Home Advertisement
Home ನಮ್ಮ ಜಿಲ್ಲೆ ಕೊಪ್ಪಳ ಸಿದ್ದರಾಮಯ್ಯಗೆ ವೈದ್ಯಕೀಯ ಚಿಕಿತ್ಸೆ ಅವಶ್ಯ

ಸಿದ್ದರಾಮಯ್ಯಗೆ ವೈದ್ಯಕೀಯ ಚಿಕಿತ್ಸೆ ಅವಶ್ಯ

0
136

ಕೊಪ್ಪಳ(ಗಂಗಾವತಿ): ಯುದ್ಧ ಬೇಡ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವೈದ್ಯಕೀಯ ಚಿಕಿತ್ಸೆ ಅವಶ್ಯವಿದೆ ಎಂದು ಮಾಜಿ ಎಂ.ಎಲ್.ಸಿ ಮತ್ತು ಕಾಂಗ್ರೆಸ್ ನಾಯಕ ಎಚ್.ಆರ್. ಶ್ರೀನಾಥ ಹೇಳಿದರು.
ಗಂಗಾವತಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದೊಂದಿಗೆ ಯುದ್ಧ ಬೇಡ ಎನ್ನುವುದು ಸಿಎಂ ಸಿದ್ದರಾಮಯ್ಯನವರ ವೈಯಕ್ತಿಕ ಹೇಳಿಕೆಯಾಗಿದೆಯೇ, ಹೊರತು ಕಾಂಗ್ರೆಸ್ ಪಕ್ಷದ ಹೇಳಿಕೆ ಅಲ್ಲ. ಸಿದ್ದರಾಮಯ್ಯ ಈ ತರಹದ ಹೇಳಿಕೆ ಕೊಡುವ ಆಗಿದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ನಂತರ ವೈಯಕ್ತಿಕ ಹೇಳಿಕೆ ನೀಡಲಿ ಎಂದರು.
ಸಿಎಂ ಬೇಜವಬ್ದಾರಿತನದ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಆಗಿದೆ. ಸಿದ್ದರಾಮಯ್ಯಗೆ ವೈದ್ಯಕೀಯ ಚಿಕಿತ್ಸೆ ಅವಶ್ಯವಿದೆ ಅನಿಸುತ್ತದೆ. ಸಿದ್ದರಾಮಯ್ಯ ಹೇಳಿಕೆಯಿಂದ ಕಾಂಗ್ರೆಸ್ ಕಾರ್ಯರ್ತರಿಗೆ ಬೇಸರವಾಗಿದೆ. ದೇಶದ ಪ್ರಧಾನಿ ಜೊತೆ ಕಾಂಗ್ರೆಸ್ ಪಕ್ಷವಿದೆ. ಪಾಕ್ ವಿರುದ್ಧ ಯುದ್ಧ ಮಾಡಿದರೆ, ಭಯೊತ್ಪಾದನೆ ತಡೆಗಟ್ಟಲು ಸಾಧ್ಯ ಎಂದರು.

Previous article18 ಶಾಸಕರ ಅಮಾನತು ರದ್ದು ಒಬ್ಬನೇ ನಿರ್ಧರಿಸಲಾಗದು
Next articleಹಾವೇರಿಯಲ್ಲಿ ಗುಡುಗು-ಸಿಡಿಲು ಸಹಿತ ಭಾರೀ ಮಳೆ