SK Home Ad
Home ತಾಜಾ ಸುದ್ದಿ ಮಂತ್ರಾಲಯದಲ್ಲಿ ಶ್ರೀಸುಶಮೀಂದ್ರ ತೀರ್ಥರ ಆರಾಧನಾ ಮಹೋತ್ಸವ

ಮಂತ್ರಾಲಯದಲ್ಲಿ ಶ್ರೀಸುಶಮೀಂದ್ರ ತೀರ್ಥರ ಆರಾಧನಾ ಮಹೋತ್ಸವ

0
235
ಆರಾಧನೆ

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶನಿವಾರ ಶ್ರೀಸುಶಮೀಂದ್ರ ತೀರ್ಥರ ಆರಾಧನಾ ಮಹೋತ್ಸವ ನಡೆಯಿತು.
ಶ್ರೀಸುಶಮೀಂದ್ರ ತೀರ್ಥರ ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀಮಠದ ಪೀಠಾಧಿತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಶ್ರೀಸುಶಮೀಂದ್ರ ತೀರ್ಥರ ಮೂಲಬೃಂದಾವನಕ್ಕೆ ಮಹಾಪಂಚಾಮೃತಾಭಿಷೇಕ ನೆರವೇರಿಸಿದರು.
ಆರಾಧನೆ ಅಂಗವಾಗಿ ತಿರುಪತಿ ತಿರುಮಲದಿಂದ ಶ್ರೀನಿವಾಸದೇವರ ವಸ್ತçಗಳನ್ನು ಟಿಟಿಡಿಯ ಜಂಟಿ ಕಾರ್ಯನಿರ್ವಾಹಕ ಅಧಿಕಾರಿ ವೀರಭ್ರಮೇಂದ್ರ ಅವರು ತಂದು ಶ್ರೀಮಠದ ಪೀಠಾಧಿಗಳಾದ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಗೆ ಹಸ್ತಾಂತರಿಸಿದರು. ನಂತರ ಶ್ರೀಮಠದ ಪ್ರಾಕಾರದಲ್ಲಿ ರಥೋತ್ಸವ ಜರುಗಿತು. ಶ್ರೀಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಪಂಡಿತರಿಂದ ಪ್ರವಚನ ನಡೆಯಿತು. ಅಪಾರ ಪ್ರಮಾಣದಲ್ಲಿ ಭಕ್ತರು ಭಾಗವಹಿಸಿದ್ದರು.