SK Home Ad
Home ಸಿನಿ ಮಿಲ್ಸ್ ‘ಎತ್ತಿ ಕುಕ್ಕಿಬಿಡ್ತೀನಿ’ ಎಂದಿದ್ದ ಮಂಜು ಶಾಂತ:ಬಿಗ್‌ಬಾಸ್ ಹೈಡ್ರಾಮಾಗೆ ಕೊನೆಗೂ ಬಿತ್ತು ತೆರೆ!

‘ಎತ್ತಿ ಕುಕ್ಕಿಬಿಡ್ತೀನಿ’ ಎಂದಿದ್ದ ಮಂಜು ಶಾಂತ:ಬಿಗ್‌ಬಾಸ್ ಹೈಡ್ರಾಮಾಗೆ ಕೊನೆಗೂ ಬಿತ್ತು ತೆರೆ!

0
16

BBK13: ಬಿಗ್‌ಬಾಸ್ ಮನೆಯಲ್ಲಿ ನಡೆದ ಕಠಿಣ ಟಾಸ್ಕ್ ಒಂದರಲ್ಲಿ ಮಾತಿಗೆ ಮಾತು ಬೆಳೆದು, ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದ ಸ್ಪರ್ಧಿಗಳಾದ ಸೌಂದರ್ಯ ಮತ್ತು ಮಹಾಕವಿ ಮಂಜು ನಡುವಿನ ಜಗಳ ಕೊನೆಗೂ ಶಮನಗೊಂಡಿದೆ. ಸದ್ಯ ಇಬ್ಬರ ನಡುವಿನ ಕಾವೇರಿದ ವಾತಾವರಣ ತಂಪಾಗಿದ್ದು, ಮತ್ತೆ ಸ್ನೇಹಿತರಾಗಿ ಮುಂದುವರಿಯಲು ನಿರ್ಧರಿಸಿದ್ದಾರೆ.

ಟಾಸ್ಕ್ ಒಂದರಲ್ಲಿ ಸೌಂದರ್ಯ ಬಳಿಯಿದ್ದ ಬಕೆಟ್ ಹಾಗೂ ರಿಂಗ್ ಕಸಿದುಕೊಳ್ಳಲು ಧನುಷ್ ಮತ್ತು ಮಂಜು ಪ್ರಯತ್ನಿಸಿದ್ದರು. ಈ ವೇಳೆ ವಸ್ತುಗಳನ್ನು ಕಾಪಾಡಿಕೊಳ್ಳುವ ಭರದಲ್ಲಿ ಸೌಂದರ್ಯ, ಮಂಜು ಮೇಲೆ ಕೈ ಮಾಡಿದ್ದಾರೆ. ಇದರಿಂದ ತೀವ್ರ ಕೋಪಗೊಂಡ ಮಂಜು, ’30 ಕೆಜಿ ತೂಕದ ಮಾಂಸ, 86 ಕೆಜಿ ತೂಕದ ಮಾಂಸದ ಮೇಲೆ ದಾಳಿ ಮಾಡಲು ಬಂದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿ, ‘ಎತ್ತಿ ಕುಕ್ಕಿಬಿಡುತ್ತೇನೆ’ ಎಂದು ಎಚ್ಚರಿಕೆ ನೀಡಿದ್ದರು.

ಶೋ ನಿಯಮದ ಪ್ರಕಾರ ಸ್ಪರ್ಧಿಗಳ ಮೇಲೆ ದೈಹಿಕ ಹಲ್ಲೆ (ಮ್ಯಾನ್‌ಹ್ಯಾಂಡ್ಲಿಂಗ್) ಮಾಡುವುದು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಈ ಹಿಂದೆ ಹುಚ್ಚ ವೆಂಕಟ್, ರಂಜಿತ್ ಮತ್ತು ಸಂಯುಕ್ತ ಹೆಗಡೆ ಇದೇ ಕಾರಣಕ್ಕೆ ಶೋನಿಂದ ಹೊರಬಿದ್ದಿದ್ದರು. ಹೀಗಾಗಿ ಸೌಂದರ್ಯ ಹೊರಹೋಗಲಿದ್ದಾರೆ ಎಂಬ ಚರ್ಚೆ ಶುರುವಾಗಿತ್ತು. ಆದ್ರೆ ದೃಶ್ಯಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ಬಿಗ್‌ಬಾಸ್, ಇದು ಆಟದ ಭರದಲ್ಲಿ ನಡೆದ ಘಟನೆಯೇ ಹೊರತು ಉದ್ದೇಶಪೂರ್ವಕ ಹಲ್ಲೆಯಲ್ಲ ಎಂದು ಸ್ಪಷ್ಟಪಡಿಸಿ, ಸೌಂದರ್ಯ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳಲಿಲ್ಲ.

ಬಿಗ್‌ಬಾಸ್ ಸ್ಪಷ್ಟನೆ ನೀಡಿದ ಬೆನ್ನಲ್ಲೇ, ಸೌಂದರ್ಯ ತಮ್ಮ ನಡವಳಿಕೆಗೆ ಮಂಜು ಬಳಿ ಬಹಿರಂಗವಾಗಿ ಕ್ಷಮೆಯಾಚಿಸಿದರು. ಮಂಜು ಕೂಡ ವಿಷಯವನ್ನು ಬೆಳೆಸದೆ ಕ್ಷಮೆಯನ್ನು ಸ್ವೀಕರಿಸಿದ್ದಾರೆ. ಸದ್ಯ ಇಬ್ಬರ ನಡುವಿನ ಹಳೆಯ ಕಿಚ್ಚು ಶಮನಗೊಂಡು, ಬಿಗ್‌ಬಾಸ್ ಮನೆಯಲ್ಲಿ ಮತ್ತೆ ಕೂಲ್ ಫ್ರೆಂಡ್ಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.