SK Home Ad
Home ನಮ್ಮ ಜಿಲ್ಲೆ ದಾವಣಗೆರೆ POCSO ಪ್ರಕರಣ: ವಚನಾನಂದ ಸ್ವಾಮೀಜಿಗೆ ನಿಯಮಿತ ಜಾಮೀನು

POCSO ಪ್ರಕರಣ: ವಚನಾನಂದ ಸ್ವಾಮೀಜಿಗೆ ನಿಯಮಿತ ಜಾಮೀನು

0
77

ಫೋಕ್ಸೊ ಪ್ರಕರಣದಲ್ಲಿ ಪದಚ್ಯುತ ವಚನಾನಂದ ಸ್ವಾಮೀಜಿಗೆ ರೆಗ್ಯೂಲರ್ ಜಾಮೀನು; ದಾವಣಗೆರೆ ವಿಶೇಷ ನ್ಯಾಯಾಲಯ ಆದೇಶ

ದಾವಣಗೆರೆ: ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪದಚ್ಯುತ ಶ್ರೀ ವಚನಾನಂದ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಫೋಕ್ಸೊ (POCSO) ಪ್ರಕರಣದಲ್ಲಿ ದಾವಣಗೆರೆಯ ವಿಶೇಷ ಫೋಕ್ಸೊ ನ್ಯಾಯಾಲಯವು ಮಹತ್ವದ ಆದೇಶ ಹೊರಡಿಸಿದ್ದು, ಸ್ವಾಮೀಜಿಗೆ ರೆಗ್ಯೂಲರ್ ಜಾಮೀನು ಮಂಜೂರು ಮಾಡಿದೆ.

ಈ ಹಿಂದೆ ವಚನಾನಂದ ಸ್ವಾಮೀಜಿಗೆ ದೊರೆತಿದ್ದ ನಿರೀಕ್ಷಣಾ ಜಾಮೀನು (ಆಂಟಿಸಿಪೇಟರಿ ಬೇಲ್) ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು. ಇದರ ಬೆನ್ನಲ್ಲೇ ಅವರು ದಾವಣಗೆರೆಯ ವಿಶೇಷ ಫೋಕ್ಸೊ ನ್ಯಾಯಾಲಯದಲ್ಲಿ ನಿಯಮಿತ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ತಮಿಳುನಾಡಿನಲ್ಲಿ ಗೋಹತ್ಯೆ ನಿಷೇಧಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್

ಸುದೀರ್ಘ ವಾದ-ಪ್ರತಿವಾದ : ಜಾಮೀನು ಅರ್ಜಿಯ ವಿಚಾರಣೆ ಜುಲೈ 3ರಂದು ಆರಂಭವಾಗಿದ್ದು, ಸ್ವಾಮೀಜಿಯವರ ಪರ ವಕೀಲರು ನ್ಯಾಯಾಲಯದಲ್ಲಿ ತಮ್ಮ ವಾದ ಮಂಡಿಸಿದ್ದರು. ಬಳಿಕ ಜುಲೈ 4ರಂದು ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರು (ಪಿಪಿ) ಪ್ರಬಲ ವಾದ ಮಂಡಿಸಿದರು.

ಅನಂತರ ಉಭಯ ಪಕ್ಷಗಳ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಜುಲೈ 6ಕ್ಕೆ ಮುಂದೂಡಿತ್ತು. ಅಂದು ದೂರದಾರರ ಪರ ವಕೀಲರು ತಮ್ಮ ವಾದ ಮಂಡಿಸಿ, ಜಾಮೀನು ಅರ್ಜಿಯನ್ನು ವಿರೋಧಿಸಿದರು.

ಇದನ್ನೂ ಓದಿ: ತಮಿಳುನಾಡಿನಲ್ಲಿ ಗೋಹತ್ಯೆ ನಿಷೇಧಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್

ಪ್ರಕರಣದ ಎಲ್ಲಾ ಅಂಶಗಳನ್ನು ಸುದೀರ್ಘವಾಗಿ ಪರಿಶೀಲಿಸಿದ ನ್ಯಾಯಾಲಯವು ತನ್ನ ಅಂತಿಮ ಆದೇಶವನ್ನು ಕಾಯ್ದಿರಿಸಿ, ಸೋಮವಾರ (ಜುಲೈ 13) ಪ್ರಕಟಿಸುವುದಾಗಿ ತಿಳಿಸಿತ್ತು. ಅದರಂತೆ ಇಂದು ವಿಶೇಷ ಫೋಕ್ಸೊ ನ್ಯಾಯಾಲಯವು ವಚನಾನಂದ ಸ್ವಾಮೀಜಿಗೆ ರೆಗ್ಯೂಲರ್ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಮಹತ್ವದ ಕಾನೂನು ಪರಿಹಾರ : ನ್ಯಾಯಾಲಯದ ಈ ಆದೇಶದಿಂದ ವಚನಾನಂದ ಸ್ವಾಮೀಜಿಗೆ ಸದ್ಯದ ಮಟ್ಟಿಗೆ ಮಹತ್ವದ ಕಾನೂನು ಪರಿಹಾರ ದೊರೆತಂತಾಗಿದೆ. ಆದರೆ, ಜಾಮೀನು ದೊರೆತಿರುವುದರಿಂದ ಪ್ರಕರಣದ ವಿಚಾರಣೆ ಅಂತ್ಯಗೊಂಡಿಲ್ಲ. ಪ್ರಕರಣದ ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆ ಮುಂದುವರಿಯಲಿದ್ದು, ಮುಂದಿನ ದಿನಗಳಲ್ಲಿ ವಿಚಾರಣೆ ಮತ್ತಷ್ಟು ಮಹತ್ವ ಪಡೆದುಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: H. D ರೇವಣ್ಣಗೆ ಮತ್ತೆ ಕಾನೂನು ಸಂಕಷ್ಟ: ಸುಪ್ರೀಂನಿಂದ ನೋಟಿಸ್

ಈ ಪ್ರಕರಣ ರಾಜ್ಯದಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ವಿಶೇಷವಾಗಿ ಪಂಚಮಸಾಲಿ ಸಮುದಾಯ ಮತ್ತು ಧಾರ್ಮಿಕ ವಲಯಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.