SK Home Ad
Home ಸಿನಿ ಮಿಲ್ಸ್ ಬಾಕ್ಸ್ ಆಫೀಸ್‌ನಲ್ಲಿ ‘ಪ್ರೇಮದ ಊರಲಿ’ ಕಮಾಲ್: 10 ದಿನಕ್ಕೆ ಬರೋಬ್ಬರಿ ₹16.96 ಕೋಟಿ ಗ್ರಾಸ್ ಕಲೆಕ್ಷನ್!

ಬಾಕ್ಸ್ ಆಫೀಸ್‌ನಲ್ಲಿ ‘ಪ್ರೇಮದ ಊರಲಿ’ ಕಮಾಲ್: 10 ದಿನಕ್ಕೆ ಬರೋಬ್ಬರಿ ₹16.96 ಕೋಟಿ ಗ್ರಾಸ್ ಕಲೆಕ್ಷನ್!

0
22

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ತೆರೆಕಂಡ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ತನ್ನ ಅಭೂತಪೂರ್ವ ಜಾದೂ ಮುಂದುವರಿಸಿದೆ. ಆರಂಭದಲ್ಲಿ ಕೇವಲ 60 ಶೋಗಳಿಂದ ಅತ್ಯಂತ ಸಾಧಾರಣ ಪ್ರದರ್ಶನ ಕಂಡಿದ್ದ ಈ ಚಿತ್ರ, ಸಾರ್ವಜನಿಕರ ಅತ್ಯುತ್ತಮ ‘ಮೌತ್ ಪಬ್ಲಿಸಿಟಿ’ಯಿಂದಾಗಿ ಈಗ ಬರೋಬ್ಬರಿ 663 ಶೋಗಳಿಗೆ ಏರಿಕೆಯಾಗಿ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ.


ಬಿಡುಗಡೆಯಾದ 10ನೇ ದಿನವಾದ ಅಕ್ಟೋಬರ್ 4ರ ಭಾನುವಾರ ಒಂದೇ ದಿನ ರಾಜ್ಯಾದ್ಯಂತ ಬರೊಬ್ಬರಿ ₹3.85 ಕೋಟಿ ನೆಟ್ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿದೆ. ಶನಿವಾರಕ್ಕೆ ಹೋಲಿಸಿದರೆ ಭಾನುವಾರದ ಗಳಿಕೆಯಲ್ಲಿ ಶೇಕಡಾ 37.5 ರಷ್ಟು ಭಾರಿ ಏರಿಕೆ ಕಂಡುಬಂದಿದೆ.

ಸೆಪ್ಟೆಂಬರ್ 25ರಂದು ಕೇವಲ ₹9 ಲಕ್ಷ ಗಳಿಸುವ ಮೂಲಕ ಕನಿಷ್ಠ ಶುರುವಾತು ಪಡೆದಿದ್ದ ಈ ಸಿನಿಮಾ, ಮೊದಲ ವಾರದ ಕೊನೆಯಲ್ಲಿ ತನ್ನ ಕಲೆಕ್ಷನ್ ವೇಗವನ್ನು ಹೆಚ್ಚಿಸಿಕೊಂಡು ₹5.32 ಕೋಟಿ ಬಾಚಿತ್ತು. ಎರಡನೇ ವಾರದಲ್ಲಿ ಮತ್ತಷ್ಟು ಪ್ರಗತಿ ಸಾಧಿಸಿ, ಅಕ್ಟೋಬರ್ 2ರಂದು ₹2.60 ಕೋಟಿ ಗಳಿಸಿತ್ತು. ಪ್ರಸ್ತುತ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಒಟ್ಟು ನೆಟ್ ಕಲೆಕ್ಷನ್ ₹14.57 ಕೋಟಿಗೆ ತಲುಪಿದ್ದು, ಗ್ರಾಸ್ ಕಲೆಕ್ಷನ್ ₹16.96 ಕೋಟಿ ಗಡಿ ದಾಟಿದೆ.

ಕನ್ನಡ ಹಾಗೂ ತೆಲುಗಿನಲ್ಲಿ ಸೂಪರ್ ಹಿಟ್ ಆಗಿರುವ ಈ ಚಿತ್ರಕ್ಕೆ ಈಗ ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲೂ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಉತ್ತಮ ಕಥಾವಸ್ತು ಹಾಗೂ ತಾಂತ್ರಿಕ ಮೆರುಗು ಹೊಂದಿರುವ ಸಿನಿಮಾಗಳನ್ನು ಪ್ರೇಕ್ಷಕರು ಎಂದಿಗೂ ಕೈಬಿಡುವುದಿಲ್ಲ ಎಂಬುದಕ್ಕೆ ‘ಪ್ರೇಮದ ಊರಲಿ’ ಚಿತ್ರದ ಯಶಸ್ಸೇ ಸಾಕ್ಷಿ.