ಚಿತ್ರದುರ್ಗ: ಕಾಂಗ್ರೆಸ್ ಆಡಳಿತದಲ್ಲಿ ದಲಿತರಿಗೆ ಅನ್ಯಾಯವಾಗುತ್ತಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಆರೋಪಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಎಸ್ಸಿ/ಎಸ್ಟಿ ಮೀಸಲಾತಿ ಹೆಚ್ಚಳ ಮಾಡಲಾಗಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಕೋರ್ಟ್ನಲ್ಲಿ ಸೂಕ್ತ ವಾದ ಮಂಡಿಸದ ಕಾರಣ ರದ್ದಾಗಿದೆ. ಈ ಸರ್ಕಾರಕ್ಕೆ ಏನು ದಾಡಿ ಆಗಿದೆ ಎಂದು ಕಿಡಿಕಾರಿದರು. ಸರ್ಕಾರ ಸರಿಯಾಗಿ ವಾದಿಸಿದ್ದರೆ ಈ ಅನ್ಯಾಯ ಆಗುತ್ತಿರಲಿಲ್ಲ. ನಗಬೇಕೋ, ತಮಾಷೆ ಮಾಡಬೇಕೋ ನಮಗೆ ಅರ್ಥವಾಗುತ್ತಿಲ್ಲ ಎಂದರು.
ದೆಹಲಿಯಲ್ಲಿ ಸಿಎಂ ಡಿಕೆಶಿ ಅವರನ್ನು ಎಳೆದಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಅಂಗರಕ್ಷಕರು ಎಳೆದೆಳೆದು ಹಿಂದಕ್ಕೆ ಹಾಕುತ್ತಿದ್ದರು. ವಯಸ್ಸಿಗಾದರೂ ರಾಹುಲ್ ಗಾಂಧಿ ಗೌರವ ನೀಡಬೇಕಿತ್ತು. ಇದು ಸಿಎಂ ಡಿಕೆಶಿಗೆ ಮಾಡಿದ ಅಪಮಾನವಲ್ಲ, ರಾಜ್ಯಕ್ಕೆ ಮಾಡಿದ ಅಪಮಾನ. ಹುಷಾರಾಗಿರಪ್ಪ ನೀನು, ವಯಸ್ಸಾಗಿದೆ ನಿನಗೆ ಎಂದು ಡಿಕೆಶಿಗೆ ಹೇಳುತ್ತೇನೆ ಎಂದರು.
ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಕೇವಲ SIR ಬಗ್ಗೆ, ಸ್ಟಿಂಗ್ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ ಕಚೇರಿ ಸಿಡಿ ಫ್ಯಾಕ್ಟರಿಯಾಗಿದೆ ಎಂದು ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಅವರ ಮುಖ ನೋಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ ಓರ್ವ ದೊಡ್ಡ ಮಹಾನ್ ನಾಯಕರು. ಇಂದು ಅವರು ಕೋರ್ಟ್ನಲ್ಲಿ ಸ್ಟೇ ತೆಗೆದುಕೊಳ್ಳುವಂತಾಗಿದೆ. ಸ್ಟಿಂಗ್ ಆಪರೇಷನ್ ಯಾರು ಮಾಡುತ್ತಿದ್ದಾರೆ? ಮಾಡುತ್ತಿರುವುದು ನೀವೇ ಅಲ್ಲವೇ? ದೊಡ್ಡ ಸ್ಥಾನಕ್ಕೆ ಹೋಗಲು ಸ್ಟಿಂಗ್ ಆಪರೇಷನ್ ಮಾಡಿದ್ದೀರಿ.
ಇದು ದೊಡ್ಡ ವ್ಯಕ್ತಿ ಸಿದ್ದರಾಮಯ್ಯಗೆ ಮಾಡಿದ ಅಪಮಾನ ಎಂದರು. ಸ್ಟಿಂಗ್ ಆಪರೇಷನ್ ನಿಂದ ಯಾರ ಹೊಟ್ಟೆಯೂ ತುಂಬುವುದಿಲ್ಲ. ಸಿದ್ದರಾಮಯ್ಯ ಅವರಿಗೆ ಅಪಮಾನ ಮಾಡಿ ನೀವು ಸಂತೋಷ ಪಡಬಹುದು, ಆದರೆ ಅವರಿಗೆ ಒಳ್ಳೆಯ ದಿನ ಬಂದಾಗ ನೀವು ಕಣ್ಣೀರು ಹಾಕಬೇಕಾಗುತ್ತದೆ. ಡಿಕೆಶಿ ವ್ಯಾಪಾರಸ್ಥ ಸಿಎಂ, ಒಳ್ಳೆಯ ಸಿಎಂ ಅಲ್ಲ. ಸ್ಟಿಂಗ್ ಆಪರೇಷನ್ ಬಗ್ಗೆ ಹೇಳುವ ಸಿಎಂ ಡಿಕೆಶಿ, ಅದರ ಪ್ರೊಡ್ಯೂಸರ್ ಯಾರು, ಡೈರೆಕ್ಟರ್ ಯಾರು ಎಂದು ಹೇಳಬೇಕು ಎಂದು ಕಿಡಿಕಾರಿದರು.
- ಯಲಗೂರ ಕ್ರಾಸ್ ರಾಷ್ಟ್ರೀಯ ಹೆದ್ದಾರಿ ಬಂದ್ : ಕೇಂದ್ರ ಸರ್ಕಾರದ ವಿರುದ್ಧ ರೈತರ ಧರಣಿ
- ಕಾಂಗ್ರೆಸ್ ಕಚೇರಿ ಸಿಡಿ ಫ್ಯಾಕ್ಟರಿಯಾಗಿದೆ ಶ್ರಿರಾಮುಲು ಆರೋಪ
- ಗದ್ದನಕೇರಿ ಕ್ರಾಸ್ನಲ್ಲಿ ರೈತರ ಧರಣಿ: ಹೆದ್ದಾರಿ ಬಂದ್, ಪ್ರಯಾಣಿಕರ ಪರದಾಟ
- 🚧 ಧಾರವಾಡದಲ್ಲಿ ಕಬ್ಬು ರೈತರ ಆಕ್ರೋಶ: ಯರಿಕೊಪ್ಪ ಬೈಪಾಸ್ನಲ್ಲಿ ರಸ್ತೆ ತಡೆ – ಸಂಚಾರ ಮಾರ್ಗ ಬದಲಾವಣೆ
- 6 ಶಾಸಕರ ರಾಜೀನಾಮೆ ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್






















