Home Advertisement
Home ಸಿನಿ ಮಿಲ್ಸ್ ‘Toxic’ ಬದಲಿಗೆ ಜೂನ್ ಸ್ಲಾಟ್‌ಗೆ ‘ಮ್ಯಾಂಗೋ ಪಚ್ಚ’ ಎಂಟ್ರಿ

‘Toxic’ ಬದಲಿಗೆ ಜೂನ್ ಸ್ಲಾಟ್‌ಗೆ ‘ಮ್ಯಾಂಗೋ ಪಚ್ಚ’ ಎಂಟ್ರಿ

0
60

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್‌ ಅಭಿನಯದ ಬಹುನಿರೀಕ್ಷಿತ ಸಿನಿಮಾ ʼಟಾಕ್ಸಿಕ್’: A Fairy Tale for Grown-Ups ಮತ್ತೆ ಬಿಡುಗಡೆಯ ದಿನಾಂಕ ಬದಲಾವಣೆ ಕಂಡಿದ್ದು, ‘ಟಾಕ್ಸಿಕ್’ ಖಾಲಿ ಮಾಡಿದ ಸ್ಲಾಟ್‌ಗೆ ‘ಮ್ಯಾಂಗೋ ಪಚ್ಚ’ ಜಾಗ ತುಂಬಲು ಬರುತ್ತಿದೆ.

‘ಟಾಕ್ಸಿಕ್’ ಸಿನಿಮಾ ಮುಂದೂಡಿಕೆಯ ಹಿನ್ನೆಲೆ, ಜೂನ್ ಮೊದಲ ವಾರದ ಬಿಡುಗಡೆಯ ಸ್ಲಾಟ್ ಈಗ ‘ಮ್ಯಾಂಗೋ ಪಚ್ಚ’ ಸಿನಿಮಾಗೆ ಸಿಕ್ಕಿದೆ. ಈ ಚಿತ್ರ ಜೂನ್ 5ರಂದು ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಈ ಸಿನಿಮಾದಲ್ಲಿ ನಟ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ನಾಯಕನಾಗಿ ನಟಿಸಿದ್ದು, ಕಾಜಲ್ ಕುಂದರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ವಿವೇಕ್ ನಿರ್ದೇಶಿಸಿದ್ದು, ಇದು ಅವರ ಮೊದಲ ಸಿನಿಮಾ ಆಗಿದೆ.

ಕಥೆ ಮತ್ತು ತಂತ್ರಜ್ಞರ ಬಳಗ : ‘ಮ್ಯಾಂಗೋ ಪಚ್ಚ’ ಚಿತ್ರವು ಮೈಸೂರಿನ ಹಿನ್ನಲೆಯಲ್ಲಿ 2001ರಿಂದ 2011ರ ನಡುವೆ ನಡೆದ ಘಟನೆಗಳನ್ನು ಆಧರಿಸಿಕೊಂಡಿದೆ. ಚಿತ್ರದಲ್ಲಿ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಸಂಚಿತ್ ಸಂಜೀವ್ ಅವರ ಪಾತ್ರ ಈಗಾಗಲೇ ಗಮನ ಸೆಳೆದಿದೆ.

ಇನ್ನಿತರ ಕಲಾವಿದರು: ಈ ಸಿನಿಮಾದಲ್ಲಿ ವಿಜಯ ರಾಘವೇಂದ್ರ ಅವರ ಅಳಿಯ ಜೈ ಗೋಪಿನಾಥ್‌ ಅಭಿನಯಿಸಿದ್ದಾರೆ. ಭಾವನಾ, ಮಯೂರ್ ಪಟೇಲ್, ಹರಿಣಿ ಶ್ರೀಕಾಂತ್ ಹೀಗೆ ಇನ್ನು ಅನೇಕರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಶೇಖರ್ ಚಂದ್ರ ಛಾಯಾಗ್ರಹಣ ಮಾಡಿದ್ದು, ಚರಣ್ ರಾಜ್ ಸಂಗೀತ ನೀಡಿದ್ದಾರೆ.

‘ಲವ್ ಮಾಕ್ಟೇಲ್ 3’ ರಂತೆ ಬಿಗ್‌ ಹಿಟ್‌ ಆಗಲಿದೆ: ಗಮನಾರ್ಹವಾಗಿ, ಕಳೆದ ಬಾರಿ ‘ಟಾಕ್ಸಿಕ್’ ಸಿನಿಮಾ ಮುಂದೂಡಿಕೆಯಾದಾಗ, ಆ ಸ್ಲಾಟ್‌ಗೆ Love Mocktail 3 ಬಿಡುಗಡೆಯಾಗಿ ಯಶಸ್ಸು ಕಂಡಿತ್ತು. ಈಗ ಮತ್ತೊಮ್ಮೆ ಅದೇ ರೀತಿಯಲ್ಲಿ ಹೊಸ ಸಿನಿಮಾ ಅವಕಾಶ ಪಡೆದುಕೊಂಡಿದ್ದು ‘ಮ್ಯಾಂಗೋ ಪಚ್ಚ’ ಸಹ ಬಿಗ್‌ ಹಿಟ್‌ ಆಗಲಿದೆ ಎನ್ನಲಾಗುತ್ತಿದೆ.