Home Advertisement
Home ನಮ್ಮ ಜಿಲ್ಲೆ ಧಾರವಾಡ ಚಾಕುವಿನಿಂದ ಇರಿದು ಅಣ್ಣನನ್ನೇ ಕೊಲೆಗೈದ ತಮ್ಮ

ಚಾಕುವಿನಿಂದ ಇರಿದು ಅಣ್ಣನನ್ನೇ ಕೊಲೆಗೈದ ತಮ್ಮ

0
4

ಧಾರವಾಡ: ಹುಟ್ಟಿ ಬೆಳೆಯುತ್ತ ಅಣ್ಣ ತಮ್ಮಂದಿರಾಗಿದ್ದು ಬೆಳೆದು ದಾಯಾದಿಗಳಾಗುತ್ತಾರೆ ಎನ್ನುವ ಮಾತಿನಂತೆ ಮನೆಗೆ ಹೋಗುವ ದಾರಿ ವಿಷಯವಾಗಿ ಸ್ವಂತ ಅಣ್ಣನನ್ನೇ ತಮ್ಮನೊಬ್ಬ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಇಲ್ಲಿಯ ಕರಡಿಗುಡ್ಡ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದೆ.

ಗ್ರಾಮದ ಮಲ್ಲಯ್ಯ ಚಿಕ್ಕಮಠ ಎಂಬಾತನೇ ಕೊಲೆಗೀಡಾಗಿದ್ದು, ಸಹೋದರ ಶ್ರೀಕಾಂತ ಚಿಕ್ಕಮಠ ಕೊಲೆ ಮಾಡಿದ್ದಾನೆ. ಈ ಇಬ್ಬರು ಸಹೋದರರು ಅಕ್ಕಪಕ್ಕದಲ್ಲಿಯೇ ಪ್ರತ್ಯೇಕ ಮನೆ ಮಾಡಿಕೊಂಡಿದ್ದರು. ಆದರೆ, ಇಬ್ಬರ ಮಧ್ಯೆ ಮೇಲಿಂದ ಮೇಲೆ ಮನೆಯ ದಾರಿ ವಿಚಾರವಾಗಿ ಕಲಹ ನಡೆಯುತ್ತಲೇ ಇತ್ತು.

ಸೋಮವಾರ ರಾತ್ರಿ ಪುನಃ ರಸ್ತೆ ವಿಷಯವಾಗಿ ಇಬ್ಬರ ಮಧ್ಯೆ ಜಗಳ ಶುರುವಾಗಿದೆ. ಆಗ ಅಣ್ಣ ಮಲ್ಲಯ್ಯ ಚಾಕುವಿನಿಂದ ಶ್ರೀಕಾಂತನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಶ್ರೀಕಾಂತ ಅದೇ ಚಾಕುವನ್ನು ಕಸಿದುಕೊಂಡು ಅಣ್ಣನಿಗೆ ಇರಿದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ಮಲ್ಲಯ್ಯ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ವಿಷಯ ತಿಳಿದ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಶ್ರೀಕಾಂತನನ್ನು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಭೇಟಿ ನೀಡಿ ಪರಿಶೀಲಿಸಿದ್ದಾರೆ.