30 ಕ್ಷೇತ್ರಗಳ ಮತ ಎಣಿಕೆ ಜೋರಾಗಿ; AINRC ಮುಂಚೂಣಿ, ಬಿಜೆಪಿ–ಸ್ವತಂತ್ರರು ಉತ್ತಮ ಪ್ರದರ್ಶನ
ಪುದುಚೇರಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಭರದಿಂದ ಸಾಗುತ್ತಿದ್ದು, ರಾಜಕೀಯ ಚಿತ್ರಣ ದಿನದಿಂದ ದಿನಕ್ಕೆ ಸ್ಪಷ್ಟವಾಗುತ್ತಿದೆ. 30 ಸದಸ್ಯ ಬಲದ ವಿಧಾನಸಭೆಯಲ್ಲಿ ಹಾಲಿ ಮುಖ್ಯಮಂತ್ರಿ ಎನ್. ರಂಗಸಾಮಿ ತಮ್ಮ ತಟ್ಟಂಚವಾಡಿ ಕ್ಷೇತ್ರದಲ್ಲಿ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.
ಪ್ರಸ್ತುತ ಟ್ರೆಂಡ್‌ಗಳ ಪ್ರಕಾರ, ಎಐಎನ್‌ಆರ್‌ಸಿ 9 ಸ್ಥಾನಗಳಲ್ಲಿ ಗೆಲುವು ಸಾಧಿಸಿ, 1 ಸ್ಥಾನದಲ್ಲಿ ಮುನ್ನಡೆಯಲ್ಲಿದ್ದು, ಒಟ್ಟಾರೆ ಮುಂಚೂಣಿಯಲ್ಲಿದೆ. ಬಿಜೆಪಿ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿ, ಮತ್ತೊಂದು 2 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.
ಇನ್ನೊಂದೆಡೆ, ಸ್ವತಂತ್ರ ಅಭ್ಯರ್ಥಿಗಳು 3 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಗಮನ ಸೆಳೆದಿದ್ದಾರೆ. ಡಿಎಂಕೆ 1 ಸ್ಥಾನದಲ್ಲಿ ಗೆಲುವು ಸಾಧಿಸಿ, ಮತ್ತೊಂದು ಸ್ಥಾನದಲ್ಲಿ ಮುನ್ನಡೆಯಲ್ಲಿದೆ. ಕಾಂಗ್ರೆಸ್ ಹಾಗೂ ಎಐಎಡಿಎಂಕೆ ತಲಾ 1 ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ.
ಹಾಗೆಯೇ, ಎಲ್‌ಜೆಕೆ, ಎನ್‌ವೈಎಂಕೆ ಮತ್ತು ಟಿವಿಕೆ ತಲಾ 1 ಸ್ಥಾನದಲ್ಲಿ ಮುನ್ನಡೆ ಸಾಧಿಸಿವೆ.
ಒಟ್ಟು ಫಲಿತಾಂಶದ ದಿಕ್ಕು ನೋಡಿದರೆ, AINRC ಮತ್ತೆ ಅಧಿಕಾರಕ್ಕೆ ಮರಳುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಕೆಲವು ಕ್ಷೇತ್ರಗಳ ಅಂತಿಮ ಫಲಿತಾಂಶ ಬಾಕಿಯಿರುವುದರಿಂದ, ಅಂತಿಮ ರಾಜಕೀಯ ಸಮೀಕರಣಕ್ಕೆ ಇನ್ನೂ ಸಮಯ ಬೇಕಿದೆ.
ರಾಜಕೀಯವಾಗಿ ಮಹತ್ವದ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಈ ಬಾರಿ ಬಹುಪಕ್ಷೀಯ ಸ್ಪರ್ಧೆ ಕಂಡುಬಂದಿದ್ದು, ಅಂತಿಮ ಫಲಿತಾಂಶ ರಾಜ್ಯದ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.



















