ಕಾಫಿ ತೋಟದಲ್ಲಿ ಕಾರ್ಮಿಕರ ಮೇಲೆ ಹಲ್ಲೆ; ಮಾಲೀಕನ ಮಗನ ವಿರುದ್ಧ ಪ್ರಕರಣ
ಚಿಕ್ಕಮಗಳೂರು: ಕಾಫಿ ತೋಟದ ಮಾಲೀಕನ ಮಗ ವಲಸೆ ಕಾರ್ಮಿಕರ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಸಗೋಡು ಗ್ರಾಮದಲ್ಲಿ ನಡೆದಿದೆ.
ಒಂದು ಕೈಯಲ್ಲಿ ಬಂದೂಕು, ಮತ್ತೊಂದು ಕೈಯಲ್ಲಿ ದೊಣ್ಣೆ ಹಿಡಿದು ಮಹಿಳೆ ಸೇರಿದಂತೆ ಪುರುಷ ಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಹಲ್ಲೆ ನಡೆಸುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮಲ್ಲಂದೂರು ಸಮೀಪದ ಬಸಗೋಡು ಗ್ರಾಮದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ತಮಿಳುನಾಡು ಮೂಲದ ವಲಸೆ ಕಾರ್ಮಿಕರು ಶುಕ್ರವಾರ ಸಂಜೆ ತಮ್ಮ ಊರಿಗೆ ಮರಳಲು ಸಿದ್ಧತೆ ನಡೆಸಿದ್ದರು. ಈ ವೇಳೆ ಅವರನ್ನು ಅಡ್ಡಗಟ್ಟಿದ ತೋಟದ ಮಾಲೀಕನ ಮಗ ಎನ್ನಲಾದ ವ್ಯಕ್ತಿ ಮೊದಲು ಪುರುಷ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ನಂತರ ಮಹಿಳಾ ಕಾರ್ಮಿಕೆಯ ಮೇಲೂ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ತೀವ್ರತೆಗೆ ಮಹಿಳೆ ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದರೂ ಬಿಡದೆ ಹಲ್ಲೆ ಮುಂದುವರಿಸಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ ಎಂದು ತಿಳಿದುಬಂದಿದೆ.
ಇದೇ ವೇಳೆ, “ಸಾವಿರಾರು ಜನರಿಗೆ ಕೆಲಸ ಕೊಡುವ ಸಾಹುಕಾರನಿಗೆ ಚಪ್ಪಲಿ ತೋರಿಸುತ್ತೀರಾ?” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪವೂ ಕೇಳಿಬಂದಿದೆ.
ಕಾರ್ಮಿಕರ ಮೇಲೆ ನಡೆದಿರುವ ಈ ಹಲ್ಲೆ ಪ್ರಕರಣ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ವಲಸೆ ಕಾರ್ಮಿಕರ ಮೇಲೆ ನಡೆದಿರುವ ಹಲ್ಲೆ ಪ್ರಕರಣ ಇದೀಗ ಕಾಫಿನಾಡಿನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
- ಜಪಾನ್ ಮಾದರಿಯ ನಗರಾಭಿವೃದ್ಧಿ ಕರ್ನಾಟಕದಲ್ಲಿ ಜಾರಿಕರ್ನಾಟಕಕ್ಕೆ ಜಪಾನ್ ಹೂಡಿಕೆಗಳ ನಿರೀಕ್ಷೆ; ₹800 ಕೋಟಿ ಹೂಡಿಕೆಗೆ ಕವಾಸಕಿ ಒಪ್ಪಂದ, 600… Read more: ಜಪಾನ್ ಮಾದರಿಯ ನಗರಾಭಿವೃದ್ಧಿ ಕರ್ನಾಟಕದಲ್ಲಿ ಜಾರಿ
- ಬಂದೂಕು, ದೊಣ್ಣೆ ಹಿಡಿದು ವಲಸೆ ಕಾರ್ಮಿಕರ ಮೇಲೆ ಹಲ್ಲೆ ಆರೋಪ; ಕಾಫಿನಾಡಿನಲ್ಲಿ ವಿಡಿಯೋ ವೈರಲ್ಕಾಫಿ ತೋಟದಲ್ಲಿ ಕಾರ್ಮಿಕರ ಮೇಲೆ ಹಲ್ಲೆ; ಮಾಲೀಕನ ಮಗನ ವಿರುದ್ಧ ಪ್ರಕರಣ ಚಿಕ್ಕಮಗಳೂರು:… Read more: ಬಂದೂಕು, ದೊಣ್ಣೆ ಹಿಡಿದು ವಲಸೆ ಕಾರ್ಮಿಕರ ಮೇಲೆ ಹಲ್ಲೆ ಆರೋಪ; ಕಾಫಿನಾಡಿನಲ್ಲಿ ವಿಡಿಯೋ ವೈರಲ್
- ನಾಸಾ ವಿಜ್ಞಾನಿಯ ಕನಸಿಗೆ ₹129 ಕೋಟಿ ಬಲ: ಬೆಂಗಳೂರಿನಲ್ಲಿ ತಯಾರಾಗಲಿದೆ ದೇಶದ ಮೊದಲ ಸ್ವದೇಶಿ ಜೆಟ್ ಎಂಜಿನ್!ನಾಸಾ ಯೋಜನೆಗಳಲ್ಲಿ ಕೆಲಸ ಮಾಡಿದ ಸಂಶೋಧಕನಿಂದ ಭಾರತದಲ್ಲಿ ಜೆಟ್ ಎಂಜಿನ್ ನಿರ್ಮಾಣ: ಬೆಂಗಳೂರಿನ… Read more: ನಾಸಾ ವಿಜ್ಞಾನಿಯ ಕನಸಿಗೆ ₹129 ಕೋಟಿ ಬಲ: ಬೆಂಗಳೂರಿನಲ್ಲಿ ತಯಾರಾಗಲಿದೆ ದೇಶದ ಮೊದಲ ಸ್ವದೇಶಿ ಜೆಟ್ ಎಂಜಿನ್!
- ಹೆಪ್ಪುಗಟ್ಟಿದ ಕಾಶ್ಮೀರ ಕಣಿವೆ: ಲಡಾಖ್ನಲ್ಲಿ -8.2°C ದಾಖಲು! ❄️ಶೂನ್ಯಕ್ಕಿಂತ ಕೆಳಗೆ ಇಳಿದ ಕಾಶ್ಮೀರದ ಹಲವು ಪ್ರದೇಶಗಳ ತಾಪಮಾನ : ಡಿಸೆಂಬರ್ಗೂ ಮುನ್ನ… Read more: ಹೆಪ್ಪುಗಟ್ಟಿದ ಕಾಶ್ಮೀರ ಕಣಿವೆ: ಲಡಾಖ್ನಲ್ಲಿ -8.2°C ದಾಖಲು! ❄️
- ಮೊಬೈಲ್ನಿಂದ TV ಪರದೆಗೆ ರೀಲ್ಸ್: ಮೆಟಾದ ಹೊಸ ಸೇವೆ ಭಾರತಕ್ಕೆದೊಡ್ಡ ಪರದೆಯ ಮೇಲೆ ರೀಲ್ಸ್ ಹವಾ: ‘Instagram for TV’ ವಿಶೇಷತೆಗಳೇನು? ಮುಂಬೈ:… Read more: ಮೊಬೈಲ್ನಿಂದ TV ಪರದೆಗೆ ರೀಲ್ಸ್: ಮೆಟಾದ ಹೊಸ ಸೇವೆ ಭಾರತಕ್ಕೆ
- ಇಂದಿನಿಂದ ಕಾಶಿ-ತಮಿಳು ಸಂಗಮ 5.0: ಭಾಷೆಯ ಅಡೆತಡೆಯಿಲ್ಲದೆ ಕನ್ನಡದಲ್ಲೇ ವೀಕ್ಷಿಸಲು AI ಬಲಕಾಶಿ-ತಮಿಳು ಸಂಗಮಂ 5.0 ಇಂದಿನಿಂದ ಆರಂಭ: ಭಾಷಾ ವೈವಿಧ್ಯತೆಯ ನಡುವೆ ತಂತ್ರಜ್ಞಾನದ ಸಂಪರ್ಕ… Read more: ಇಂದಿನಿಂದ ಕಾಶಿ-ತಮಿಳು ಸಂಗಮ 5.0: ಭಾಷೆಯ ಅಡೆತಡೆಯಿಲ್ಲದೆ ಕನ್ನಡದಲ್ಲೇ ವೀಕ್ಷಿಸಲು AI ಬಲ



























