ಜಯನಗರದ ಯುವಪಥದಲ್ಲಿ ಮೇ 11ರಿಂದ ಆರಂಭ; ಅನುಭವಾತ್ಮಕ ಕಲಿಕೆಗೆ ಆದ್ಯತೆ
ಬೆಂಗಳೂರು : ಮಕ್ಕಳಲ್ಲಿ ಇತಿಹಾಸದ ಬಗ್ಗೆ ಕುತೂಹಲ, ಸಾಂಸ್ಕೃತಿಕ ಅರಿವು ಹಾಗೂ ಸೃಜನಶೀಲತೆ ಬೆಳೆಸುವ ಉದ್ದೇಶದಿಂದ ಪರಮ್ ಹಿಸ್ಟರಿ ಸೆಂಟರ್ ವತಿಯಿಂದ ವಿಶೇಷ ಬೇಸಿಗೆ ಶಿಬಿರ ‘ಅನ್ವೇಷಣ 2026’ ಆಯೋಜಿಸಲಾಗಿದೆ. ಯುವಕ ಸಂಘ ಸಹಯೋಗದಲ್ಲಿ ನಡೆಯಲಿರುವ ಈ ಶಿಬಿರವು ಮೇ 11ರಿಂದ ಮೇ 17ರವರೆಗೆ ಯುವಪಥದಲ್ಲಿ ನಡೆಯಲಿದೆ.
6 ರಿಂದ 16 ವರ್ಷದ ಮಕ್ಕಳಿಗೆ ವಿನ್ಯಾಸಗೊಳಿಸಲಾದ ಈ ಶಿಬಿರವು, ಪಠ್ಯಪುಸ್ತಕದ ಮಿತಿಯನ್ನು ಮೀರಿ ಇತಿಹಾಸವನ್ನು ಅನುಭವಾತ್ಮಕವಾಗಿ ಕಲಿಸುವ ಉದ್ದೇಶ ಹೊಂದಿದೆ. ಮಕ್ಕಳಿಗೆ ಇತಿಹಾಸವನ್ನು ಕೇವಲ ಓದುವುದಲ್ಲ, ಅದನ್ನು ಸ್ಪರ್ಶಿಸಿ, ಅನುಭವಿಸಿ ತಿಳಿಯುವಂತಹ ಚಟುವಟಿಕೆಗಳನ್ನು ಇಲ್ಲಿ ರೂಪಿಸಲಾಗಿದೆ.
ಇತಿಹಾಸದೊಂದಿಗೆ ನೈಜ ಅನುಭವ : ‘ಅನ್ವೇಷಣ 2026’ ಶಿಬಿರದಲ್ಲಿ ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಇತಿಹಾಸವನ್ನು ರಂಜಕವಾಗಿ ಪರಿಚಯಿಸಲಾಗುತ್ತದೆ. ಪುರಾತತ್ವ ಉತ್ಖನನ (Archaeology Simulation): ಮಣ್ಣಿನ ಅಡಿಯಲ್ಲಿ ಅಡಗಿರುವ ವಸ್ತುಗಳನ್ನು ಅನ್ವೇಷಿಸುವ ನೈಜ ಅನುಭವ ಹಾಗೂ ಪ್ರಾಚೀನ ಕಲೆ ಮತ್ತು ಕರಕುಶಲ ಮೂಲಕ ಮಣ್ಣಿನ ಮಡಿಕೆ, ಹಳೆಯ ಆಭರಣಗಳ ತಯಾರಿಕೆ ಸೇರದಂತೆ ಕಾಲಯಾನದ ಕಥೆಗಳು ಹೇಳುವ ಮೂಲಕ ವೀರರ ದಂತಕಥೆಗಳನ್ನು ಕಥಾರೂಪದಲ್ಲಿ ಪರಿಚಯದ ಜೊತೆಗೆ ಡಿಜಿಟಲ್ ಪರಿಶೋಧನೆ ನೀಡಿ ಐತಿಹಾಸಿಕ ತಾಣಗಳ ವರ್ಚುವಲ್ ಟೂರ್ ಮಾಡಿಸುವದಲ್ಲದೆ ಮೋಜಿನ ಆಟಗಳು ಒಳಗೊಂಡಿದ್ದು ಇತಿಹಾಸದ ಅರಿವು ಮೂಡಿಸುವ ಕ್ರಿಯಾತ್ಮಕ ಆಟಗಳು ಈ ಚಟುವಟಿಕೆಗಳು ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವುದರ ಜೊತೆಗೆ, ಸೃಜನಾತ್ಮಕ ಚಿಂತನೆಗೆ ಉತ್ತೇಜನ ನೀಡುತ್ತವೆ.
ಸಮಯ ಮತ್ತು ಭಾಗವಹಿಸುವಿಕೆ : ಪ್ರತಿದಿನ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:20ರವರೆಗೆ ನಡೆಯುವ ಈ ಶಿಬಿರದಲ್ಲಿ ಮಕ್ಕಳು ಸಕ್ರಿಯವಾಗಿ ಪಾಲ್ಗೊಳ್ಳಬಹುದು. ಪೋಷಕರು ತಮ್ಮ ಮಕ್ಕಳಿಗೆ ಸಮೃದ್ಧ ಸಾಂಸ್ಕೃತಿಕ ಬುನಾದಿ ನೀಡಲು ಇದು ಉತ್ತಮ ಅವಕಾಶವಾಗಿದೆ.
ನೋಂದಣಿ ಮತ್ತು ಸಂಪರ್ಕ : ಶಿಬಿರದಲ್ಲಿ ಭಾಗವಹಿಸಲು ಆಸಕ್ತರು 9035034728 ದೂರವಾಣಿ ಮೂಲಕ ಅಥವಾ events@paramexp.org ವಿವರಗಳನ್ನು ಪಡೆಯಬಹುದು. ನೇರವಾಗಿ ಸಂಪರ್ಕಿಸಲು ಯುವಪಥ, ನಂ. 4, 31ನೇ ಕ್ರಾಸ್, 11ನೇ ಮೇನ್, 4ನೇ ಬ್ಲಾಕ್, ಜಯನಗರ, ಬೆಂಗಳೂರು ಬೇಟಿ ನೀಡಿ.
‘ಅನ್ವೇಷಣ 2026’ — ಆಡುತ್ತಾ, ಕಲಿಯುತ್ತಾ ಇತಿಹಾಸದ ದಂತಕಥೆಗಳನ್ನು ಅನ್ವೇಷಿಸುವ ಮಕ್ಕಳಿಗೆ ಒಂದು ಅಪೂರ್ವ ವೇದಿಕೆ!























