ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ವತಿಯಿಂದ ಗಡ್ಡ-ಮೀಸೆ ಸ್ಫರ್ಧೆಯನ್ನು ಎ. 11 ರಂದು ಸಂಜೆ 4.30ಕ್ಕೆ ನಗರದ ಸವಾಯಿ ಗಂಧರ್ವ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.
ಪುರುಷರ ಮಾನಸಿಕ ಆರೋಗ್ಯ ಮತ್ತು ಕ್ಯಾನ್ಸರ್ ಕುರಿತು ಜಾಗೃತಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ವಿಜೇತ ಮಿಸ್ಟರ್ ಬಿಯರ್ಡ್‌ಗೆ 15 ಸಾವಿರ ರೂ ಬಹುಮಾನ ರನ್ನರ್ ಆಪ್‌ಗೆ 10 ಸಾವಿರ ಬಹುಮಾನ ಸೇರಿದಂತೆ ಸಾಲ್ಟ್ ಮತ್ತು ಪೆಪ್ಪರ್ ಲುಕ್, ಬೆಸ್ಟ್ ಮೀಸೆ, ಬೆಸ್ಟ್ ಸ್ಟೆಲ್ಡ ಬಿಯರ್ಡ್, ಬೆಸ್ಟ್ ಫುಲ್ ಬಿಯರ್ಡ್ ಮತ್ತು ಬಿಯರ್ಡ್ ರೂಕಿ ಪ್ರಶಸ್ತಿ ನೀಡಲಾಗುವುದು.
ಇದಕ್ಕೂ ಮುನ್ನ ಎ. 10 ರಂದು ಸಂಜೆ 5.30ಕ್ಕೆ ಇನಾರ್ಬಿಟ್ ಮಾಲ್‌ನಲ್ಲಿ ಗಡ್ಡದ ವಿನ್ಯಾಸ ಮತ್ತು ಅಂದಗೊಳಿಸುವ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಗಳಾಗಿ ಪ್ರಸಿದ್ಧ ಗಡ್ಡ ಮತ್ತು ಮೀಸೆ ಐಕಾನ್, ಪ್ಯಾಷನ್ ನೃತ್ಯ ಸಂಯೋಜಕ ರೂಪದರ್ಶಿ ಪರಾಸ್ ರಾಥೋಡ್ ಮತ್ತು ಮಿಸ್ ಯುನಿವರ್ಸ್ ಪೆಟೈಟ್ ಶೃತಿ ಹೆಗ್ಡೆ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.






















