಡಲ್ ಇಲ್ಲದೇ ಚಲಾಯಿಸಿದ ಈರಣ್ಣ ಕುಂದರಗಿಮಠ ಈ ಬಾರಿ ೮೬೦ ಕಿ.ಮೀ ದೂರವನ್ನು ಕ್ರಮಿಸಿ ಹೊಸ ಸಾಹಸ ಮಾಡಿದ್ದಾರೆ.
ಕಲಬುರಗಿಯಿಂದ ಸುಮಾರು ೮೬೦ ಕಿಮೀ ದೂರದ ಬೆಂಗಳೂರವರೆಗೆ ನಾಡು, ನುಡಿಗೆ ಜಾಗೃತಿಯನ್ನು ಮೂಡಿಸಲು ಹ್ಯಾಂಡಲ್ ಇಲ್ಲದ ಬೈಕ್‌ನ್ನು ಕಲಬುರಗಿಯಿಂದ ಜೇವರ್ಗಿ, ಶಹಾಪುರ, ಸುರಪುರ, ಲಿಂಗಸಗೂರ, ಮಸ್ಕಿ, ಸಿಂಧನೂರು, ಕಾರಟಗಿ ಗಂಗಾವತಿ, ಹೊಸಪೇಟೆ ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹರಿಹರ, ಹೊನ್ನಾಳಿ, ಶಿವಮೊಗ್ಗ, ಭದ್ರಾವತಿ, ತರೀಕೆರೆ, ಕಡೂರ, ಅರಸೀಕೆರೆ, ತಿಪಟೂರ ತುಮಕೂರು ಮಾರ್ಗವಾಗಿ ಕೇವಲ ೨೩ ಗಂಟೆಗಳಲ್ಲಿ ಬೆಂಗಳೂರು ತಲುಪಿದ್ದಾರೆ.