Home Advertisement
Home ನಮ್ಮ ಜಿಲ್ಲೆ ಚಿಕ್ಕಮಗಳೂರು ಚಿಕ್ಕಮಗಳೂರು: 10 ದಿನ ಪತಿಯ ಶವದ ಜೊತೆ ಪತ್ನಿ…

ಚಿಕ್ಕಮಗಳೂರು: 10 ದಿನ ಪತಿಯ ಶವದ ಜೊತೆ ಪತ್ನಿ…

0
152

ಚಿಕ್ಕಮಗಳೂರು: ಜಿಲ್ಲೆಯ ಬಣಕಲ್ ಪಟ್ಟಣದಲ್ಲಿ ಮಾನವೀಯತೆಯನ್ನೇ ಕಲುಕುವ ಘಟನೆ ಬೆಳಕಿಗೆ ಬಂದಿದೆ. ವೃದ್ಧ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರೂ, ಅವರ ಮಾನಸಿಕ ಅಸ್ವಸ್ಥ ಪತ್ನಿ ಸುಮಾರು ಹತ್ತು ದಿನಗಳ ಕಾಲ ಮೃತದೇಹದ ಜೊತೆಗೇ ಕಳೆದಿರುವುದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ಸುಭಾಷ್ ನಗರ ನಿವಾಸಿ 77 ವರ್ಷದ ಸಿರಿಲ್ ಮೋನಿಸ್ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಅವರು ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದ ನಂತರ ಪುತ್ರ ಬೆಂಗಳೂರುಗೆ ಮರಳಿದ್ದರು.

ಪತ್ನಿ ಸಿಸಿಲ್ ಮಾನಸಿಕ ಅಸ್ವಸ್ಥರಾಗಿದ್ದರಿಂದ, ಪುತ್ರ ಮೆಲ್ವಿನ್ ಆಗಾಗ ಕರೆ ಮಾಡಿ ತಂದೆಯ ಆರೋಗ್ಯ ವಿಚಾರಿಸುತ್ತಿದ್ದರು. ಪ್ರತೀ ಬಾರಿ “ಆರೋಗ್ಯವಾಗಿದ್ದಾರೆ” ಎಂಬ ಉತ್ತರ ಬಂದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಯಾವುದೇ ಅನುಮಾನ ವ್ಯಕ್ತಪಡಿಸಿರಲಿಲ್ಲ.

ಆದರೆ ವಾಸ್ತವದಲ್ಲಿ, ಸಿರಿಲ್ ಮೋನಿಸ್ ಸುಮಾರು ಹತ್ತು ದಿನಗಳ ಹಿಂದೆಯೇ ಮೃತಪಟ್ಟಿದ್ದರು. ಪತ್ನಿಯ ಮಾನಸಿಕ ಸ್ಥಿತಿಯಿಂದಾಗಿ ಈ ಸಂಗತಿ ಅವರಿಗೆ ಅರಿವಾಗದೇ, ಮೃತದೇಹದ ಜೊತೆಯಲ್ಲೇ ದಿನಗಳನ್ನು ಕಳೆದಿದ್ದಾರೆ ಎನ್ನುವುದು ತಿಳಿದುಬಂದಿದೆ.

ಈ ನಡುವೆ ಪುತ್ರನಿಗೆ ಅನುಮಾನ ಉಂಟಾಗಿ ತನ್ನ ಸ್ನೇಹಿತನನ್ನು ಮನೆಗೆ ಕಳುಹಿಸಿದಾಗ ಘಟನೆ ಬಹಿರಂಗವಾಗಿದೆ. ಮನೆಯೊಳಗಿನಿಂದ ದುರ್ವಾಸನೆ ಬರುತ್ತಿದ್ದ ಕಾರಣ ಅಕ್ಕಪಕ್ಕದ ನಿವಾಸಿಗಳಿಗೂ ವಿಷಯ ತಿಳಿದುಬಂದಿದೆ.

ತಕ್ಷಣ ಸಾಮಾಜಿಕ ಕಾರ್ಯಕರ್ತ ಆರಿಫ್ ಅವರ ಸಹಕಾರದಿಂದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಬಣಕಲ್ ಕ್ರೈಸ್ತರ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.