SK Home Ad
Home ಸಿನಿ ಮಿಲ್ಸ್ ಬಿಗ್‌ ಬಾಸ್‌‌ ಕನ್ನಡ 13: ‘ಅಗ್ನಿಪರೀಕ್ಷೆ’ ಗೆದ್ದಿದ್ದ ಲಿಖಿತ್‌ ಗೋಂದಿ ಎಲಿಮಿನೇಟ್‌; ಸಿಕ್ಕ ಕ್ಯಾಶ್‌ ಪ್ರೈಜ್‌...

ಬಿಗ್‌ ಬಾಸ್‌‌ ಕನ್ನಡ 13: ‘ಅಗ್ನಿಪರೀಕ್ಷೆ’ ಗೆದ್ದಿದ್ದ ಲಿಖಿತ್‌ ಗೋಂದಿ ಎಲಿಮಿನೇಟ್‌; ಸಿಕ್ಕ ಕ್ಯಾಶ್‌ ಪ್ರೈಜ್‌ ಎಷ್ಟು?

0
20

ಬೆಂಗಳೂರು: ‘ಬಿಗ್‌ ಬಾಸ್‌ ಕನ್ನಡ ಸೀಸನ್‌ 13’ರ ಈ ವಾರದ ಎಲಿಮಿನೇಷನ್‌ ಪ್ರಕ್ರಿಯೆ ದೊಡ್ಮನೆಯ ಸ್ಪರ್ಧಿಗಳ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದೆ. ‘ಕಾಮನ್‌ ಮ್ಯಾನ್‌’ ಕ್ಯಾಟಗರಿಯಲ್ಲಿ ‘ಅಗ್ನಿಪರೀಕ್ಷೆ’ ಸವಾಲುಗಳನ್ನು ಗೆದ್ದು ದೊಡ್ಡಮನೆ ಪ್ರವೇಶಿಸಿದ್ದ ಲಿಖಿತ್‌ ಗೋಂದಿ, ಇದೀಗ ಅತಿ ಕಡಿಮೆ ಮತಗಳನ್ನು ಪಡೆದು ಬಿಗ್‌ ಬಾಸ್‌ ಪಯಣವನ್ನು ಅಂತ್ಯಗೊಳಿಸಿದ್ದಾರೆ.

ವಾರಾಂತ್ಯದ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್‌ “ಈ ವಾರ ಯಾರು ಹೊರಹೋಗಬೇಕು?” ಎಂದು ಕೇಳಿದಾಗ, ಮನೆಮಂದಿಯೆಲ್ಲಾ ಯಶಸ್‌ ಕೃಷ್ಣ ಹೆಸರನ್ನೇ ಸೂಚಿಸಿದ್ದರು. ಯಶಸ್‌ ಆಟದ ವೈಖರಿ ಮತ್ತು ನಡವಳಿಕೆಯನ್ನು ಕಾರಣವಾಗಿಸಿ ಅವರೇ ಔಟ್ ಆಗುತ್ತಾರೆ ಎಂದು ಅಂದಾಜಿಸಲಾಗಿತ್ತು. ಆದ್ರೆ ಪ್ರೇಕ್ಷಕರ ವೋಟಿಂಗ್‌ ಆಧಾರದಲ್ಲಿ ಯಶಸ್‌ ಮೊದಲನೆಯವರಾಗಿ ಸೇಫ್‌ ಆಗುವ ಮೂಲಕ ಮನೆಮಂದಿಗೆ ಶಾಕ್ ನೀಡಿದರು. ತದನಂತರ ಮಂಜ ಹಾಗೂ ಧನುಷ್‌ ಅವರನ್ನು ಸುದೀಪ್‌ ಸೇವ್‌ ಮಾಡಿದರು.

ಅಂತಿಮವಾಗಿ ಡೇಂಜರ್ ಝೋನ್‌ನಲ್ಲಿದ್ದ ಸಂಗೀತಾ, ಕಿರಣ್‌‌ ಶಾಸ್ತ್ರಿ ಹಾಗೂ ಲಿಖಿತ್‌ ಅವರನ್ನು ಕಮಾಂಡೋಸ್‌ ತಂಡ ಮನೆಯಿಂದ ಹೊರಗೆ ಕರೆದೊಯ್ಯಿತು. ತೀವ್ರ ಕುತೂಹಲ ಮೂಡಿಸಿದ್ದ ಈ ಹಂತದ ಕೊನೆಯಲ್ಲಿ ಸಂಗೀತಾ ಮತ್ತು ಕಿರಣ್‌ ಮತ್ತೆ ದೊಡ್ಮನೆಗೆ ವಾಪಸ್ಸಾದರೆ, ಲಿಖಿತ್‌ ಮಾತ್ರ ನೇರವಾಗಿ ವೇದಿಕೆಗೆ ಎಂಟ್ರಿ ಕೊಟ್ಟು ಎಲಿಮಿನೇಟ್ ಆದರು.

ವೇದಿಕೆ ಮೇಲೆ ತಮ್ಮ ‘ಜರ್ನಿ ವಿಟಿ’ ಕಂಡು ಲಿಖಿತ್ ಅತ್ಯಂತ ಭಾವುಕರಾಗಿ ಕಣ್ಣೀರಿಟ್ಟಾಗ, ಕಿಚ್ಚ ಸುದೀಪ್‌ ಬೆನ್ನ ತಟ್ಟಿ ಸಾಂತ್ವನ ಹೇಳಿದರು. ಮನೆಯಲ್ಲಿ ತಮ್ಮದೇ ಚೇಷ್ಟೆಗಳಿಂದ ಎಲ್ಲರನ್ನು ರಂಜಿಸಿದ್ದ ಲಿಖಿತ್‌ಗೆ ಕಾರ್ಯಕ್ರಮದ ಸ್ಪಾನ್ಸರ್ಸ್ ಕಡೆಯಿಂದ 3.5 ಲಕ್ಷ ರೂಪಾಯಿ ನಗದು ಬಹುಮಾನದ ಚೆಕ್ ನೀಡಲಾಯಿತು. ‘ಅಗ್ನಿಪರೀಕ್ಷೆ’ ಮೂಲಕ ಬಂದ ನಾಲ್ವರಲ್ಲಿ ಲಿಖಿತ್‌ ಮೊದಲಿಗರಾಗಿ ಹೊರಬಿದ್ದರೂ, ಅವರ ಗೆಳೆಯ ಮಂಜ ಮಾತ್ರ “ಲಿಖಿತ್‌ ಮತ್ತೆ ವಾಪಸ್ ಬರ್ತಾನೆ” ಎಂಬ ನಿರೀಕ್ಷೆಯಲ್ಲಿದ್ದಾರೆ.