Home Advertisement
Home ನಮ್ಮ ಜಿಲ್ಲೆ ಕಲಬುರಗಿ ಮನೆ ಮಾಲೀಕ ಸೇರಿ ಇಬ್ಬರು ಉಸಿರುಗಟ್ಟಿ ಸಾವು

ಮನೆ ಮಾಲೀಕ ಸೇರಿ ಇಬ್ಬರು ಉಸಿರುಗಟ್ಟಿ ಸಾವು

0
196

ಕಲಬುರಗಿ: ಮನೆ ಪ್ರಾಂಗಣದ ಸೆಫ್ಟಿ ಟ್ಯಾಂಕ್ ಸ್ವಚ್ಚಗೊಳಿಸಲು ಇಳಿದಿದ್ದ ಕೂಲಿಕಾರನೊಬ್ಬ ಹೊರಬರದಿದ್ದಾಗ ಮನೆ ಮಾಲೀಕನೂ ಸಹ ಒಳಗೆ ಇಳಿದು ಪ್ರಾಣ ರಕ್ಷಿಸಲು ಹೋಗಿ ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ನಗರದ ಹೀರಾಪುರ ಸಮೀಪದ ರೈಲ್ವೆ ಬ್ರಿಡ್ಜ್ ಬಳಿ ಮಾದರಸನಹಳ್ಳಿ ಬಡಾವಣೆಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.

ಮಾದರಸನಹಳ್ಳಿಯ ಬಡಾವಣೆಯ ನಿವಾಸಿ ಶಿವಕುಮಾರ ನಂದೂರ ಅವರಿಗೆ ಸೇರಿದ ಸ್ವಂತ ಮನೆಯ ಸೆಫ್ಟಿ ಟ್ಯಾಂಕ್ ಒಳಗೆ ಇಳಿದಿದ್ದ ಇಂದಿರಾ ನಗರದ ನಿವಾಸಿ ರತನಕುಮಾರ ಪಲಕರ್ (60) ಮೃತಪಟ್ಟ ಕೂಲಿಕಾರ.

ಇದನ್ನೂ ಓದಿ: ಬೈಕ್–ಲಾರಿ ಡಿಕ್ಕಿ, ಒಂದೇ ಕುಟುಂಬದ ಮೂವರು ಮೃತ್ಯು

ಸೆಫ್ಟಿ ಟ್ಯಾಂಕ್ ಒಳಗೆ ಇಳಿದಿದ್ದ ಕೂಲಿಕಾರ ಕೆಲ ಹೊತ್ತು ಹೊರಗೆ ಬಾರದಿದ್ದಾಗ ಅನುಮಾನಗೊಂಡು ಮನೆ ಮಾಲೀಕ ಶಿವಕುಮಾರ ಸಹ ಸೆಫ್ಟಿ ಟ್ಯಾಂಕ್ ಒಳಗೆ ಇಳಿದಿದ್ದಾನೆ. ಕೂಲಿಕಾರನನ್ನು ಪ್ರಾಣ ರಕ್ಷಿಸಲು ಹೋದ ಮನೆ ಮಾಲೀಕನು ಉಸಿರುಗಟ್ಟಿ ಹೊರಗೆ ಬಾರದೇ ಚೀರಾಡಿದ್ದಾನೆ. ತಕ್ಷಣ ಕುಟುಂಬಸ್ಥರು ಕಿರಾಚುಡುತ್ತಿದ್ದನ್ನು ಗಮನಿಸಿದ ಸಾರ್ವಜನಿಕರು ಆ ಇಬ್ಬರನ್ನು ಹೊರಗೆ ತೆಗೆದು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆದಲ್ಲಿ ಕೊನೆಯುಸಿರೆಳೆದಿದ್ದಾನೆ.

ಮೃತರಿಬ್ಬರು ಪರಸ್ಪರ ಪರಿಚಯಸ್ಥರಾಗಿದ್ದರು ಎಂದು ಅಶೋಕ ನಗರ ಠಾಣೆ ಪಿಐ ಸತೀಶ ಕಣಮೇಶ್ವರ `ಸಂಯುಕ್ತ ಕರ್ನಾಟಕ’ಕ್ಕೆ ತಿಳಿಸಿದರು. ಈ ಬಗ್ಗೆ ಮೃತ ರತನಕುಮಾರ ಪುತ್ರ ಸತೀಶ ಅಶೋಕ ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.