ಅಹಮದಾಬಾದ್: ಇಂಡಿಯನ್ ಪ್ರಿಮಿಯರ್ ಲೀಗ್ ಪಂದ್ಯಾವಳಿ ಸದ್ಯ ಅಂತಿಮ ಘಟ್ಟಕ್ಕೆ ತಲುಪಿದೆ. ಇಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ತಂಡ ಪ್ರಶಸ್ತಿಗಾಗಿ ಸೆಣಸಾಡಲಿವೆ.
ಲೀಗ್‌ನಲ್ಲಿ ಕ್ರಮವಾಗಿ ಒಂದು ಮತ್ತು ಎರಡನೇ ಸ್ಥಾನವನ್ನು ಪಡೆದು ಕ್ವಾಲಿಫೈ ಆದ ಆರ್‌ಸಿಬಿ ಮತ್ತು ಜಿಟಿ ಎರಡೂ ತಂಡಗಳೇ ಮತ್ತೆ ಫೈನಲ್‌ನಲ್ಲಿ ಕಾದಡಲಿದ್ದು, ಇಲ್ಲಿ ಎರಡು ತಂಡಗಳಿಗೆ ಸಿಗುವ ಬಹುಮಾನದ ಮೊತ್ತ ಎಷ್ಟು ಎನ್ನುವುದು ಇಲ್ಲಿದೆ ನೋಡಿ.
ಐಪಿಎಲ್‌ನಲ್ಲಿ ಭಾಗವಹಿಸಿದ್ದ ಹತ್ತು ತಂಡಗಳ ಪೈಕಿ ಮೊದಲ ನಾಲ್ಕು ಸ್ಥಾನಗಳನ್ನು ಪಡೆದ ತಂಡಗಳಿಗೆ 46.5 ಕೋಟಿ ರೂ.ಗಳನ್ನು ಬಹುಮಾನವಾಗಿ ನೀಡಲು ಭಾರತೀಯ ಕ್ರಿಕಟ್ ಮಂಡಳಿ ಮೀಸಲಿಟ್ಟಿದೆ.
ವಿಜೇತ ತಂಡಕ್ಕೆ ಬರೋಬ್ಬರಿ 20 ಕೋಟಿ ರೂ. ಗಳನ್ನು ನೀಡಲಾಗುತ್ತಿದ್ದು, ರನ್ನರ್ ಅಪ್ ತಂಡಕ್ಕೆ 13 ಕೋಟಿ ರೂ. ಗಳನ್ನು ನೀಡಲಾಗುತ್ತಿದೆ. ಇನ್ನು ಈಗಾಗಲೇ ಮೂರನೇ ಸ್ಥಾನ ಪಡೆದಿರುವ ರಾಜಸ್ಥಾನ ರಾಯಲ್ಸ್ ತಂಡಕ್ಕೆ 7 ಕೋಟಿ ರೂ. ಮತ್ತು ನಾಲ್ಕನೇ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ 6.5 ಕೋಟಿ ರೂ.ಗಳನ್ನು ತನ್ನದಾಗಿಸಿಕೊಂಡಿದೆ.






















