SK Home Ad
Home ನಮ್ಮ ಜಿಲ್ಲೆ ಶಿವಮೊಗ್ಗ ಕಾಂಗ್ರೆಸ್‌ಗೂ ಭ್ರಷ್ಟಾಚಾರಕ್ಕೂ ಅವಿನಭಾವ ಸಂಬಂಧ

ಕಾಂಗ್ರೆಸ್‌ಗೂ ಭ್ರಷ್ಟಾಚಾರಕ್ಕೂ ಅವಿನಭಾವ ಸಂಬಂಧ

0
41

ಶಿವಮೊಗ್ಗ: ಕಾಂಗ್ರೆಸ್‌ಗೂ ಭ್ರಷ್ಟಾಚಾರಕ್ಕೂ ಅವಿನಭಾವ ಸಂಬಂಧ ಇದೆ. ಕಳೆದ ಮೂರು ವರ್ಷದಲ್ಲಿ ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿದ್ದು, ಅಭಿವೃದ್ಧಿ ಕುರಿತಂತೆ ಶ್ವೇತಪತ್ರ ಹೊರಡಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.

ಮಾಧ್ಯಮಗಳ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ವರ್ಗಕ್ಕೂ ಗ್ಯಾರಂಟಿ ನೀಡುವುದಾಗಿ ಹೇಳಿದ್ದರು. ಈಗ ಹಣ ಹೊಂದಿಸಲು ಆಗದೆ, ಲಕ್ಷಾಂತರ ಫಲನುಭವಿಗಳನ್ನು ಕಡಿತ ಮಾಡಲು ಹೊರಟಿರುವುದು ಸರಿಯಾದ ಕ್ರಮವಲ್ಲ. ಈಗ ರಾಜ್ಯ ಸರ್ಕಾರ ಹಣಕಾಸಿನ ಪರಿಸ್ಥಿತಿ, ವಾಸ್ತವದ ಬಗ್ಗೆ ಶ್ವೇತಪತ್ರ ಹೊರಡಿಸಬೇಕಿದೆ ಎಂದರು.

ಹಿಮಾಚಲ ಪ್ರದೇಶದ ಸರ್ಕಾರ ಗ್ಯಾರಂಟಿ ಘೋಷಿಸಿ ಕಷ್ಟಕ್ಕೆ ಸಿಲುಕಿಕೊಂಡಿದೆ. ತೆಲಂಗಾಣದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಕಾಂಗ್ರೆಸ್ ಸರ್ಕಾರ ಇಲ್ಲಿನ ಜನರಿಗೆ ಅಪಮಾನ ಮಾಡುವ ಕೆಲಸ ಮಾಡುತ್ತಿದೆ. ಸಿಎಂ ಡಿ.ಕೆ. ಶಿವಕುಮಾರ್ ಅವರ ತಾಳ್ಮೆಗೆ ಅಭಿನಂದಿಸಬೇಕು ಎಂದು ಹೇಳಿದರು.

ಬಿಡದಿ ಭೂಮಿ ಸಂಬಂಧ ಶೇ. 90ರಷ್ಟು ರೈತರು ವಿರೋಧಿಸಿದ್ದಾರೆ. ಬಲವಂತವಾಗಿ ಭೂಮಿ ವಶಪಡಿಸಿಕೊಳ್ಳುವುದನ್ನು ನಿಲ್ಲಿಸುವಂತೆ ರಾಹುಲ್ ಗಾಂಧಿಗೆ ಮನವಿ ಮಾಡುವುದಾಗಿ ತಿಳಿಸಿದರು.