SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಸಾರ್ವಜನಿಕ ನಮಾಜ್ ಮಾಡದಿರಲು ಮುಸ್ಲಿಮರ ನಿರ್ಧಾರ

ಸಾರ್ವಜನಿಕ ನಮಾಜ್ ಮಾಡದಿರಲು ಮುಸ್ಲಿಮರ ನಿರ್ಧಾರ

0
375

ಭಟ್ಕಳ: ಕಳೆದ ಭಾನುವಾರದಿಂದ ಭಟ್ಕಳದಲ್ಲಿ ಉದ್ವಿಗ್ನತೆಯ ವಾತಾವರಣ ಇರುವುದರಿಂದ ಮೇ 28ರಂದು ನಡೆಯಲಿರುವ ಬಕ್ರೀದ್ ಸಾಮೂಹಿಕ ಪ್ರಾರ್ಥನೆಯನ್ನು ಈದ್ಗಾ ಮೈದಾನದಲ್ಲಿ ಮಾಡದೇ ಮಸೀದಿಗಳಲ್ಲಿಯೇ ಮಾಡಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.

ಈ ಹಿಂದೆ ಬಕ್ರೀದ್ ಹಬ್ಬದ ಸಾಮೂಹಿ ಪ್ರಾಥನೆಯನ್ನು ಮಳೆಯ ಸಾಧ್ಯತೆ ಇಲ್ಲವಾದಲ್ಲಿ ಈದ್ಗಾ ಮೈದಾನದಲ್ಲಿ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ತನ್ಮಧ್ಯೆ ಕೆಲವೊಂದು ಕಹಿ ಘಟನೆಗಳು ಸಂಭವಿಸಿದ್ದರಿಂದ ಮತ್ತು ಪೊಲೀಸ್ ಇಲಾಖೆಯ ನಿರ್ದೇಶನದಂತೆ ಒಳಾಂಗಣದಲ್ಲಿಯೇ ವಿಶೇಷ ಪ್ರಾರ್ಥನೆ ಸಲ್ಲಿಸಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.

ಈದ್ಗಾ ಮೈದಾನದಲ್ಲಿ ವಿಶೇಷ ನಮಾಜ್ ಮಾಡುವುದಾದಲ್ಲಿ ಚಿನ್ನದ ಪಳ್ಳಿಯಿಂದ ಮುಖ್ಯ ಖಾಝಿಯವರನ್ನು ಮೆರವಣಿಗೆಯಲ್ಲಿ ಕರೆತರುವುದು ವಾಡಿಕೆಯಾಗಿತ್ತು. ಆದರೆ ಈ ಬಾರಿ ಯಾವುದೇ ಮೆರವಣಿಗೆಯನ್ನು ಕೂಡಾ ನಡೆಸದಿರಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.