ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, ಪತಿ ರೋಷನ್ ಮೊದಲ ಪರಿಚಯ ಮತ್ತು ಕಾಫಿ ಡೇಟ್ ಕುರಿತ ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹಾಗೇ ಅನುಶ್ರೀ ಪ್ರೀತಿಯಲ್ಲಿ ಬಿಳಲು ಕಾರಣವೇನು? ಮತ್ತು ಹೇಗೆ ಯಾವತ್ತು ರೋಷನ್‌ನ್ನು ನೋಡಿದ್ದು? ಇದೇಲ್ಲದರ ಬಗ್ಗೆ ಮುಕ್ತವಾಗಿ, ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
ಅನುಶ್ರೀ ಹೇಳುದ ಪ್ರಕಾರ, ಸಂಗಾತಿ ರೋಷನ್‌ನ್ನು ಮೊದಲು ಭೇಟಿ ಮಾಡಿದ್ದು ಹೊಸಪೇಟೆಯಲ್ಲಿ, ಹಾಗೇ ಅವತ್ತು ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ಮೂಲಕ ಇವರಿಬ್ಬರಿಗೂ ಪರಿಚಯವಾಗಿತ್ತು. ಆರಂಭದಲ್ಲಿ ಕೇವಲ ಹಾಯ್-ಬೈ ಮಟ್ಟದಲ್ಲಿದ್ದ ಈ ಪರಿಚಯ, ಒಂದು ಫೋಟೋ ಶೇರ್ ಮಾಡುವ ಸಂದರ್ಭದಲ್ಲೇ ಮುಂದುವರಿದಿತ್ತು. ರೋಷನ್ ನಂಬರ್ ಕೇಳಿದಾಗ ಅನುಶ್ರೀ ನೀಡದೇ, ಏರ್‌ಡ್ರಾಪ್ ಮೂಲಕ ಕಳುಹಿಸಲು ಹೇಳಿ ನಂಬರ್ ಕೊಡದೇ ಸತಾಯಿಸಿದ್ರಂತೆ. ನಂತರ ಈ ಘಟನೆಯನ್ನು ಕೂಡ ಅವರು ನೆನಪಿಸಿಕೊಂಡು ಲವ್ ಜರ್ನಿ ಮತ್ತು ನನ್ನ ದಾರಿಯಲ್ಲಿ ಹೊಸ ಬೆಳಕಿನ ಮಿಟ್ ಅಂದೆ ಆಗಿತ್ತು ಎಂದರು.
ನಂತರ ರೋಷನ್ ಕಾಫಿಗೆ ಆಹ್ವಾನಿಸಿದಾಗ, ಅನುಶ್ರೀಗೆ ಸ್ವಲ್ಪ ಭಯವೂ ಉಂಟಾಗಿತ್ತಂತೆ. ಇದೇ ವಿಚಾರವನ್ನು ನಟ ರಾಜ್ ಬಿ ಶೆಟ್ಟಿ ಹತ್ತಿರವು ಹೇಳಿಕೊಂಡಿದರಂತೆ. ಆಗ ರಾಜ್ ಬಿ ಶೆಟ್ಟಿ ಮತ್ತು ಚೈತ್ರಾ ಜೆ ಆಚಾರ್ ಇಬ್ಬರು ಪ್ರೋತ್ಸಾಹದಿಂದ ಅನುಶ್ರೀ ಆ ಆಹ್ವಾನವನ್ನು ಸ್ವೀಕರಿಸಿದರು.
ಬಳಿಕ ಬೆಂಗಳೂರಿನ ಒರಾಯನ್ ಮಾಲ್‌ನ ಕಫೆಯಲ್ಲಿ ಇವರ ಮೊದಲ ಕಾಫಿ ಮೀಟ್ ನಡೆದಿದೆ. ಮೊದಲ ಭೇಟಿಯಲ್ಲೇ ಸುಮಾರು ನಾಲ್ಕೂವರೆ ಗಂಟೆಗಳ ಕಾಲ ಮಾತನಾಡಿಕೊಂಡಿದ್ದು, ಈ ವೇಳೆ ರೋಷನ್‌ನ ಸರಳ ಸ್ವಭಾವ ಅನುಶ್ರೀಗೆ ಇಷ್ಟವಾಗಿದೆ.
ಈ ಸ್ನೇಹ ಬಳಿಕ ಪ್ರೀತಿಯಾಗಿ ಬೆಳೆಯುತ್ತ, ಇಬ್ಬರೂ ಸುಮಾರು ಎರಡು ವರ್ಷಗಳ ಕಾಲ ಡೇಟಿಂಗ್ ನಡೆಸಿ, ಅಂತಿಮವಾಗಿ ಮದುವೆಯಾಗಿದ್ದಾರೆ. ಸರಳ ಪರಿಚಯದಿಂದ ಆರಂಭವಾದ ಈ ಸಂಬಂಧ, ಇಂದು ಯಶಸ್ವಿ ದಾಂಪತ್ಯವಾಗಿ ಪರಿಣಮಿಸಿದೆ.
ಒಟ್ಟಾರೆ.. ಕಿರುತೆರೆಯಲ್ಲಿ ಆ್ಯಂಕರ್ ಅನುಶ್ರೀ ಎಂದೇ ಖ್ಯಾತಿ ಗಳಿಸಿ, ಎಲ್ಲರ ಮನವನ್ನ ಮಾತುಗಳಿಂದಲೇ ತಣಿಸಿ ಎಲ್ಲರನ್ನು ತನ್ನವರೆಂದು ಸ್ವಾಗತಿಸುತ್ತಿದ್ರು. ಈಗ ಮದುವೆಯಾಗಿ ಹೊಸಜೀವನದ ಆರಂಭದ ಖುಷಿಯಾಗಿದ್ದಾರೆ.























