SK Home Ad
Home ಸಿನಿ ಮಿಲ್ಸ್ ನಟ ದರ್ಶನ್‌ಗೆ 1 ವರ್ಷ ಜೈಲು ಖಾಯಂ ವಾಸ? ರೇಣುಕಾಸ್ವಾಮಿ ಪ್ರಕರಣಕ್ಕೆ ಸುಪ್ರೀಂಕೋರ್ಟ್‌ನಲ್ಲಿ ಬಹಳ ದೊಡ್ಡ...

ನಟ ದರ್ಶನ್‌ಗೆ 1 ವರ್ಷ ಜೈಲು ಖಾಯಂ ವಾಸ? ರೇಣುಕಾಸ್ವಾಮಿ ಪ್ರಕರಣಕ್ಕೆ ಸುಪ್ರೀಂಕೋರ್ಟ್‌ನಲ್ಲಿ ಬಹಳ ದೊಡ್ಡ ತಿರುವು!

0
197

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಇದು ಶಾಕಿಂಗ್ ನ್ಯೂಸ್ ಅಲ್ಲ. ಸುಪ್ರೀಂಕೋರ್ಟ್ ನಿಜಕ್ಕೂ ಇವತ್ತು ಗುಡ್‌ನ್ಯೂಸ್‌ ಕೊಟ್ಟಿದೆ. ದರ್ಶನ್ ಇನ್ನೂ ಒಂದು ವರ್ಷ ಜೈಲಿನಲ್ಲೇ ಇರಬೇಕು ನಿಜ. ಆದ್ರೆ ರೇಣುಕಾಸ್ವಾಮಿ ಪ್ರಕರಣದಲ್ಲಿ ಇನ್ಮುಂದೆ ವಿಚಾರಣೆ ಶೀಘ್ರವಾಗಿ ನಡೆಯಲಿದೆ. ತಿಂಗಳುಗಳಿಂದ ಜೈಲಿನ ಕಂಬಿ ಎಣಿಸುತ್ತಿರುವ ನಟ, ಇಂದಾದರೂ ಹೊರಬರುತ್ತಾರೆ ಎಂದು ಕಾದು ಕುಳಿತಿದ್ದಾರೆ. ದರ್ಶನ್ ಕುಟುಂಬ ಮತ್ತು ಅಭಿಮಾನಿಗಳಿಗೆ ಸುಪ್ರೀಂ ಕೋರ್ಟ್‌ನಲ್ಲಿ ಇಂದು ಹೊಸ ಟ್ವಿಸ್ಟ್ ಕೊಟ್ಟಿದ್ದು, ವಿಚಾರಣೆ ಸುದ್ದಿಯಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿದೆ.

ನಟ ದರ್ಶನ್ ಸದ್ಯಕ್ಕೆ ಅಂದ್ರೆ ಒಂದು ವರ್ಷ ಜಾಮೀನು ಭಾಗ್ಯ ಇಲ್ಲ ಎನ್ನಲಾಗುತ್ತಿದೆ. ಆದ್ರೆ ಇನ್ನಮೇಲೆ ರೇಣುಕಾಸ್ವಾಮಿ ಕೇಸ್‌ ಅತೀ ಶೀಘ್ರವಾಗಿ ವಿಚಾರಣೆ ಮಾಡಿ ತೀರ್ಮಾನಕ್ಕೆ ಬರುವಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ.

ಹಾಗೇ ಪತಿಯನ್ನು ಮನೆಗೆ ಕರೆತರಲು ಪತ್ನಿ ವಿಜಯಲಕ್ಷ್ಮಿ ನಡೆಸುತ್ತಿರುವ ಹೋರಾಟ ಅಷ್ಟಿಷ್ಟಲ್ಲ. ಪ್ರತಿ ಬಾರಿ ವಿಚಾರಣೆ ನಡೆದಾಗಲೂ ಏನಾದರೂ ಒಂದು ಸುಖಾಂತ್ಯ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದ್ರೆ ಇಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಎಲ್ಲವನ್ನೂ ತಲೆಕೆಳಗು ಮಾಡಿದೆ. ಕೋರ್ಟ್ ಜಾಮೀನನ್ನು ನಿರಾಕರಿಸಿದ್ದು ಮಾತ್ರವಲ್ಲದೆ, ಒಂದು ವರ್ಷದೊಳಗೆ ಕನಿಷ್ಠ 60 ಪ್ರಮುಖ ಸಾಕ್ಷಿಗಳ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ನಂತರ ದರ್ಶನ್ ಪರ ವಕೀಲರು ಕೋರ್ಟ್‌ನಲ್ಲಿ ವಿಚಾರಣೆಯ ವಿಳಂಬದ ಬಗ್ಗೆ ಪ್ರಬಲ ವಾದ ಮಂಡಿಸಿದ್ದರು. “ಪ್ರಕರಣದಲ್ಲಿ 273 ಸಾಕ್ಷಿಗಳಿದ್ದಾರೆ, ಆದ್ರೆ ಈವರೆಗೆ ಕೇವಲ 10 ಜನರ ವಿಚಾರಣೆ ಮಾತ್ರ ನಡೆದಿದೆ. ಈಗಾಗಲೇ 8 ತಿಂಗಳಿನಿಂದ ದರ್ಶನ್ ಜೈಲಿನಲ್ಲಿದ್ದಾರೆ” ಎಂದು ಮನವಿ ಮಾಡಿದ್ದರು. ಅಷ್ಟೇ ಅಲ್ಲದೆ, ಜೈಲಿನಲ್ಲಿ ಅನುಭವಿಸುತ್ತಿರುವ ಅಮಾನವೀಯ ಸ್ಥಿತಿ, ಕ್ವಾರಂಟೈನ್ ಸೆಲ್‌ನ ಹಿಂಸೆ ಮತ್ತು ಸಹ-ಕೈದಿಗಳ ನಿಂದನೆಯ ಬಗ್ಗೆಯೂ ದರ್ಶನ್ ಅಳಲು ತೋಡಿಕೊಂಡಿದ್ದರು.

ಆದ್ರೆ, ಕಾನೂನಿನ ಚೌಕಟ್ಟಿನಲ್ಲಿ ಈ ಎಲ್ಲಾ ಅಳಲುಗಳಿಗೂ ಸದ್ಯಕ್ಕೆ ಬೆಲೆ ಸಿಕ್ಕಿಲ್ಲ. “ಇವತ್ತಲ್ಲ ನಾಳೆ ನ್ಯಾಯ ಸಿಗುತ್ತದೆ” ಎಂಬ ಭರವಸೆಯಲ್ಲಿದ್ದ ಅಭಿಮಾನಿಗಳಿಗೆ ಈ ಸುದ್ದಿ ಬರಸಿಡಿಲಿನಂತೆ ಬಡಿದಿದೆ. ಸದ್ಯಕ್ಕೆ ದರ್ಶನ್ ಅವರ ಜೈಲು ವಾಸ ಮುಂದುವರಿಯಲಿದೆ. ಕಾನೂನು ಹೋರಾಟದ ಈ ಸುದೀರ್ಘ ಪಯಣದಲ್ಲಿ ಮುಂದಿನ ದಿನಗಳು ಯಾವ ತಿರುವು ಪಡೆಯಲಿವೆ ಎಂಬುದನ್ನು ಕಾಲವೇ ನಿರ್ಧರಿಸಬೇಕು.