Home Advertisement
Home ನಮ್ಮ ಜಿಲ್ಲೆ ದಾವಣಗೆರೆ ದಾವಣಗೆರೆ ಬೈಎಲೆಕ್ಷನ್ ಫೈಟ್: ಜಮೀರ್ ಅಹ್ಮದ್ ಎಂಟ್ರಿ ಕೊಟ್ಟ ಮೇಲೆ ಹೊಸ ಸಂದೇಶ; ಯಾರು ಗೆಲ್ತಾರೆ?

ದಾವಣಗೆರೆ ಬೈಎಲೆಕ್ಷನ್ ಫೈಟ್: ಜಮೀರ್ ಅಹ್ಮದ್ ಎಂಟ್ರಿ ಕೊಟ್ಟ ಮೇಲೆ ಹೊಸ ಸಂದೇಶ; ಯಾರು ಗೆಲ್ತಾರೆ?

0
35

ದಾವಣಗೆರೆ ಉಪಚುನಾವಣೆ ಕಣ ದಿನದಿಂದ ದಿನಕ್ಕೆ ರೋಚಕ ಹಂತ ತಲುಪುತ್ತಿದೆ. ಇಂತಹ ಸಮಯದಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡದೆ ಕಾಂಗ್ರೆಸ್ ಮುಸ್ಲಿಂ ಸಮುದಾಯವನ್ನು ನಿರ್ಲಕ್ಷಿಸಿದೆ ಎಂದು ಅಸಮಾಧಾನಗೊಂಡಿದ್ದ ಸಚಿವ ಜಮೀರ್ ಅಹ್ಮದ್ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ವಿಶೇಷವಾಗಿ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಪ್ರಚಾರಕ್ಕೆ ಬರದೇ ದೂರ ಉಳಿದಿದ್ದ ಜಮೀರ್ ಅಹ್ಮದ್ ಖಾನ್ ಅಂತಿಮವಾಗಿ ಭಾನುವಾರ ದಾವಣಗೆರೆ ಕ್ಷೇತ್ರದ ಪ್ರಚಾರ ಅಖಾಡಕ್ಕೆ ಆಗಮಿಸಿದ್ದಾರೆ. ಇನ್ನು ಈ ವಿಷಯ ಕಾರ್ಯಕರ್ತರಲ್ಲಿ ಸಂಚಲ ಮೂಡಿಸಿದೆ.

ಅಷ್ಟೇ ಅಲ್ಲ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡದ ಕಾರಣ ಎಸ್. ಎಸ್. ಮಲ್ಲಿಕಾರ್ಜುನ್ ಮೇಲೆ ಮುನಿಸಿಕೊಡಿದ್ದ ಜಮೀರ್ ಅಹ್ಮದ್, ಸಿದ್ದರಾಮಯ್ಯ ಅವರ ಮಾತಿಗೆ ಮನ್ನಣೆ ಕೊಟ್ಟು ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಕಾಲಿಟ್ಟ ಜಮೀರ್ ಗೆ ಅಲ್ಲಿನ ಮುಸ್ಲಿಂ ಸಮುದಾಯದ ಮುಖಂಡರು, ಕಾರ್ಯಕರ್ತರು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. ಈ ಸಮಯದಲ್ಲಿ ಪೊಲೀಸರು ಕಿಕ್ಕಿರಿದು ತುಂಬಿದ್ದ ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಬಳಿಕ ಎಸ್. ಎಸ್. ಮಲ್ಲಿಕಾರ್ಜುನ್ ಅವರ ನಿವಾಸಕ್ಕೆ ತೆರಳಿದ ಜಮೀರ್ ಅವರನ್ನು ಮಲ್ಲಿಕಾರ್ಜುನ್ ಅವರೇ ಸ್ವಾಗತಿಸಿ ಪರಸ್ಪರ ಒಬ್ಬರನ್ನೊಬ್ಬರು ಅಪ್ಪಿಕೊಂಡು ಮಾತನಾಡಿದ್ದು ವಿಶೇಷವಾಗಿತ್ತು.

ಇನ್ನು ಮಾಧ್ಯಮದವರ ಜೊತೆಗೆ ಮಾತನಾಡಿದ ಜಮೀರ್ ಅಹ್ಮದ್ ನಮ್ಮಿಬ್ಬರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಯಾವುದೇ ಮುನಿಸು ಇಲ್ಲ. ಹೈಕಮಾಂಡ್ ಕೇರಳ ಸಾರ್ವತ್ರಿಕ ಚುನಾವಣೆಯ ಜವಾಬ್ದಾರಿ ನೀಡಿದ್ದರಿಂದ ನಾನು ಇಲ್ಲಿ ಪ್ರಚಾರ ಮಾಡಲು ಬರುವುದಕ್ಕೆ ಆಗಲಿಲ್ಲ. ಹೀಗಾಗಿ ಈ ಸಮಯದಲ್ಲಿ ಯಾವುದೇ ಊಹಾಪೋಹಗಳು ಬೇಡ. ಇವತ್ತು ನಮ್ಮ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ಪರ ಮತಯಾಚಿಸುತ್ತೇನೆ. ನಾಳೆ ಎರಡು ದಿವಸ ಬಾಗಲಕೋಟೆಗೆ ಹೋಗುತ್ತೇನೆ. ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿಗಳು 100ಕ್ಕೆ 100ರಷ್ಟು ಗೆಲ್ಲುತ್ತಾರೆ ಎನ್ನುವ ಮೂಲಕ ಅಲ್ಪಸಂಖ್ಯಾತರಲ್ಲಿ ಇದ್ದ ಗೊಂದಲಕ್ಕೆ ತೆರೆ ಎಳೆದರು.

ಒಟ್ಟಿನಲ್ಲಿ ಇಷ್ಟೆಲ್ಲಾ ಬೆಳವಣಿಗೆ ಅದಮೇಲೂ ಕೂಡ ಅಲ್ಪಸಂಖ್ಯಾತರ ಒಲವು ಯಾರ ಕಡೆಗೆ ಅನ್ನುವುದು ಇನ್ನು ಮೂರು ದಿನಗಳವರೆಗೆ ಕಾದುನೋಡಬೇಕಿದೆ.