ಬೆಂಗಳೂರು: ಸಾಯಿ ಸುದರ್ಶನ ಭರ್ಜರಿ ಶತಕದ ನೆರವಿನಿಂದಾಗಿ ಗುಜರಾತ್ ಟೈಟನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 206 ರನ್‌ಗಳ ಗೆಲುವಿನ ಗುರಿ ನೀಡಿದೆ.
ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಗುಜರಾತ್ ಟೈಟನ್ಸ್ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 205 ರನ್ ಗಳಿಸಿತು.
ಗುಜರಾತ್‌ಗೆ ಆರಂಭದಲ್ಲಿಯೇ ಉತ್ತಮ ಅಡಿಪಾಯ ಹಾಕಿದ ಆರಂಭಿಕ ಜೋಡಿ ಸಾಯಿ ಸುದರ್ಶನ ಮತ್ತು ಶುಭಮನ್ ಗಿಲ್ 12.4 ಓವರ್‌ಗಳಲ್ಲಿ 128 ರನ್ ಜತೆಯಾಟ ನಡೆಸಿತು.
ಸುಯಶ್ ಶರ್ಮಾ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಶುಭಮನ್ ಗಿಲ್ (32) ಔಟಾದರು. ಸಾಯಿ ಸುದರ್ಶನ ಕೇವಲ 58 ಎಸೆತದಲ್ಲಿ 11 ಬೌಂಡರಿ, 5 ಸಿಕ್ಸರ್ ನೆರವಿನಿಂದ 100 ರನ್ ಹೊಡೆದು ಹ್ಯಾಜಲ್‌ವುಡ್ ಎಸೆತದಲ್ಲಿ ಅವರಿಗೆ ಕ್ಯಾಚ್ ನೀಡಿ ಹೊರನಡೆದರು.
ಜೋಸ್ ಬಟ್ಲರ್ ಕೇವಲ 25 ರನ್ ಗಳಿಸಿ ಔಟಾದರು. ವಾಷಿಂಗ್ಟನ್ ಸುಂದರ್ ಅಜೇಯ 19 ಮತ್ತು ಜೇಸನ್ ಹೋಲ್ಡರ್ ಅಜೇಯ 23 ರನ್‌ಗಳ ಉಪಯುಕ್ತ ಕಾಣಿಕೆ ನೀಡಿ ತಂಡದ ಮೊತ್ತವನ್ನು ಹೆಚ್ಚಿಸಿದರು.
ಆರ್‌ಸಿಬಿ ಪರ ಭುವನೇಶ್ವರ್ ಕುಮಾರ್ 31ಕ್ಕೆ 1, ಸುಯಶ್ ಶರ್ಮಾ 36ಕ್ಕೆ 1 ಮತ್ತು ಜೋಶ್ ಹ್ಯಾಜಲ್‌ವುಡ್ 40ಕ್ಕೆ 1 ವಿಕೆಟ್ ಪಡೆದರು.























