Home Advertisement
Home ನಮ್ಮ ಜಿಲ್ಲೆ ತುಮಕೂರು ಒಬ್ಬಳು ಸಾಲದು.. ಇಬ್ಬರು ಸಾಲದು.. ಟೆಕ್ಕಿಯ ಮದುವೆ ದಾಹಕ್ಕೆ ಬಿತ್ತು ಬ್ರೇಕ್!

ಒಬ್ಬಳು ಸಾಲದು.. ಇಬ್ಬರು ಸಾಲದು.. ಟೆಕ್ಕಿಯ ಮದುವೆ ದಾಹಕ್ಕೆ ಬಿತ್ತು ಬ್ರೇಕ್!

0
60

ಬೆಂಗಳೂರು: ಎರಡು ಮದುವೆಯಾಗಿದ್ದರೂ ಮತ್ತೊಬ್ಬಳ ಜೊತೆ ಎಂಗೇಜೆಂಟ್ ಮಾಡಿಕೊಂಡು ಸಿಕ್ಕಿಬಿದ್ದ ಮನ್ಮಥ ಟೆಕ್ಕಿಗೆ ಹುಡುಗಿಯ ಮನೆಯವರು ಹಾಗೂ ಮೊದಲ ಪತ್ನಿ ಧರ್ಮದೇಟು ನೀಡಿದ ಘಟನೆ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತುಮಕೂರಿನ ಚಿಕ್ಕನಾಯಕನಹಳ್ಳಿ ಮೂಲದ ರವಿ ಎಂಬಾತ ಹೀಗೆ ಹೆಣ್ಣುಮಕ್ಕಳ ಬಾಳಲ್ಲಿ ಆಟ ಆಡಲು ಹೋಗಿ ಪೆಟ್ಟು ತಿಂದು ಇದೀಗ ನಾಪತ್ತೆಯಾಗಿದ್ದಾನೆ. ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿದ್ದ ಈತನಿಗೆ ಮದುವೆ ಆಗೋದೆ ಬಿಸಿನೆಸ್ ಆಗಿತ್ತು.

ಇವನ ಚಪಲಕ್ಕೆ ಇಡೀ ಕುಟುಂಬವೇ ಸಾಥ್ ಕೊಡುತ್ತಿತ್ತು ಎಂದು ತಿಳಿದುಬಂದಿದೆ. 2024ರ ಜನವರಿಯಲ್ಲಿ ರವಿ ಯುವತಿಯೊಬ್ಬಳನ್ನು ಮದುವೆಯಾಗಿದ್ದ. ಸ್ವಲ್ಪ ದಿನಗಳ ಬಳಿಕ ಬೇರೆ ಹೆಣ್ಣುಮಕ್ಕಳ ದೇಹದ ಬಗ್ಗೆ ಪತ್ನಿಯ ಜೊತೆ ವರ್ಣನೆ ಮಾಡುತ್ತಿದ್ದ. ವರದಕ್ಷಿಣೆ ತೆಗೆದುಕೊಂಡು ಬಾ. ನಿನ್ನ ಸ್ನೇಹಿತರನ್ನು ಮನೆಗೆ ಕರೆಸು ಎನ್ನುತ್ತಿದ್ದ. ಇದರಿಂದ ಮೊದಲನೇ ಪತ್ನಿ ಬೇಸತ್ತಿದ್ದಳು.

ಇನ್ನೂ ಪತ್ನಿ ಗರ್ಭಿಣಿಯಾದಾಗ ಮತ್ತೆ ಹುಡುಗಿ ನೋಡೋಕೆ ಶುರು ಮಾಡಿದ್ದ. ತನಗೆ ಮದುವೆ ಆಗಿಲ್ಲ ಎಂದು ತನ್ನ ಕುಟುಂಬದವರ ಜೊತೆ ಊರೂರು ಸುತ್ತುತ್ತಿದ್ದ. ಕಳೆದ ಅಕ್ಟೋಬರ್‌ನಲ್ಲಿ ಮತ್ತೆ ಎಂಗೇಜೆಂಟ್ಕೂಡ ಮಾಡಿಕೊಂಡಿದ್ದ. ಈ ವಿಚಾರ ಮೊದಲ ಪತ್ನಿಗೆ ತಿಳಿದಿತ್ತು. ಬಳಿಕ ಎಂಗೇಜೆಂಟ್ ಆದ ಹುಡುಗಿ ಕುಟುಂಬಕ್ಕೆ ವಿಚಾರ ತಿಳಿಸಿದ್ದರು. ಆಗ ರವಿ ಮನೆಗೆ ಬಂದ ಹುಡುಗಿ ಕುಟುಂಬದವರು ಧರ್ಮದೇಟು ನೀಡಿದ್ದರು.

2025ರ ಡಿಸೆಂಬರ್‌ನಲ್ಲಿ ಮೊದಲ ಪತ್ನಿ ಹೆರಿಗೆಗೆ ಹೋದಾಗ, ತನಗೆ ಮದುವೆಯಾಗಿಲ್ಲ ಎಂದು ಸುಳ್ಳು ಹೇಳಿ ಮತ್ತೋರ್ವ ಯುವತಿಯನ್ನು ಮದುವೆಯಾಗಿದ್ದ, ಎರಡನೇ ಮದುವೆ ವಿಚಾರ ತಿಳಿದು ರವಿ ಮನೆಗೆ ಹೋಗಿದ್ದ ಮೊದಲ ಪತ್ನಿ ಹಾಗೂ ಕುಟುಂಬಸ್ಥರು ಆತನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ರವಿ ವಂಚನೆ ಬಗ್ಗೆ ಜಿಗಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರ ಹುಡುಕಾಟ ಆರಂಭಿಸಿದ್ದಾರೆ