ಬೆಂಗಳೂರು: ಕಲಘಟಗಿ- ಅಳ್ನಾವರ ಮತಕ್ಷೇತ್ರದ ಶಾಸಕರಾದ ಸಂತೋಷ್ ಲಾಡ್ ಅವರು, ನಿಯೋಜಿತ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಶುಭ ಕೋರಿದರು.
ಶನಿವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಡಿ.ಕೆ. ಶಿವಕುಮಾರ್ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದರು.
ನೂತನ ಮುಖ್ಯಮಂತ್ರಿಗಳಾಗಿ ಡಿ ಕೆ ಶಿವಕುಮಾರ್ ಅವರು ಜೂನ್ 3 ರಂದು ಲೋಕಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.





















