SK Home Ad
Home ಸಿನಿ ಮಿಲ್ಸ್ ಹಾಲಿವುಡ್ ಹೊಸ ಥ್ರಿಲ್: ‘ಫಾಸ್ಟ್ & ಫ್ಯೂರಿಯಸ್’ ರೋಲರ್ ಕೋಸ್ಟರ್‌ಗೆ ದಿನಾಂಕ ಘೋಷಣೆ

ಹಾಲಿವುಡ್ ಹೊಸ ಥ್ರಿಲ್: ‘ಫಾಸ್ಟ್ & ಫ್ಯೂರಿಯಸ್’ ರೋಲರ್ ಕೋಸ್ಟರ್‌ಗೆ ದಿನಾಂಕ ಘೋಷಣೆ

0
88

‘ಫಾಸ್ಟ್ & ಫ್ಯೂರಿಯಸ್: ಹಾಲಿವುಡ್ ಡ್ರಿಫ್ಟ್’ ರೋಲರ್ ಕೋಸ್ಟರ್‌ಗೆ ಅಧಿಕೃತ ದಿನಾಂಕ ಫಿಕ್ಸ್ – 72 MPH ವೇಗ, 360° ಡ್ರಿಫ್ಟ್; ಸೆ.16ಕ್ಕೆ ಓಪನ್

ಹಾಲಿವುಡ್ ಡ್ರಿಫ್ಟ್’ ಹೈ-ಸ್ಪೀಡ್ ರೋಲರ್ ಕೋಸ್ಟರ್‌ಗೆ ಕೊನೆಗೂ ಅಧಿಕೃತ ಉದ್ಘಾಟನಾ ದಿನಾಂಕ ಘೋಷಣೆಯಾಗಿದೆ. 2026ರ ಸೆಪ್ಟೆಂಬರ್ 16ರಂದು ಯೂನಿವರ್ಸಲ್ ಸ್ಟುಡಿಯೋಸ್ ಹಾಲಿವುಡ್‌ನಲ್ಲಿ ಈ ಹೊಸ ಆಕರ್ಷಣೆ ಸಾರ್ವಜನಿಕರಿಗೆ ಅಧಿಕೃತವಾಗಿ ತೆರೆಯಲಿದೆ.

‘ಹಾಲಿವುಡ್ ಡ್ರಿಫ್ಟ್’ ಯೂನಿವರ್ಸಲ್ ಸ್ಟುಡಿಯೋಸ್ ಹಾಲಿವುಡ್‌ನ ಮೊದಲ ಹೊರಾಂಗಣ ಹೈ-ಸ್ಪೀಡ್ ರೋಲರ್ ಕೋಸ್ಟರ್ ಆಗಿದ್ದು, ಇದನ್ನು ಯೂನಿವರ್ಸಲ್ ಡೆಸ್ಟಿನೇಷನ್ಸ್ & ಎಕ್ಸ್‌ಪೀರಿಯನ್ಸಸ್‌ನ ಪೋರ್ಟ್‌ಫೋಲಿಯೊದಲ್ಲೇ ವೇಗದ ಕೋಸ್ಟರ್ ಎಂದು ಸಂಸ್ಥೆ ಹೇಳಿದೆ.

ಸುಮಾರು 4,100 ಅಡಿ ಉದ್ದದ ಟ್ರ್ಯಾಕ್‌ನಲ್ಲಿ ಗಂಟೆಗೆ 72 ಮೈಲುಗಳವರೆಗೆ (ಸುಮಾರು 116 ಕಿ.ಮೀ.) ವೇಗದಲ್ಲಿ ರೈಡ್ ಸಾಗಲಿದೆ. ವಿಶೇಷವೆಂದರೆ, ರೈಡ್ ವಾಹನಗಳು ಚಲನೆಯಲ್ಲೇ 360 ಡಿಗ್ರಿ ತಿರುಗುವ ತಂತ್ರಜ್ಞಾನ ಹೊಂದಿದ್ದು, ಕಾರು ಡ್ರಿಫ್ಟ್ ಮಾಡುತ್ತಿರುವ ಅನುಭವವನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ.

ರೈಡ್‌ನಲ್ಲಿ ನಾಲ್ಕು ವಿಭಿನ್ನ ‘ಫಾಸ್ಟ್ & ಫ್ಯೂರಿಯಸ್’ ಕಾರುಗಳ ಮಾದರಿಯ ವಾಹನಗಳನ್ನು ಬಳಸಲಾಗುತ್ತದೆ. ಡಾಡ್ಜ್ ಚಾರ್ಜರ್, ಮಜ್ದಾ RX-7, ನಿಸ್ಸಾನ್ ಸ್ಕೈಲೈನ್ GT-R ಮತ್ತು ಟೊಯೊಟಾ ಸುಪ್ರಾ ವಾಹನಗಳು ಪ್ರಮುಖ ಆಕರ್ಷಣೆಯಾಗಿವೆ.

ಕೋಸ್ಟರ್‌ನಲ್ಲಿ ನಾಲ್ಕು ಪ್ರಮುಖ ಲಾಂಚ್‌ಗಳು ಸೇರಿದಂತೆ ಇನ್‌ವರ್ಟೆಡ್ ಡೈವ್ ಲೂಪ್, ಪ್ರೆಟ್ಜೆಲ್ ಲೂಪ್ ಹಾಗೂ ಇನ್‌ವರ್ಟೆಡ್ ಸ್ಟಾಲ್‌ನಂತಹ ರೋಮಾಂಚಕಾರಿ ವಿಭಾಗಗಳಿವೆ. ರೈಡ್‌ನಲ್ಲಿ ಗರಿಷ್ಠ 3.6G ಬಲವನ್ನು ಅನುಭವಿಸುವ ಸಾಧ್ಯತೆಯಿದ್ದು, ಸೌಂಡ್-ರಿಡಕ್ಷನ್ ತಂತ್ರಜ್ಞಾನವನ್ನೂ ಅಳವಡಿಸಲಾಗಿದೆ.

ಈ ರೈಡ್ ‘ಫಾಸ್ಟ್ & ಫ್ಯೂರಿಯಸ್’ ಫ್ರಾಂಚೈಸಿನ ವೇಗ, ಸ್ಟ್ರೀಟ್ ರೇಸಿಂಗ್ ಮತ್ತು ಆ್ಯಕ್ಷನ್ ಅನುಭವವನ್ನು ನೇರವಾಗಿ ಮನರಂಜನಾ ಪಾರ್ಕ್‌ಗೆ ತರುವ ಉದ್ದೇಶ ಹೊಂದಿದೆ. ಈ ವರ್ಷ ಫ್ರಾಂಚೈಸಿಗೆ 25 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹೊಸ ಕೋಸ್ಟರ್ ಮತ್ತಷ್ಟು ವಿಶೇಷತೆ ಪಡೆದಿದೆ. ಫ್ರಾಂಚೈಸಿನ ಮುಂದಿನ ಚಿತ್ರ ‘Fast Forever’ 2028ರ ಮಾರ್ಚ್‌ನಲ್ಲಿ ಚಿತ್ರಮಂದಿರಗಳಿಗೆ ಬರಲಿದೆ.

ಇದಕ್ಕೂ ಮುನ್ನ ಆಯ್ದ ದಿನಗಳಲ್ಲಿ ತಾಂತ್ರಿಕ ಪರೀಕ್ಷೆ ಹಾಗೂ ಪೂರ್ವವೀಕ್ಷಣೆಗಳ ಸಂದರ್ಭದಲ್ಲಿ ರೈಡ್ ತೆರೆಯಲಾಗಿತ್ತು. ಇದೀಗ ಸೆಪ್ಟೆಂಬರ್ 16ರಂದು ಅಧಿಕೃತ ಉದ್ಘಾಟನೆಯೊಂದಿಗೆ ಸಾಮಾನ್ಯ ಪ್ರವಾಸಿಗರಿಗೆ ‘ಹಾಲಿವುಡ್ ಡ್ರಿಫ್ಟ್’ ಅನುಭವಿಸುವ ಅವಕಾಶ ಸಿಗಲಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.