SK Home Ad
Home ಸಿನಿ ಮಿಲ್ಸ್ ರಾಮಾಯಣ 17 ನೇ ದಿನದ ಬಾಕ್ಸ್‌ ಆಫೀಸ್‌ ಕಲೆಕ್ಷೆನ್‌ ; ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ...

ರಾಮಾಯಣ 17 ನೇ ದಿನದ ಬಾಕ್ಸ್‌ ಆಫೀಸ್‌ ಕಲೆಕ್ಷೆನ್‌ ; ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಚಿತ್ರವು ₹ 2000 ಕೋಟಿ ಕ್ಲಬ್‌ ಸೇರುತ್ತಾ?

0
1

ಭಾರತೀಯ ಚಿತ್ರರಂಗದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌, ಬಾಲಿವುಡ್‌ ಸ್ಟಾರ್‌  ರಣಬೀರ್ ಕಪೂರ್ , ಸಾಯಿ ಪಲ್ಲವಿ  ನಟನೆಯ ‘ರಾಮಾಯಣ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿದೆ. ಬಿಡುಗಡೆಯಾಗಿ 17 ದಿನಗಳನ್ನು ಪೂರೈಸಿರುವ ಚಿತ್ರ ವಿಶ್ವಾದ್ಯಂತ ₹1,616.70 ಕೋಟಿ ಗಳಿಕೆ ಮಾಡಿದೆ ಎಂದು ವರದಿಯಾಗಿದೆ.

ನವೆಂಬರ್ 21ರಂದು 17ನೇ ದಿನದ ಪ್ರದರ್ಶನದಲ್ಲಿ ಸಿನಿಮಾ ಭಾರತದಲ್ಲಿ ಸುಮಾರು ₹27.40 ಕೋಟಿ ನಿವ್ವಳ ಗಳಿಕೆ ಮಾಡಿದೆ. ಶುಕ್ರವಾರದ ಗಳಿಕೆಗೆ ಹೋಲಿಸಿದರೆ ಶನಿವಾರ ಉತ್ತಮ ಏರಿಕೆ ಕಂಡಿದೆ. ಈ ಮೂಲಕ ಸಿನಿಮಾ ಜಾಗತಿಕವಾಗಿ ₹1,600 ಕೋಟಿ ಗಡಿ ದಾಟಿದೆ.

ಇದುವರೆಗೆ ಭಾರತದಲ್ಲಿ ಚಿತ್ರದ ನಿವ್ವಳ ಗಳಿಕೆ ₹906.90 ಕೋಟಿ ಆಗಿದ್ದರೆ, ಒಟ್ಟು ಗಳಿಕೆ ₹1,083.70 ಕೋಟಿ ಎಂದು ವರದಿಯಾಗಿದೆ. ವಿದೇಶಿ ಮಾರುಕಟ್ಟೆಗಳಿಂದ ಸುಮಾರು ₹533 ಕೋಟಿ ಗಳಿಕೆ ಮಾಡಿದೆ ಎನ್ನಲಾಗಿದೆ.

ಇಂದು ನವೆಂಬರ್ 22ರಂದು ಚಿತ್ರದ 18ನೇ ದಿನದ ಪ್ರದರ್ಶನ ನಡೆಯುತ್ತಿದ್ದು, ಭಾನುವಾರದ ಕಲೆಕ್ಷನ್ ಮೇಲೆ ಎಲ್ಲರ ಗಮನ ನೆಟ್ಟಿದೆ. ಇಂದಿನ ಅಂತಿಮ ಗಳಿಕೆಯ ಅಂಕಿಅಂಶಗಳು ಇನ್ನಷ್ಟೇ ಹೊರಬರಬೇಕಿದೆ.

ಒಟ್ಟಿನಲ್ಲಿ, ರಾಮಾಯಣ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ತನ್ನ ನಾಗಾಲೋಟ ಮುಂದುವರಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ದಾಖಲೆ ಬರೆಯಲಿದೆಯೇ ಎಂಬ ಕುತೂಹಲ ಮೂಡಿಸಿದೆ.