Home Advertisement
Home ಸುದ್ದಿ ದೇಶ CJP ಎಂಟ್ರಿ: ಹೊಸ ‘ಪಕ್ಷ’ಕ್ಕೆ ನೆಟ್ಟಿಗರ ಭಾರೀ ಬೆಂಬಲ

CJP ಎಂಟ್ರಿ: ಹೊಸ ‘ಪಕ್ಷ’ಕ್ಕೆ ನೆಟ್ಟಿಗರ ಭಾರೀ ಬೆಂಬಲ

0
141

ಸಾಮಾಜಿಕ ಜಾಲತಾಣದಲ್ಲಿ ಹೊಸದೊಂದು ಸಂಚಲನ ಆರಂಭವಾಗಿದೆ. ಕಾಕ್ರೋಚ್ ಜನತಾ ಪಾರ್ಟಿ ಎಂಬ ಹೆಸರು ಸಾಮಾಜಿಕ ಜಾಲತಾಣವಷ್ಟೇ ಅಲ್ಲ ಇಡೀ ದೇಶದಲ್ಲಿಯೇ ದೊಡ್ಡ ಸದ್ದು ಮಾಡುತ್ತಿದೆ.

ಹೌದು… ಇತ್ತೀಚಿಗಷ್ಟೇ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ‘ನಿರುದ್ಯೋಗಿ ಯುವ ಜನತೆ ಜಿರಳೆಗಳಿದ್ದಂತೆ’ ಎಂದು ಹೇಳಿದ್ದರು.

ಈ ಮಾತನ್ನೇ ಅಸ್ತ್ರವಾಗಿ ಬಳಸಿಕೊಂಡ ಯುವಕರು ʻಕಾಕ್ರೋಚ್ ಜನತಾ ಪಾರ್ಟಿ’ ಎನ್ನುವ ಹೆಸರಿನಲ್ಲಿ ಹೊಸ ಪಕ್ಷವೊಂದನ್ನು ಹುಟ್ಟುಹಾಕಿದ್ದಾರೆ. ಈ ಪಕ್ಷಕ್ಕೆ ಈಗಾಗಲೇ ಲಕ್ಷಾಂತರ ಜನ ಸೇರ್ಪಡೆಗೊಂಡಿದ್ದು, ಜಾಲತಾಣದಲ್ಲಿ ಹೊಸ ಟ್ರೆಂಡ್ ಶುರು ಮಾಡಿದೆ.

30 ವರ್ಷದ ಅಭಿಜೀತ್ ದೀಪ್ಕೆ ಎನ್ನುವವರು ಈ ʻಕಾಕ್ರೋಚ್ ಜನತಾ ಪಾರ್ಟಿ’ ಹೆಸರಿನಲ್ಲಿ ಅಕೌಂಟ್‌ ಓಪನ್‌ ಮಾಡಿದ್ದು, ಇದು ಯುವಕರಿಂದ, ಯುವಕರಿಗಾಗಿ ಯುವಕರ ಪಕ್ಷ ಎಂದು ಹೇಳಿದ್ದಾರೆ.

ಈ ಪಕ್ಷಕ್ಕೆ ಸದಸ್ಯರಾಗಲು ನಿರುದ್ಯೋಗಿ, ಆನ್‌ಲೈನ್ ಬಳಕೆ, ವೃತ್ತಿಪರ ವಾಗ್ಮಿ ಮತ್ತು ಸೋಮಾರಿ ಆಗಿರಬೇಕು ಎಂದು ಪಕ್ಷದ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಮಾಡಲಾದ ಪೋಸ್ಟ್‌ಗಳಲ್ಲಿ ಹಾಸ್ಯಮಯವಾಗಿ ಹೇಳಲಾಗಿದೆ.

ಇಷ್ಟೇ ಅಲ್ಲದೇ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದ್ದು, ಒಂದು ವೇಳೆ ಸಿಜೆಪಿ ಪಕ್ಷವು ಅಧಿಕಾರಕ್ಕೆ ಬಂದಿದ್ದಲ್ಲಿ ಪ್ರಣಾಳಿಕೆಯಲ್ಲಿನ ಭರವಸೆ ಈಡೇರಿಸಲಾಗುವುದು ಎಂದು ಹೇಳಿದೆ.

  • ನಿವೃತ್ತಿಯ ಬಳಿಕ ಮುಖ್ಯ ನ್ಯಾಯಮೂರ್ತಿಗಳಿಗೆ ರಾಜ್ಯಸಭಾ ಸ್ಥಾನಗಳನ್ನು ನೀಡಬಾರದು.
  • ಸಿಂಧು ಮತಗಳನ್ನು ಡಿಲೀಟ್ ಮಾಡಿದ್ದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
  • ರಾಜಕೀಯದಲ್ಲಿ ಮಹಿಳೆಯರಿಗೆ ಶೇ. 50 ರಷ್ಟು ಮೀಸಲಾತಿ ನೀಡಲಾಗುವುದು.
  • ಪಕ್ಷಾಂತರ ಮಾಡುವ ಸಂಸದರು ಮತ್ತು ಶಾಸಕರಿಗೆ 20 ವರ್ಷಗಳ ಚುನಾವಣಾ ಸ್ಪರ್ಧಿಸಲು ಅವಕಾಶವಿಲ್ಲ.
  • ತಪ್ಪು ಮಾಹಿತಿ ಹರಡುವ ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.

ಸದ್ಯ ಇನ್‌ಸ್ಟಾಗ್ರಾಂ ಖಾತೆಯೊಂದರಲ್ಲಿಯೇ ಈಗಾಗಲೇ ಎರಡೂವರೆ ಲಕ್ಷಕ್ಕೂ ಅಧಿಕ ಜನ ಫಾಲೋವರ್ಸ್‌ ಆಗಿದ್ದರೆ, ಎಕ್ಸ್‌ ಖಾತೆಯಲ್ಲಿ 1 ಲಕ್ಷ 26 ಸಾವಿರಕ್ಕೂ ಹೆಚ್ಚು ಜನ ಈ ಸಿಜೆಪಿಗೆ ಫಾಲೋ ಮಾಡಲು ಶುರುಮಾಡಿದ್ದು, ಯುವಕರ ಪರ-ವಿರೋಧ ಸೇರಿದಂತೆ ಇನ್ನಿತರ ಚರ್ಚೆಗೆ ದೊಡ್ಡ ವೇದಿಕೆಯಾದಂತಾಗಿದೆ.