SK Home Ad
Home ಕೃಷಿ/ವಾಣಿಜ್ಯ ಬೆಂಗಳೂರು ಬಿಟ್ಟು ಮೈಸೂರಿನತ್ತ ಮುಖ ಮಾಡಿದರೆ ಮನೆ ಖರೀದಿದಾರರು!

ಬೆಂಗಳೂರು ಬಿಟ್ಟು ಮೈಸೂರಿನತ್ತ ಮುಖ ಮಾಡಿದರೆ ಮನೆ ಖರೀದಿದಾರರು!

0
28

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ಇದೀಗ ಕೇವಲ ಪ್ರವಾಸಿ ತಾಣವಾಗಿ ಉಳಿದಿಲ್ಲ. ಬದಲಿಗೆ ಹೊಸ ಮನೆ ಖರೀದಿದಾರರು ಮತ್ತು ರಿಯಲ್ ಎಸ್ಟೇಟ್ ಹೂಡಿಕೆದಾರರ ಮೊದಲ ಆದ್ಯತೆಯ ನಗರವಾಗಿ ಹೊರಹೊಮ್ಮುತ್ತಿದೆ. ಬೆಂಗಳೂರು, ಮುಂಬೈನಂತಹ ಮೆಟ್ರೋ ನಗರಗಳ ಟ್ರಾಫಿಕ್ ಕಿರಿಕಿರಿ ಮತ್ತು ದುಬಾರಿ ವೆಚ್ಚದಿಂದ ಬೇಸತ್ತ ಜನರಿಗೆ ಮೈಸೂರು ಉತ್ತಮ ಪರ್ಯಾಯ ತಾಣವಾಗಿದೆ.

ವೃತ್ತಿಪರ ಬೆಳವಣಿಗೆಯ ಜೊತೆಗೆ ಶುದ್ಧ ಪರಿಸರ, ನೆಮ್ಮದಿಯ ಜೀವನ ಹಾಗೂ ಕೈಗೆಟುಕುವ ವೆಚ್ಚದಲ್ಲಿ ಆಧುನಿಕ ಸೌಲಭ್ಯಗಳು ಸಿಗುತ್ತಿರುವುದು ಈ ಬದಲಾವಣೆಗೆ ಮುಖ್ಯ ಕಾರಣ ಎಂದು ವೈಷ್ಣವಿ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ದರ್ಶನ್ ಗೋವಿಂದರಾಜು ಅಭಿಪ್ರಾಯಪಟ್ಟಿದ್ದಾರೆ.

ಇನ್ಫೋಸಿಸ್‌ನ 337 ಎಕರೆ ಕ್ಯಾಂಪಸ್‌ನೊಂದಿಗೆ ಆರಂಭವಾದ ಐಟಿ ಬೆಳವಣಿಗೆ, ಇಂದು ಹಲವು ಜಾಗತಿಕ ಹಾಗೂ ದೇಶೀಯ ಕಂಪನಿಗಳನ್ನು ಮೈಸೂರಿನತ್ತ ಆಕರ್ಷಿಸುತ್ತಿದೆ. ಅನರಾಕ್ (ANAROCK) ವರದಿಯ ಪ್ರಕಾರ, ಮುಂದಿನ 5 ರಿಂದ 7 ವರ್ಷಗಳಲ್ಲಿ ನಗರದಲ್ಲಿ 20 ರಿಂದ 30 ಲಕ್ಷ ಚದರ ಅಡಿ ಗ್ರೇಡ್-ಎ ಕಚೇರಿ ಸ್ಥಳಾವಕಾಶ ಗುತ್ತಿಗೆಗೆ ಬರಲಿದೆ. ನೈಟ್ ಫ್ರಾಂಕ್ ಅಧ್ಯಯನದಂತೆ, ಮೈಸೂರಿನ ರಿಟೇಲ್ ಮಾರುಕಟ್ಟೆಯಲ್ಲಿ ಖಾಲಿ ಇರುವ ಜಾಗದ ಪ್ರಮಾಣ ಕೇವಲ ಶೇ. 2 ರಷ್ಟಿದ್ದು, ದೇಶದ ಪ್ರಮುಖ ಟಯರ್-2 ನಗರಗಳಲ್ಲೇ ಅತಿ ಬಲಿಷ್ಠ ಮಾರುಕಟ್ಟೆಯಾಗಿ ಹೊರಹೊಮ್ಮಿದೆ.

ಸರ್ಕಾರದ ಮಹತ್ವದ ಮೂಲಸೌಕರ್ಯ ಯೋಜನೆಗಳು ಈ ಬೆಳವಣಿಗೆಗೆ ಬಲ ನೀಡಿವೆ. ರೂ.393 ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ ನವೀಕರಣ, ಏರ್‌ಬಸ್ 320 ಕಾರ್ಯಾಚರಣೆಗೆ ಅನುಕೂಲವಾಗುವಂತೆ ಮೈಸೂರು ವಿಮಾನ ನಿಲ್ದಾಣದ ವಿಸ್ತರಣೆ ಮತ್ತು ರೂ.500 ಕೋಟಿ ವೆಚ್ಚದ ಫಿಲ್ಮ್ ಸಿಟಿ ಯೋಜನೆಗಳು ವಸತಿ ಕ್ಷೇತ್ರಕ್ಕೆ ಹೊಸ ಚೈತನ್ಯ ತಂದಿವೆ. ಬ್ಲೂಬ್ರೋಕರ್ ಸಂಸ್ಥೆಯ ಪ್ರಕಾರ, ಬೆಂಗಳೂರಿನ ಐಟಿ ಉದ್ಯೋಗಿಗಳಿಂದ ಮೈಸೂರಿನ ಆಸ್ತಿಗಳಿಗೆ ಭಾರೀ ಬೇಡಿಕೆ ಬರುತ್ತಿದೆ. ಇಲ್ಲಿ ಮುಡಾ (MUDA) ಅನುಮೋದಿತ ನಿವೇಶನಗಳು ಚದರ ಅಡಿಗೆ ರೂ.4,500 ರಿಂದ ರೂ.7,000 ಕೈಗೆಟುಕುವ ದರದಲ್ಲಿ ಲಭ್ಯವಿವೆ.

ಹೆಸರಾಂತ ರಿಯಲ್ ಎಸ್ಟೇಟ್ ಡೆವಲಪರ್‌ಗಳು ಹೊಸ ಯೋಜನೆಗಳನ್ನು ಆರಂಭಿಸುತ್ತಿರುವುದರಿಂದ ಮಾರುಕಟ್ಟೆಯ ಮೇಲಿನ ಗ್ರಾಹಕರ ವಿಶ್ವಾಸ ಹೆಚ್ಚಾಗಿದೆ. ಉತ್ತಮ ಶಿಕ್ಷಣ ಸಂಸ್ಥೆಗಳು, ನೈಸರ್ಗಿಕ ಸೌಂದರ್ಯ ಮತ್ತು ಉತ್ತಮ ಬಾಡಿಗೆ ಆದಾಯದ ನಿರೀಕ್ಷೆಯಲ್ಲಿ ಮೈಸೂರು ಭವಿಷ್ಯದ ರಿಯಲ್ ಎಸ್ಟೇಟ್ ಹಬ್ ಆಗಿ ಬೆಳೆಯುತ್ತಿದೆ.