SK Home Ad
Home ತಾಜಾ ಸುದ್ದಿ ಗೋವಾದಲ್ಲಿ ರಾಕುಲ್-ಜಾಕಿ ವಿವಾಹಕ್ಕೆ ಸಿದ್ಧತೆ

ಗೋವಾದಲ್ಲಿ ರಾಕುಲ್-ಜಾಕಿ ವಿವಾಹಕ್ಕೆ ಸಿದ್ಧತೆ

0
155

ಪಣಜಿ: ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಮತ್ತು ನಟ-ನಿರ್ಮಾಪಕ ಜಾಕಿ ಭಗ್ನಾನಿ ಫೆಬ್ರವರಿ ೨೧ರಂದು ಗೋವಾದಲ್ಲಿ ವಿವಾಹವಾಗಲಿದ್ದಾರೆ. ಈ ಮದುವೆಯ ಬಗ್ಗೆ ದೊಡ್ಡ ಅಪ್ಡೇಟ್ ಹೊರಬಿದ್ದಿದ್ದು, ಇಬ್ಬರೂ ಗೋವಾಕ್ಕೆ ಆಗಮಿಸುತ್ತಿದ್ದಾರೆ. ಇವರಿಬ್ಬರೂ ಕುಟುಂಬ ಸಮೇತ ಮುಂಬೈ ವಿಮಾನ ನಿಲ್ದಾಣದಲ್ಲಿ ಇರುವ ಫೋಟೋಗಳು ಮತ್ತು ವೀಡಿಯೋಗಳು ವೈರಲ್ ಆಗಿದೆ.
ಈಗಾಗಲೇ ಭಾವಿ ದಂಪತಿ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇದರ ವಿಡಿಯೋ ಕೂಡ ಹೊರಬಿದ್ದಿದೆ.
ರಾಕುಲ್ ಮತ್ತು ಜಾಕಿ ವಿದೇಶದಲ್ಲಿ ಮದುವೆಯಾಗಲು ಸಿದ್ಧತೆ ನಡೆಸಿದ್ದರು. ಆದರೆ, ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ `ವೆಡ್ ಇನ್ ಇಂಡಿಯಾ’ ಕರೆ ನಂತರ, ಇಬ್ಬರೂ ಭಾರತದಲ್ಲೇ ಮದುವೆಯಾಗಲು ನಿರ್ಧರಿಸಿದರು. ರಾಕುಲ್ ಮತ್ತು ಜಾಕಿ ಫೆಬ್ರವರಿ ೧೯ ಮತ್ತು ೨೦ ರಂದು ಗೋವಾದಲ್ಲಿ ಮದುವೆಯ ಪೂರ್ವ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ. ಫೆಬ್ರವರಿ ೨೧ರಂದು ಜಾಕಿ ಜೊತೆ ರಾಕುಲ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.