SK Home Ad
Home ನಮ್ಮ ಜಿಲ್ಲೆ ತುಮಕೂರು ಕೌಟುಂಬಿಕ ಕಲಹದ ವೇಳೆ ಅಡ್ಡಬಂದ ಮಗನನ್ನೇ ತಂದೆ ಹತ್ಯೆ

ಕೌಟುಂಬಿಕ ಕಲಹದ ವೇಳೆ ಅಡ್ಡಬಂದ ಮಗನನ್ನೇ ತಂದೆ ಹತ್ಯೆ

0
110

ತುಮಕೂರು: ಪತಿ-ಪತ್ನಿ ನಡುವಿನ ಜಗಳ ವಿಕೋಪಕ್ಕೆ ತಿರುಗಿ, ಮಧ್ಯಪ್ರವೇಶಿಸಿದ ಅಪ್ರಾಪ್ತ ಮಗನನ್ನೇ ತಂದೆ ಕೊಲೆ ಮಾಡಿರುವ ದಾರುಣ ಘಟನೆ ಕುಣಿಗಲ್‌ ತಾಲೂಕಿನ ಚೌಡನಾಯಕನ ಪಾಳ್ಯ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ನಡೆದಿದೆ.

ಗ್ರಾಮದ ನಂಜೇಗೌಡ (45) ತನ್ನ ಮಗ ಸುನೀಲ್‌ (16)ನನ್ನು ಹತ್ಯೆ ಮಾಡಿದ ಆರೋಪಿ. ಸುನೀಲ್‌ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯಾಗಿದ್ದ.

ನಂಜೇಗೌಡ ಮತ್ತು ಪತ್ನಿ ರಂಜಿತಾ ನಡುವೆ ಜಗಳ ನಡೆಯುತ್ತಿದ್ದ ಸಂದರ್ಭದಲ್ಲಿ ಸುನೀಲ್‌ ಮಧ್ಯಪ್ರವೇಶಿಸಿ ಅಡ್ಡಿಪಡಿಸಿದ್ದಾನೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ನಂಜೇಗೌಡ, ಹಾರೇಕೋಲಿನಿಂದ ಮಗನ ಮೇಲೆ ಹಲ್ಲೆ ನಡೆಸಿದ್ದು, ತೀವ್ರ ಗಾಯಗೊಂಡ ಸುನೀಲ್‌ ಮೃತಪಟ್ಟಿದ್ದಾನೆ.

ಘಟನಾ ಸ್ಥಳಕ್ಕೆ ಕುಣಿಗಲ್‌ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕುಣಿಗಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.