SK Home Ad
Home ಕೃಷಿ/ವಾಣಿಜ್ಯ ಜಿಯೋ ಒಟಿಟಿ-ಪಾಸ್ ವ್ಯಾಪ್ತಿ ವಿಸ್ತರಣೆ: ₹2 ಸಾವಿರಕ್ಕೆ ವರ್ಷಪೂರ್ತಿ ಮನರಂಜನೆ

ಜಿಯೋ ಒಟಿಟಿ-ಪಾಸ್ ವ್ಯಾಪ್ತಿ ವಿಸ್ತರಣೆ: ₹2 ಸಾವಿರಕ್ಕೆ ವರ್ಷಪೂರ್ತಿ ಮನರಂಜನೆ

0
62

ನವದೆಹಲಿ: ಚಲನಚಿತ್ರಗಳು, ವೆಬ್ ಸರಣಿಗಳು, ಲೈವ್ ಸ್ಫೋರ್ಟ್ಸ್ ಮತ್ತು ಟಿವಿ ವೀಕ್ಷಿಸುವ ಜಿಯೋ ಗ್ರಾಹಕರಿಗೆ ದೀರ್ಘಾವಧಿಯ ಒಟಿಟಿ-ಪಾಸ್‌ಗಳು ಈಗ ಲಭ್ಯವಿವೆ. ಮೂರು ತಿಂಗಳ ಮತ್ತು ಒಂದು ವರ್ಷದ ಹೊಸ ಪ್ಲಾನ್‌ಗಳನ್ನು ಪರಿಚಯಿಸಲಾಗಿದೆ. ಎಲ್ಲಾ ಮೂರು ಪಾಸ್‌ಗಳು ಜಿಯೋ ಟಿವಿಯಲ್ಲಿ ಹೈಸ್ಪೀಡ್ ಡೇಟಾ, ಅನಿಯಮಿತ 5ಜಿ, 15 ಪ್ರೀಮಿಯಂ ಒಟಿಟಿ ಅಪ್ಲಿಕೇಶನ್‌ಗಳು ಮತ್ತು 1 ಸಾವಿರಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳಿಗೆ ಪ್ರವೇಶವನ್ನು ಪಡೆಯುತ್ತವೆ.

ಹೊಸ ಒಟಿಟಿ-ಪಾಸ್ ಒಂದು ವರ್ಷದ ಸಕ್ರಿಯ ಬೇಸ್ ಪ್ಲಾನ್ ಹೊಂದಿರುವ ಗ್ರಾಹಕರಿಗಾಗಿ ಇರುತ್ತದೆ. ಇದರಲ್ಲಿ ವಾಯ್ಸ್ ಓನ್ಲಿ ಪ್ಲಾನ್‌ಗಳನ್ನು ಸೇರಿಸಲಾಗಿಲ್ಲ.

ದೀರ್ಘಾವಧಿಯ ಪಾಸ್ ತೆಗೆದುಕೊಳ್ಳುವಾಗ ಗ್ರಾಹಕರಿಗೆ ವೆಚ್ಚವೂ ಕಡಿಮೆಯಾಗುತ್ತದೆ. ಗ್ರಾಹಕರು ಮೊದಲ 200 ರೂ., 28 ದಿನಗಳ ಪಾಸ್‌ಅನ್ನು ಮೂರು ಬಾರಿ ತೆಗೆದುಕೊಂಡಿದ್ದರೆ, ಅವರು 84 ದಿನಗಳಿಗೆ 600 ರೂ.ಗಳನ್ನು ಖರ್ಚು ಮಾಡಬೇಕಾಗಿತ್ತು, ಆದರೆ ಹೊಸ 84 ದಿನಗಳ ಪಾಸ್ 550 ರೂ. ಅಂದರೆ ನೇರ 50 ರೂಪಾಯಿ ಉಳಿತಾಯ. ಈಗ ವರ್ಷದ ಪಾಸ್‌ಗಾಗಿ 2,400 ರೂ.ಗಳ ಬದಲು 2,000 ರೂ.ಗಳನ್ನು ಮಾತ್ರ ಖರ್ಚು ಮಾಡಬೇಕಾಗುತ್ತದೆ. ಅಂದರೆ ಮೊದಲಿಗಿಂತ 400 ರೂಪಾಯಿ ಕಡಿಮೆ. ಈ ಅವಧಿಯಲ್ಲಿ ಡೇಟಾವು ಸಹ ಹೆಚ್ಚಾಗುತ್ತದೆ. 200 ರೂ.ಗಳ ಪಾಸ್‌ಗೆ 30 ಜಿಬಿ, 550 ರೂ.ಗಳ ವಾರ್ಷಿಕ ಪಾಸ್‌ಗೆ 90 ಜಿಬಿ ಮತ್ತು ವಾರ್ಷಿಕ 2,000 ರೂ.ಗಳ ಪಾಸ್‌ಗೆ 365 ಜಿಬಿ ಹೈಸ್ಪೀಡ್ ಡೇಟಾ ಸಿಗುತ್ತದೆ.

ಒಟಿಟಿ ಪ್ಯಾಕೇಜ್‌ನಲ್ಲಿ ಯೂಟ್ಯೂಬ್ ಪ್ರೀಮಿಯಂ, ಜಿಯೋ ಹಾಟ್‌ಸ್ಟಾರ್ ಮೊಬೈಲ್ + ಹಾಲಿವುಡ್ ಮತ್ತು ಅಮೆಜಾನ್ ಪ್ರೈಮ್ ಸೇರಿವೆ. ಅಮೆಜಾನ್ ಪ್ರೈಮ್ ಲೈಟ್ ಸದಸ್ಯತ್ವವು 550 ಮತ್ತು 2,000 ರೂ.ಗೆ ಲಭ್ಯವಿದ್ದರೆ, ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ 200 ರೂ.ಗೆ ಲಭ್ಯವಿರುತ್ತದೆ. ಇದಲ್ಲದೆ, ಗ್ರಾಹಕರು ಸೋನಿಲಿವ್, ಝೀ 5, ಲಯನ್ಸ್ ಗೇಟ್ ಪ್ಲೇ, ಡಿಸ್ಕವರಿ +, ಸನ್ ಎನ್‌ಎಕ್ಸ್‌ಟಿ, ಫ್ಯಾನ್ ಕೋಡ್, ಹೋಯ್ಚೋಯ್, ಚೌಪಾಲ್, ಪ್ಲಾನೆಟ್ ಮರಾಠಿ, ಕಾಂಚ ಲನ್ನಕಾ, ಟೈಮ್ಸ್ ಪ್ಲೇ ಮತ್ತು ತರಂಗ್ ಪ್ಲಸ್‌ ಸಹ ಬಳಸಬಹುದು.

ಜಿಯೋ ಟಿವಿಯಲ್ಲಿ 1,000 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳನ್ನು ವೀಕ್ಷಿಸಬಹುದು. ಇವುಗಳಲ್ಲಿ ಸ್ಟಾರ್ ಪ್ಲಸ್ ಎಚ್‌ಡಿ, ಕಲರ್ಸ್ ಎಚ್‌ಡಿ, ಸೆಟ್ ಎಚ್‌ಡಿ, ಸನ್ ಟಿವಿ ಎಚ್‌ಡಿ, ಡಿಸ್ಕವರಿ ಮತ್ತು ಕಾರ್ಟೂನ್ ನೆಟ್‌ವರ್ಕ್‌ನಂತಹ ಚಾನೆಲ್‌ಗಳು ಸೇರಿವೆ. ಕಂಪನಿಯ ಪ್ರಕಾರ, ಈ ಪ್ಯಾಕೇಜ್ ಗ್ರಾಹಕರಿಗೆ ಪ್ರತಿ ತಿಂಗಳು 1,500 ರೂ.ಗಿಂತ ಹೆಚ್ಚಿನ ಮೌಲ್ಯದ ಮನರಂಜನಾ ಪ್ರಯೋಜನಗಳನ್ನು ನೀಡುತ್ತದೆ. ಹೊಸ 550 ಮತ್ತು 2,000 ರೂ.ಗಳ ಒಟಿಟಿ-ಪಾಸ್‌ಗಳು ಆಗಸ್ಟ್ 7 ರಿಂದ ಮೈಜಿಯೋ ಆ್ಯಪ್, ಜಿಯೋ ವೆಬ್‌ಸೈಟ್ ಮತ್ತು ಅಧಿಕೃತ ರಿಟೇಲ್ ಮಳಿಗೆಗಳಲ್ಲಿ ಲಭ್ಯವಿದೆ.