Home Advertisement
Home ಸುದ್ದಿ ವಿದೇಶ 50 ವರ್ಷಗಳ ಬಳಿಕ ಚಂದ್ರಯಾನ: ಆರ್ಟೆಮಿಸ್ II ಐತಿಹಾಸಿಕ ಯಶಸ್ಸು

50 ವರ್ಷಗಳ ಬಳಿಕ ಚಂದ್ರಯಾನ: ಆರ್ಟೆಮಿಸ್ II ಐತಿಹಾಸಿಕ ಯಶಸ್ಸು

0
100

ವಾಷಿಂಗ್ಟನ್: ಸುಮಾರು ಐದು ದಶಕಗಳ ನಂತರ ಮಾನವ ಚಂದ್ರಯಾನಕ್ಕೆ ಹೊಸ ದಿಕ್ಕು ನೀಡಿದ NASA ಸಂಸ್ಥೆಯ ಮಹತ್ವಾಕಾಂಕ್ಷಿ Artemis II ಮಿಷನ್ ಯಶಸ್ವಿಯಾಗಿ ಪೂರ್ಣಗೊಂಡಿದೆ. 10 ದಿನಗಳ ಐತಿಹಾಸಿಕ ಚಂದ್ರ ಸುತ್ತಾಟದ ಬಳಿಕ ನಾಲ್ವರು ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ.

ಸುರಕ್ಷಿತ ಲ್ಯಾಂಡಿಂಗ್: ಓರಿಯನ್ ಬಾಹ್ಯಾಕಾಶ ನೌಕೆ ಪೆಸಿಫಿಕ್ ಮಹಾಸಾಗರದಲ್ಲಿ ಇಳಿಯಿತು. ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕರಾವಳಿಯ ಸಮೀಪ ಲ್ಯಾಂಡಿಂಗ್ ಆಗಿದ್ದು ಮುಂಜಾನೆ 5:37ರ ಸುಮಾರಿಗೆ ಯಶಸ್ವಿ ಸ್ಪ್ಲ್ಯಾಶ್‌ಡೌನ್ ಗಗನಯಾತ್ರಿಗಳು ಸುರಕ್ಷಿತವಾಗಿ ಕ್ಯಾಪ್ಸುಲ್‌ನಿಂದ ಹೊರಬಂದರು.

ಗಗನಯಾತ್ರಿಗಳ ತಂಡ: ಈ ಐತಿಹಾಸಿಕ ಮಿಷನ್‌ನಲ್ಲಿ ಕಮಾಂಡರ್ ರೀಡ್ ವೈಸ್‌ಮನ್, ಪೈಲಟ್ ವಿಕ್ಟರ್ ಗ್ಲೋವರ್, ಕ್ರಿಸ್ಟಿನಾ ಕೋಚ್ ಮತ್ತು ಕೆನಡಾದ ಜೆರೆಮಿ ಭಾಗವಹಿಸಿದ್ದರು.

ತಾಂತ್ರಿಕ ಸಾಧನೆ: ಈ ಮಿಷನ್‌ನಲ್ಲಿ ಬಳಸಿದ ತಂತ್ರಜ್ಞಾನ Orion spacecraft, Space Launch System ಇವು ಭವಿಷ್ಯದ ಮಿಷನ್‌ಗಳಿಗೆ ಪ್ರಮುಖ ಆಧಾರವಾಗಿದೆ. ಎಲ್ಲಾ ಗಗನಯಾತ್ರಿಗಳ ಆರೋಗ್ಯ ಸ್ಥಿತಿ ಉತ್ತಮವಾಗಿದೆ, ಡೇಟಾ ಸಂಗ್ರಹ ಮತ್ತು ವೈಜ್ಞಾನಿಕ ವಿಶ್ಲೇಷಣೆ ಪ್ರಾರಂಭವಾಗಿದ್ದು ಮುಂದಿನ ಮಿಷನ್‌ಗಳಿಗೆ ಪ್ರಮುಖ ಮಾಹಿತಿಯನ್ನು ಈ ಪ್ರಯಾಣ ಒದಗಿಸಿದೆ.

ಭವಿಷ್ಯದ ಗುರಿ: 2028ರೊಳಗೆ ಚಂದ್ರನ ಮೇಲೆ ಮಾನವರ ಇಳಿಕೆ ಗುರಿ ಹಾಗೂ Artemis IV ಸೇರಿದಂತೆ ಮುಂದಿನ ಮಿಷನ್‌ಗಳಿಗೆ ದಾರಿ ಹಾಗೂ ಮಂಗಳ ಗ್ರಹ ಮಾನವ ಮಿಷನ್‌ಗಳಿಗೂ ಅಡಿಪಾಯ ಆಗಲಿದೆ.